ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸ್ಫೋಟದ ಅಪರಾಧಿಗೆ ಪಾಕ್‌ನಲ್ಲಿ 5 ಸ್ಟಾರ್ ಆತಿಥ್ಯ: ಭಾರತ

|
Google Oneindia Kannada News

ನ್ಯೂಯಾರ್ಕ್, ಜನವರಿ 19: 1993ರಲ್ಲಿ ಮುಂಬೈನಲ್ಲಿ ನಡೆದ ಭಾರಿ ಬಾಂಬ್ ಸ್ಫೋಟದ ಅಪರಾಧಿಗೆ ಪಾಕಿಸ್ತಾನವು ಫೈವ್‌ ಸ್ಟಾರ್‌ ಆತಿಥ್ಯ ನೀಡಿದೆ ಎಂದು ಭಾರತ ಹೇಳಿದೆ.

ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನ-2022ರ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಗುರುತಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

1993 ಮುಂಬೈ ಸ್ಫೋಟದಿಂದ ಶಿಕ್ಷೆಯವರೆಗೆ : ಟೈಮ್ ಲೈನ್1993 ಮುಂಬೈ ಸ್ಫೋಟದಿಂದ ಶಿಕ್ಷೆಯವರೆಗೆ : ಟೈಮ್ ಲೈನ್

ಸ್ಫೋಟಕ್ಕೆ ಕ್ರೈಮ್‌ ಸಿಂಡಿಕೇಟ್‌ ಕಾರಣ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಸ್ಪಷ್ಪಡಿಸಿದೆ. ಆ ಮೂಲಕ ದಾವೂದ್‌ ಇಬ್ರಾಹಿಂ ಪಾಕ್‌ನಲ್ಲೇ ಇದ್ದಾರೆ ಎಂಬುದನ್ನು ಉಲ್ಲೇಖಿಸಿದೆ.

Pak Hosting Crime Syndicate Responsible For Mumbai Blasts: India At UN

2020ರ ಆಗಸ್ಟ್‌ನಲ್ಲಿ 88 ನಿಷೇಧಿತ ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಸರ್ಕಾರವು ವ್ಯಾಪಕ ನಿರ್ಬಂಧಗಳನ್ನು ವಿಧಿಸಿದ ನಂತರ ಪಾಕಿಸ್ತಾನವು ತನ್ನ ನೆಲದಲ್ಲಿ ಇಬ್ರಾಹಿಂನ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿತ್ತು. ಇದರಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿಯ ಹೆಸರೂ ಇದೆ.

1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಕಾರಣರಾದ ಕ್ರೈಂ ಸಿಂಡಿಕೇಟ್ ಅಪರಾಧಿಗೆ 5-ಸ್ಟಾರ್ ಆತಿಥ್ಯ ನೀಡಿರುವುದನ್ನು ನೋಡಿದ್ದೇವೆ ಎನ್ನುವ ಮೂಲಕ ಪಾಕಿಸ್ತಾನದಲ್ಲಿ ದಾವೊದ್‌ ಇಬ್ರಾಹಿಂ ತಲೆಮರೆಸಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ಪಾಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2022ರ ಯುಎನ್‌ಎಸ್‌ಸಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ತಿರುಮೂರ್ತಿ, 1,267 ಅಲ್-ಖೈದಾ ನಿರ್ಬಂಧಗಳ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧದ ಸಂಘಟನೆಗಳು ಭಯೋತ್ಪಾದನೆಗೆ ಹಣಕಾಸು ನೀಡುತ್ತವೆ. ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಇವುಗಳ ಪ್ರವೇಶವನ್ನು ತಡೆಗಟ್ಟುವಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಪ್ರಮುಖವಾಗಿವೆ ಎಂದಿದ್ದಾರೆ.

ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ 6 ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಕೋರ್ಟು ತೀರ್ಪು ನೀಡಿದ ಎರಡು ವಾರದಲ್ಲಿ ಮುಸ್ತಫಾ ದೊಸ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂದು ಉಳಿದ 5 ಜನರಿಗೆ ಶಿಕ್ಷೆ ಪ್ರಕಟಿಸಲಾಗಿದೆ.

1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಭಾರತ ಮಾತ್ರವಲ್ಲದೆ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಾಹ್ನ 1.30ರಿಂದ 3.40ರ ಮಧ್ಯೆ ನಡೆದ 12 ಸರಣಿ ಸ್ಫೋಟ 257 ಜನರು ಸಾವನ್ನಪ್ಪಿ 713 ಜನರು ಗಾಯಗೊಂಡಿದ್ದರು. 27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಯೂ ಈ ಸ್ಫೋಟಕ್ಕೆ ನಾಶವಾಗಿತ್ತು.

ಜನವರಿ 1, 1993: ಮೊಹಮ್ಮದ್ ದೊಸ್ಸಾ ಪನ್ವೇಲ್ ನಲ್ಲಿರುವ ಹೋಟೆಲ್ ಪರ್ಶಿಯನ್ ದರ್ಬಾರ್ ನಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ನಡೆಸಿದ್ದ. ಜನವರಿ 19, 1993: ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೊನ್ ದುಬೈನಲ್ಲಿ ಇನ್ನೊಂದು ಸಭೆ ನಡೆಸಿದ್ದ. ಸ್ಫೋಟದ ನೀಲನಕ್ಷೆ ಅಲ್ಲಿ ಸಿದ್ಧವಾಗಿತ್ತು. ಶಸ್ತ್ರಾಸ್ತ್ರಗಳ ಸಾಗಣೆ, ಇತರ ಸಲಕರಣೆಗಳು, ಸ್ಫೋಟಕಗಳ ಸಾಗಣೆಗೆ ಟೈಗರ್ ಮೆಮೆನ್ ಒಪ್ಪಿಕೊಂಡಿದ್ದ. ಸಮುದ್ರ ಮಾರ್ಗವಾಗಿ ಪಾಕಿಸ್ತಾನ ಮತ್ತು ದುಬೈನಿಂದ ಶಸ್ತ್ರಾಸ್ತ್ರಗಳನ್ನು ತರಲಾಯಿತು.
1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು

ಫೆಬ್ರವರಿ 2-8, 1993: ರಾಯಗಢ ಜಿಲ್ಲೆಯಲ್ಲಿರುವ ಶೆಖಡಿ ತೀರಕ್ಕೆ ಡಿಟೊನೇಟರ್ ಗ ಳು, ಆರ್.ಡಿ.ಎಕ್ಸ್ ನಂಥ ಸ್ಫೋಟಕಗಳು, ಹ್ಯಾಂಡ್ ಗ್ರೆನೇಡ್ ಗಳು, ಶಸ್ತ್ರಾಸ್ತ್ರಗಳನ್ನು ತರಲಾಯಿತು.

ಮಾರ್ಚ್ 4, 1993: ಸ್ಫೋಟಕ್ಕೆ ಬೇಕಾದ ಒಂದು ಹಂತದ ಸಿದ್ಧತೆಗಳು ಮುಗಿದಿತ್ತು. ತಾಜ್ ಮಹಲ್ ಹೊಟೇಲ್ ನಲ್ಲಿ ಸ್ಫೋಟಕ್ಕೆ ಪೂರ್ವಭಾವಿ ಸಭೆ ಕರೆದಿದ್ದ ಟೈಗರ್ ಮೆಮೊನ್.
ಮಾರ್ಚ್ 7, 1993: ಶಫಿ ಮನೆಯಲ್ಲಿ ಮತ್ತೊಂದು ಸುತ್ತಿನ ಸಭೆಯಲ್ಲಿ ಟೈಗರ್ ಮೆಮೊನ್ ನಡೆಸಿದ್ದ. ಈ ಸಭೆಯಲ್ಲಿ ಗುಂಪುಗಳನ್ನು ವಿಂಗಡಣೆ ಮಾಡಿ ಎಲ್ಲರಿಗೂ ತಮ್ಮ ಗುರಿಗಳನ್ನು ನೀಡಿದ್ದ.

ಮಾರ್ಚ್ 8, 1993: ಬಬ್ಲೂ ಮನೆಯಲ್ಲಿ ಮತ್ತೊಂದು ಸಭೆ ನಡೆಸಿದ ಟೈಗರ್ ಮೆಮೊನ್ ದಾಳಿ ಮಾಡಬೇಕಾದ ಗುರಿಗಳನ್ನು ಅಂತಿಮಗೊಳಿಸಿದ. ಎಲ್ಲೆಲ್ಲಿ ಬಾಂಬ್ ಇಡಬೇಕು ಎಂಬುದು ನಿರ್ಧಾರವಾಗಿತ್ತು.

English summary
The crime syndicate responsible for the 1993 Mumbai bomb blasts are enjoying 5-star hospitality in Pakistan and given state protection, Indian envoy at the UN has said, in a veiled reference to the D-company head Dawood Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X