ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!

|
Google Oneindia Kannada News

ನವೆಂಬರ್ ಚುನಾವಣೆಯಲ್ಲಿ ನಾನು ಸೋತರೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರ ಮಾಡುವ ಬಗ್ಗೆ ಗ್ಯಾರಂಟಿ ಕೊಡೋದಿಲ್ಲ ಎಂದು ಹೇಳುವ ಮೂಲಕ ಡೊನಾಲ್ಡ್ ಟ್ರಂಪ್ ಎದುರಾಳಿಗಳಿಗೆ ಶಾಕ್ ನೀಡಿದ್ದಾರೆ. ಈ ಮೂಲಕ ಜಗತ್ತಿನ ಪಾಲಿನ ದೊಡ್ಡಣ್ಣ ಅಮೆರಿಕದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಂತಾಗಿದೆ.

ಈಗಾಗಲೇ ಟ್ರಂಪ್ 'ಮೇಲ್‌ ಇನ್‌' ಮತದಾನದ ವಿರುದ್ಧ ಗುಡುಗಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದು, ಚುನಾವಣೆಯಲ್ಲಿ ಸೋತರೂ ಈ ವಿಚಾರ ಅಮೆರಿಕ ಸುಪ್ರೀಂಕೋರ್ಟ್‌ನಲ್ಲೇ ಇತ್ಯರ್ಥವಾಗಲಿದೆ ಎಂದಿದ್ದಾರೆ. ಕೆಲ ದಿನಗಳ ಹಿಂದೆ 'ಮೇಲ್‌ ಇನ್‌' ಮತದಾನದ ಬಗ್ಗೆ ಹೇಳಿಕೆ ಕೊಟ್ಟಿದ್ದ ಟ್ರಂಪ್, ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

''ಟ್ರಂಪ್ ನನ್ನ ಮೈ ಮುಟ್ಟಿ, ಬಲವಂತವಾಗಿ ಮುತ್ತುಕೊಟ್ಟಿದ್ದರು'' ''ಟ್ರಂಪ್ ನನ್ನ ಮೈ ಮುಟ್ಟಿ, ಬಲವಂತವಾಗಿ ಮುತ್ತುಕೊಟ್ಟಿದ್ದರು''

ಅಲ್ಲದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದಿದ್ದರು. ಹೀಗೆ ದೊಡ್ಡ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ವೈಟ್‌ಹೌಸ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ನಾನು ಸೋತರೂ ಸೈಲೆಂಟ್ ಆಗಿ ಖುರ್ಚಿ ಬಿಟ್ಟು ಹೋಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಟ್ರಂಪ್ ವಿರುದ್ಧ ತಿರುಗಿಬಿದ್ದ ಸ್ವಪಕ್ಷೀಯರು..!

ಟ್ರಂಪ್ ವಿರುದ್ಧ ತಿರುಗಿಬಿದ್ದ ಸ್ವಪಕ್ಷೀಯರು..!

ಅಮೆರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ದೇಶ. ಅಲ್ಲಿ ಪಕ್ಷಕ್ಕಿಂತ ಪಕ್ಷದ ಮೌಲ್ಯ, ಸಿದ್ಧಾಂತಗಳೇ ಮುಖ್ಯ. ಹೀಗಾಗಿ ಟ್ರಂಪ್ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಎಂದು ಸ್ವತಃ ಟ್ರಂಪ್ ಪಕ್ಷದವರೇ ಟೀಕಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಮಿಟ್ ರೊಮ್ನಿ ಟ್ರಂಪ್‌ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್‌ ಹೇಳಿಕೆ ಊಹಿಸಲು ಕೂಡ ಸಾಧ್ಯವಿಲ್ಲ, ಇದನ್ನ ಒಪ್ಪಲು ಆಗಲ್ಲ ಎಂದಿದ್ದಾರೆ. ಶಾಂತಿಯುತ ಅಧಿಕಾರ ಹಸ್ತಾಂತರ ಪ್ರಜಾಪ್ರಭುತ್ವದ ಮೂಲ ತತ್ವ ಎಂದು ಮಿಟ್ ರೊಮ್ನಿ ಟ್ರಂಪ್‌ಗೆ ಡೆಮಾಕ್ರಸಿ ಪಾಠ ಮಾಡಿದ್ದಾರೆ.

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

ಟ್ರಂಪ್ ಮಾತಿಗೆ ಬಿಡೆನ್ ಕಕ್ಕಾಬಿಕ್ಕಿ..!

ಟ್ರಂಪ್ ಮಾತಿಗೆ ಬಿಡೆನ್ ಕಕ್ಕಾಬಿಕ್ಕಿ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು 40 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹೊತ್ತಲ್ಲಿ ಟ್ರಂಪ್ ಹಾಕಿರುವ ಹೊಸ ಬಾಂಬ್, ಎದುರಾಳಿ ಜೋ ಬಿಡೆನ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ನಾಯಕರನ್ನೇ ದಂಗುಬಡಿಸಿದೆ. ಇನ್ನು ಟ್ರಂಪ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷೀಯ ಚುನಾವಣೆಯ ಟ್ರಂಪ್ ಎದುರಾಳಿ ಬಿಡೆನ್, ನಾವು ಯಾವ ದೇಶದಲ್ಲಿದ್ದೀವಿ ಎಂಬುದೇ ಅರಿಯದಾಗಿದೆ ಎಂದಿದ್ದಾರೆ. ಅಲ್ಲದೆ ಟ್ರಂಪ್ ಹೇಳಿಕೆಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದು ಕೂಡ ನನಗೆ ತಿಳಿಯುತ್ತಿಲ್ಲ. ಟ್ರಂಪ್ ಮಾತಿಗೆ ಅರ್ಥವೇ ಇರುವುದಿಲ್ಲ ಎಂದಿದ್ದಾರೆ.

ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ಮಧ್ಯೆ ಡೆಮಾಕ್ರಟಿಕ್ ಪಕ್ಷದ ನಾಯಕರು, ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭದಲ್ಲಿ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿರಬೇಕು ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಮಾತ್ರ ಅಂಚೆ ಮತದಾನ ಬಿಲ್‌ಕುಲ್ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದಾರೆ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ.

ಸುಪ್ರೀಂಕೋರ್ಟ್‌ ಜಡ್ಜ್ ಆಯ್ಕೆಗೂ ಅವಸರ

ಸುಪ್ರೀಂಕೋರ್ಟ್‌ ಜಡ್ಜ್ ಆಯ್ಕೆಗೂ ಅವಸರ

ಟ್ರಂಪ್ ಎಷ್ಟು ಅಚ್ಚುಕಟ್ಟಾಗಿ ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ ಎಂದರೆ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ರೂತ್‌ ಬ್ಯಾಡರ್‌ ಗಿನ್ಸ್‌ಬರ್ಗ್‌ ಮರಣ ನಂತರ ತೆರವಾಗುವ ಸ್ಥಾನಕ್ಕೆ ಶೀಘ್ರ ನೇಮಕಾತಿ ನಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ. ಅಕಸ್ಮಾತ್ ನ್ಯಾಯಮೂರ್ತಿ ಆಯ್ಕೆ ನಡೆಯದಿದ್ದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿವಾದಕ್ಕೆ ತೆರೆ ಬೀಳುವುದಿಲ್ಲ.

ಏಕೆಂದರೆ ಬಾರಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಸುಪ್ರೀಂಕೋರ್ಟ್‌ನಲ್ಲೇ ಅಂತ್ಯ ಕಾಣುವುದು ಗ್ಯಾರಂಟಿ. ಹೀಗಾಗಿ ಅಧ್ಯಕ್ಷೀಯ ಚುನಾವಣೆ ವಿವಾದ ಸುಪ್ರೀಂ ಮೆಟ್ಟಿಲೇರಿದಾಗ, 4-4ರ ಸಮ ಅನುಪಾತದಲ್ಲಿ ತೀರ್ಪು ಹೊರ ಬೀಳಬಹುದು. ಇದೇ ಕಾರಣಕ್ಕೆ ತೆರವಾಗಿರುವ 9ನೇ ನ್ಯಾಯಮೂರ್ತಿ ಸ್ಥಾನಕ್ಕೆ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ನೇಮಕಾತಿ ಮಾಡಿ ಎಂದು ಟ್ರಂಪ್ ಹಠಹಿಡಿದಿದ್ದಾರೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

English summary
American president Trump refuses to promise peaceful transfer of power if he loses US vote. Trump says if he loses in election he will move to supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X