• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರದ ಯಥಾಸ್ಥಿತಿ ಬದಲಿಗೆ ಪಾಕ್ ಯತ್ನ: ಭಯೋತ್ಪಾದಕರ ನೆರವು

|

ವಾಷಿಂಗ್ಟನ್, ಸೆಪ್ಟೆಂಬರ್ 22: ಜಮ್ಮು ಮತ್ತು ಕಾಶ್ಮೀರದ ಯಥಾಸ್ಥಿತಿ ಬದಲಿಗೆ ಪಾಕಿಸ್ತಾನವು ಯತ್ನಿಸುತ್ತಿದೆ, ಭಯೋತ್ಪಾದಕರ ನೆರವನ್ನು ಕೂಡ ಪಡೆಯಲಾಗುತ್ತಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲದ ರಾಜತಾಂತ್ರಿಕರೊಬ್ಬರು ಅಮೆರಿಕದ ಜನಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಕಾಶ್ಮೀರಿಗಳು ಮತ್ತು ಭಾರತ ಸರ್ಕಾರ ಗಡಿ ಭದ್ರತೆ ಮತ್ತು ಭಯೋತ್ಪಾದನೆ ಕುರಿತು ಕಠಿಣ ಸವಾಲನ್ನು ಎದುರಿಸುತ್ತಿದೆ ಎಂದು ಐರೆಸ್‌ ಹೇಳಿದ್ದಾರೆ.

ಉಗ್ರರಿಗೆ ವಿಐಪಿ ಭದ್ರತೆ, ಪಾಕಿಸ್ತಾನದಿಂದ ಸ್ಫೋಟಕ ಮಾಹಿತಿ

ಎರಡು ದಶಕಗಳಿಂದ ಶಾಂತಿ ಕಾಪಾಡುವ ಎಲ್ಲ ಪ್ರಯತ್ನಗಳನ್ನು ಭಯೋತ್ಪಾದನೆ ಹಾಳು ಮಾಡುವ ಜತೆಗೆ ಜನರಲ್ಲಿ ಅಭದ್ರತೆಯನ್ನೂ ಸೃಷ್ಟಿಸಿದೆ, ಜತೆಗೆ ಅಲ್ಲಿನ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡುವುದೇ ಅವರ ಉಪಾಯವಾಗಿದೆ.

ಅಲ್ಲಿ ಶಾಂತಿ ಕಾಪಾಡುವ ಪ್ರಯತ್ನಕ್ಕೆ ಪಾಕಿಸ್ತಾನದ ಈ ಪ್ರಯತ್ನ ಧಕ್ಕೆ ತರುತ್ತಿದೆ. ಅಲ್ಲದೆ, ಮಾನವ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಹಿರಿಯ ಸಹವರ್ತಿ ಅಲಿಸಾ ಐರೆಸ್‌ ಅವರು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿ, ಏಷ್ಯಾದ ಉಪ ಸಮಿತಿ ಮತ್ತು ಪೆಸಿಫಿಕ್‌ ಮತ್ತು ನಾನ್‌ ಪ್ರೊಲಿಫಿರೇಷನ್‌ಗೆ ನೀಡಿರುವ ಹೇಳಿಕೆಯಲ್ಲಿ ಈ ಕುರಿತು ತಿಳಿಸಿದ್ದಾರೆ.

ಪಾಕ್‌ನ ಇಂಥ ಕೃತ್ಯಗಳಿಂದಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.ಕಾಶ್ಮೀರಿ ಪಂಡಿತರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ, 1990ರ ಸಮಯದಲ್ಲಿ ಹಿಂದೂಗಳ ಜಮೀನುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

English summary
Pakistan has used terrorist groups to change the status quo in Jammu and Kashmir, which has undermined every peace effort and impacted human rights negatively, a Barrack Obama-era diplomat has told US lawmakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X