ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧದಷ್ಟು ಕೊವಿಡ್ ಲಸಿಕೆಗಳು ಶ್ರೀಮಂತ ದೇಶಗಳ ಪಾಲು: ಆಕ್ಸ್‌ಫ್ಯಾಮ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 17: ಜಗತ್ತಿನಲ್ಲಿರುವ ಒಟ್ಟು ಕೊರೊನಾ ಲಸಿಕೆಗಳ ಪೈಕಿ ಅರ್ಧದಷ್ಟು ಶ್ರೀಮಂತ ದೇಶಗಳ ಪಾಲಾಗಿವೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ. ಇದೀಗ ಐದು ಲಸಿಕೆಗಳು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿವೆ. ಒಪ್ಪಂದವನ್ನು ಸರ್ಕಾರೇತರ ಸಂಸ್ಥೆಯು ವಿಶ್ಲೇಷಿಸಿವೆ.

ಜಾಗತಿಕ ಜನಸಂಖ್ಯೆಯ ಶೇ.13 ರಷ್ಟು ಜನಸಂಖ್ಯೆ ಇರುವ ಶ್ರೀಮಂತ ರಾಷ್ಟ್ರಗಳ ಒಂದು ಗುಂಪು ಈಗಾಗಲೇ ಭವಿಷ್ಯದ ಕೋವಿಡ್-19 ಲಸಿಕೆಗಳ ಅರ್ಧದಷ್ಟು ಪ್ರಮಾಣವನ್ನು ಖರೀದಿಸಿದೆ. ಪ್ರಸ್ತುತ ಕೋವಿಡ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ವಿಶ್ಲೇಷಿಸಿದ ಐದು ಲಸಿಕೆಗಳೆಂದರೆ ಅಸ್ಟ್ರಾಜೆನೆಕಾ, ಗಮಲೇಯಾ /ಸ್ಪುಟ್ನಿಕ್, ಮಾಡರ್ನಾ, ಫಿಜರ್ ಮತ್ತು ಸಿನೋವಾಕ್.

ಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳುಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳು

ಈ ಲಸಿಕೆಗಳ ಒಟ್ಟಾರೆ ಉತ್ಪಾದನೆ 5.9 ಶತಕೋಟಿ ಡೋಸ್ ಗಳಾಗಿದ್ದು, ಈ ಪೈಕಿ 2.7 ಬಿಲಿಯನ್ (51 ಪ್ರತಿಶತ) ಡೋಸ್ ಗಳನ್ನು ಶ್ರೀಮಂತ ರಾಷ್ಟ್ರಗಳಾದ ಯುಎಸ್, ಯುಕೆ, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಹಾಂಕಾಂಗ್ ಮತ್ತು ಮಕಾವ್, ಜಪಾನ್, ಸ್ವಿಟ್ಜರ್ಲೆಂಡ್, ಇಸ್ರೇಲ್ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ.

ಭಾರತದ ಪಾಲೇನು?

ಭಾರತದ ಪಾಲೇನು?

ಉಳಿದ 2.6 ಬಿಲಿಯನ್ ಗಳನ್ನು ಭಾರತ, ಬಾಂಗ್ಲಾದೇಶ, ಬ್ರೆಜಿಲ್, ಚೀನಾ, ಇಂಡೋನೇಷ್ಯಾ ಮತ್ತು ಮೆಕ್ಸಿಕೊ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಖರೀದಿಸಿವೆ ಅಥವಾ ಖರೀದಿಸುವ ಭರವಸೆ ನೀಡಿವೆ.

ಆಕ್ಸ್‌ಫ್ಯಾಮ್ ಆತಂಕ

ಆಕ್ಸ್‌ಫ್ಯಾಮ್ ಆತಂಕ

ಜಗತ್ತಿನ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಕುರಿತಂತೆ ಸಿದ್ಧವಾಗುತ್ತಿರುವ ಲಸಿಕೆಗಳು ಶ್ರೀಮಂತ ದೇಶಗಳ ಪಾಲಾಗುತ್ತಿರುವ ಕುರಿತು ವೈದ್ಯಕೀಯ ಲೇಖನಗಳನ್ನು ಪ್ರಕಟಿಸುವ ಆಕ್ಸ್ ಫ್ಯಾಮ್ ಆತಂಕ ವ್ಯಕ್ತಪಡಿಸಿದೆ.

ಎಷ್ಟು ಹಣ ಹೊಂದಿದ್ದೀರಿ ಎಂಬುದರ ಮೇಲೆ ನಿಂತಿದೆ

ಎಷ್ಟು ಹಣ ಹೊಂದಿದ್ದೀರಿ ಎಂಬುದರ ಮೇಲೆ ನಿಂತಿದೆ

ಈ ಬಗ್ಗೆ ಆಕ್ಸ್ ಫ್ಯಾಮ್ ನ ರಾಬರ್ಟ್ ಸಿಲ್ವರ್ ಮನ್ ಅವರು ಮಾತನಾಡಿದ್ದು, ಜೀವ ಉಳಿಸುವ ಲಸಿಕೆಯ ಲಭ್ಯತೆ ನೀವು ಎಲ್ಲಿ ವಾಸಿಸುತ್ತೀರಿ ಅಥವಾ ಎಷ್ಟು ಹಣವನ್ನು ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರಬಾರದು.

Recommended Video

ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada
ಲಸಿಕೆ ಎಲ್ಲರ ಕೈಗೆಟುಕುವುದೇ?

ಲಸಿಕೆ ಎಲ್ಲರ ಕೈಗೆಟುಕುವುದೇ?

ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಅಭಿವೃದ್ಧಿ ಮತ್ತು ಅನುಮೋದನೆ ನಿರ್ಣಾಯಕವಾಗಿದ್ದು, ಲಸಿಕೆಗಳು ಲಭ್ಯವಿದೆಯೇ? ಮತ್ತು ಎಲ್ಲರಿಗೂ ಕೈಗೆಟುಕುವುದೇ ಎಂದು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

English summary
A group of wealthy nations representing 13 percent of the global population have already bought up more than half of the promised doses of future Covid-19 vaccines, according to a report by Oxfam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X