ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜೂನ್ 13: "ಪುಲ್ವಾಮಾ ಘಟನೆಯ ನಂತರ ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿರಬಹುದು. ಆದರೆ ಅದು ಯಾವುದಕ್ಕೂ ಸಾಲದು" ಎಂದು ಅಮೆರಿಕ ಹೇಳಿದೆ.

ಇಂದಿಗೂ ಲಷ್ಕರ್ ಇ ತೊಯಿಬಾ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಗಳು ಅಂತಾರಾಷ್ಟ್ರೀಯ ಶಾಂತಿಗೆ ಮಾರಕವಾಗಿವೆ ಎಂದು ಕೇಂದ್ರ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ಹಿರಿಯ ಸ್ಟೇಟ್ ಡಿಪಾರ್ಟಮೆಂಟ್ ಅಧಿಕಾರಿ ಅಲಿಸ್ ಜಿ ವೆಲ್ಸ್ ಹೇಳಿದ್ದಾರೆ.

"ಭಾರತದ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಲವತ್ತು ಯೋಧರ ಸಾವಿಗೆ ಕಾರಣವಾದ ಉಗ್ರದಾಳಿಯ ನಂತರ ಪಾಕಿಸ್ತಾನ ಉಗ್ರರ ದಮನಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಅವು ತಾತ್ಕಾಲಿನ ಕ್ರಮಗಳಷ್ಟೆ. ಅವನ್ನು ಮುಂದುವರಿಸಲು ಪಾಕಿಸ್ತಾನ ಹೋಗಲಿಲ್ಲ. ಲಷ್ಕರ್ ಇ ತೊಯಿಬಾ ಮತ್ತುಜೆಇಎಂ ಉಗ್ರರು ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ಓಡಾಡುತ್ತಿದದ್ದಾರೆ" ಎಂದು ಅವರು ದೂರಿದರು.

Pakistan does not put necessary steps to fight terrorism: US

"ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾದರೆ ಅದಕ್ಕೆ ನಮ್ಮೆಲ್ಲರ ಸಹಕಾರ ಇದ್ದೇ ಇದೆ" ಎಂದು ಅವರು ಹೇಳಿದರು.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

English summary
Pakistan hs taken some major steps against terror groups after Pulwama attack, But its efforts are not enough US top official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X