ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಆಸ್ಟ್ರಾಜೆನೆಕಾದ 3ನೇ ಕ್ಲಿನಿಕಲ್ ಟ್ರಯಲ್ ಆರಂಭಿಸಿದ ಆಕ್ಸ್‌ಫರ್ಡ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 02: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಮೆರಿಕದಲ್ಲಿ ಆಸ್ಟ್ರಾಜೆನೆಕಾದ ಮೂರನೇ ಕ್ಲಿನಿಕಲ್ ಟ್ರಯಲ್ ಆರಂಭಿಸಿದೆ.

Recommended Video

ಆಸ್ಪತ್ರೆಯಿಂದ ಕೆಲಸ ಮಾಡುತ್ತಿರುವ Minister | Oneindia Kannada

ಈಗಾಗಲೇ ಹಲವು ದೇಶಗಳಲ್ಲಿ ಆಸ್ಟ್ರಾಜೆನೆಕಾ ಮೂರನೇ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ. ಭಾರತ, ಬ್ರೆಜಿಲ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ ನಡೆಯುತ್ತಿದೆ. ಹಾಗೆಯೇ ರಷ್ಯಾ ಮತ್ತು ಜಪಾನ್‌ನಲ್ಲಿಯೂ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ.

ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಸಿದ್ಧ: ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಸಿದ್ಧ: ಡೊನಾಲ್ಡ್ ಟ್ರಂಪ್

ತುರ್ತು ಅಗತ್ಯವಿರುವವರಿಗೆ ಈ ಲಸಿಕೆಯನ್ನು ನೀಡುವಂತೆ ಆಕ್ಸ್‌ಫರ್ಡ್‌ಗೆ ಅಮೆರಿಕ ಸರ್ಕಾರ ಮನವಿ ಮಾಡಿತ್ತು. ಆದರೆ ಅದು ತಿರಸ್ಕೃತಗೊಂಡಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದು ಅದು ಸುರಕ್ಷಿತ ಎಂದು ಅದಕ್ಕೆ ಮಾನ್ಯತೆ ಸಿಗುವವರೆಗೂ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.

Oxford Begins Stage-3 Trials In America

ಬೇರೆ ದೇಶಕ್ಕಿಂತ ಮೊದಲು ಅಮೆರಿಕದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಮತ್ತೊಂದು ಲಸಿಕೆ ಪಿಫೈಜರ್ ಕೂಡ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಅಕ್ಟೋಬರ್‌ನಲ್ಲಿ ನಡೆಸುತ್ತಿದೆ. ಬಯೋ ಎನ್‌ಟೆಕ್ ಕೂಡ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.

ಅಮೆರಿಕದ ಪ್ರಯೋಗದಲ್ಲಿ 3 ಸಾವಿರ ಮಂದಿ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. ಭಾರತದಲ್ಲಿ ಕಳೆದ ವಾರ ಎರಡನೇ ಹಂತದ ಪ್ರಯೋಗ ನಡೆದಿದೆ. 1600 ಮಂದಿ ಎರಡು ಮತ್ತು ಮೂರನೇ ಹಂತದ ಪ್ರಯೋಗದಲ್ಲಿ ಪಾಲ್ಗೊಂಡಿದ್ದರು.

ಹೆಚ್ಚೆಚ್ಚು ಲಸಿಕೆ ಉತ್ಪಾದನೆ ಮಾಡುವ ದೃಷ್ಟಿಯಿಂದ ಆಕ್ಸ್‌ಫರ್ಡ್‌ನ ಅಸ್ಟ್ರಾಜೆನೆಕಾವು ಯುಕೆ ಮೂಲದ ಆಕ್ಸ್‌ಫರ್ಡ್ ಬಯೋಮೆಡಿಕಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಎಷ್ಟು ಔಷಧವನ್ನು ಉತ್ಪಾದಿಸಲಾಗುತ್ತದೆ ಎಂಬ ಮಾಹಿತಿಯನ್ನು ಲಭ್ಯವಾಗಿದೆ.

ಅಮೆರಿಕದಲ್ಲಿ ಪ್ರಯೋಗಗಳ ವೇಗ ಹೆಚ್ಚಳದ ಭಾಗವಾಗಿ ಕೊವಿಡ್ ಲಸಿಕೆ ಮೂರನೇ ಹಂತದ ಪ್ರಯೋಗಗಳತ್ತ ಸಾಗಿದೆ. 2021ರ ಜನವರಿಗೆ ಕೊವಿಡ್ 19ಗೆ ಪರಿಣಾಮಕಾರಿ ಲಸಿಕೆಯನ್ನು 30 ಕೋಟಿ ಡೋಸ್‌ಗಳಷ್ಟು ಪೂರೈಕೆ ಮಾಡುವ ಗುರಿ ಹೊಂದಿದೆ.

English summary
coronavirus vaccine being developed by Oxford University and AstraZeneca has started phase-3 clinical trials in the United States. The vaccine is already undergoing phase-3 testing in several countries, including India, Brazil, England and South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X