ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಐಎಸ್‌ಐಎಸ್‌ ಉಗ್ರರಿಗೆ ಸ್ವರ್ಗವಾಗುತ್ತಿದೆ ಪಾಕಿಸ್ತಾನ'

|
Google Oneindia Kannada News

ವಾಷಿಂಗ್ಟನ್, ಮೇ 8: ಸಿರಿಯಾ ಹಾಗೂ ಇರಾಕ್‌ನಲ್ಲಿ ಐಸಿಸ್ ನೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ತನ್ನ ಪ್ರಮುಖ ನಿರ್ವಹಣಾ ಕೇಂದ್ರವನ್ನಾಗಿ ಮಾಡಿಕೊಳ್ಳಲು ಐಸಿಸ್ ಹವಣಿಸುತ್ತಿದೆ ಎಂದು ಅಮೆರಿಕ ಸೇನೆಯ ನಿವೃತ್ತ ಹಿರಿಯ ಅಧಿಕಾರಿ ಲಾರೆನ್ಸ್ ಸೆಲ್ಲಿನ್ ಎಚ್ಚರಿಸಿದ್ದಾರೆ.

ಐಸಿಸ್ ಮೂಲ ಹುಟ್ಟಿಕೊಂಡಿದ್ದೇ ಪಾಕಿಸ್ತಾನದಲ್ಲಿ ಈಗ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಅಫಘಾನಿಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಪಾಕಿಸ್ತಾನಿ ತಾಲಿಬಾನ್ ಹಾಗೂ ತೆಹರಿಕೆ ತಾಲಿಬಾನ್ ಪಾಕಿಸ್ತಾನ್ ಸಂಘಟನೆಗಳ ಸದಸ್ಯರು, ನಿರಾಶ್ರಿತರ ಹೆಸರಿನಲ್ಲಿ ಪಾಕಿಸ್ತಾನದಿಂದ ಅಫಘಾನಿಸ್ಥಾನಕ್ಕೆ ಗುಳೆ ಹೋಗಿದ್ದಾರೆ.

ಇದೇ ನಿರಾಶ್ರಿತರು ಐಸಿಸ್ ಹುಟ್ಟುಹಾಕಲು ಕಾರಣವಾಗಿದ್ದರು. ಸಿರಿಯಾ ಹಾಗೂ ಇರಾಕ್‌ಗೆ ಹೋಗಿ ಐಸಿಸ್ ಆರಂಭಿಸಿದ್ದರು. ಆದರೆ 2013ರಿಂದ ಇವರು ಪಾಕಿಸ್ತಾನ ಹಾಗೂ ಅಫಘಾನಿಸ್ಥಾನದತ್ತ ಮರಳಲು ಆರಂಭಿಸಿದ್ದಾರೆ.

 Pakistan turns into heaven for ISIS

ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಳ್ಳುವ ಅಫಘಾನಿಸ್ಥಾನದ ಕೊರಾಸನ್ ವಲಯದ ಐಸಿಸ್ ಮುಖ್ಯಸ್ಥನನ್ನಾಗಿ ತೆಹರಿಕೆ ಪಾಕಿಸ್ತಾನ ತಾಲಿಬಾನ್ ಸಂಘಟನೆ ಕಮಾಂಡರ್ ಹಫೀಸ್ ಸಯೀದ್ ಖಾನ್‌ನನ್ನು ಐಸಿಸ್ ಮುಖ್ಯಸ್ಥ ಎಂದು ಘೋಷಿಸಲಾಗಿತ್ತು.

ಇದರ ಪ್ರಮುಖ 12 ಸದಸ್ಯರಲ್ಲಿ 9 ಮಂದಿ ಪಾಕಿಸ್ತಾನದವರಿದ್ದಾರೆ. ಅಫಘಾನಿಸ್ಥಾನ ಹಾಗೂ ದಕ್ಷಿಣ ಏಷ್ಯಾಗೆ ದೊಡ್ಡ ಆತಂಕವಾಗಿ ಪರಿಣಮಿಸಿದೆ. ಐಸಿಸ್ ಕುರಿತಂತೆ ಪಾಕಿಸ್ತಾನದ ನಿರ್ಲಕ್ಷ್ಯ ಹಾಗೂ ನೀತಿಯೇ ಗಡಿಯಲ್ಲಿ ಈ ಸಂಘಟನೆ ಬೇರು ಬಿಡಲು ಕಾರಣವಾಗುತ್ತಿದೆ.

ಏತನ್ಮಧ್ಯೆ ಪಶ್ಚಿಮ ಬಲೂಚಿಸ್ಥಾನದಲ್ಲಿ ಲಷ್ಕರೆ ಖುರೆಸಾನ್ , ಪಾಕಿಸ್ತಾನದಲ್ಲಿ ಅಹಲೆ ಹದಿತ್, ಜೈಷ್-ಅಲ್-ಆದಿಲ್ ಸಂಘಟನೆ ಹೆಸರಲ್ಲೂ ಐಸಿಸ್ ಕೆಲಸ ಮಾಡುತ್ತಿವೆ.

ಇವರು ಪಾಕಿಸ್ತಾನ, ಅಫಘಾನಿಸ್ಥಾನ ಗಡಿಯಲ್ಲಿ ಉಗ್ರರ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ. ಅಫಘಾನಿಸ್ಥಾನದಲ್ಲಿ ಐಸಿಸ್ ಪ್ರಭಾವವನ್ನು ಅಮೆರಿಕ ನೇತೃತ್ವದ ಸೇನೆ ನಿರ್ಲಕ್ಷಿಸಿದೆ.

ಪರಿಣಾಮವಾಗಿ ಸೇನೆಯನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ. ಭವಿಷ್ಯದಲ್ಲಿ ಪಾಕಿಸ್ತಾನ, ಅಫಘಾನಿಸ್ಥಾನ ಹಾಗೂ ದಕ್ಷಿಣ ಏಷ್ಯಾದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಲಾರೆನ್ಸ್ ಎಚ್ಚರಿಸಿದ್ದಾರೆ.

English summary
United states veteran has warned about the explosive potential Islamic state influence in Pakistan. Which he believes only accelerate the Islamic states influence in the Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X