ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಶೀಘ್ರ ಡೆಲ್ಟಾ ಪ್ರಕರಣಗಳನ್ನು ಓವರ್ ಟೇಕ್ ಮಾಡಲಿದೆ:WHO

|
Google Oneindia Kannada News

ಜಿನೇವಾ, ಜನವರಿ 12: ಓಮಿಕ್ರಾನ್ ಶೀಘ್ರದಲ್ಲಿ ಡೆಲ್ಟಾ ಪ್ರಕರಣಗಳನ್ನು ಓವರ್‌ಟೇಕ್ ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಓಮಿಕ್ರಾನ್ ಕೊರೊನಾ ವೈರಾಣು ಶೀಘ್ರದಲ್ಲೇ ಡೆಲ್ಟಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಓಮಿಕ್ರಾನ್ ವೈರಾಣು ಸುಲಭವಾಗಿ ಜನರ ರೋಗ ನಿರೋಧಕ ಕವಚವನ್ನು ಭೇದಿಸಿ ಸೋಂಕು ಹರಡಬಲ್ಲುದಾದರೂ ಅದರ ಗಂಭೀರತೆ ಹಾಗೂ ಅದು ತಂದೊಡ್ಡುವ ಸಮಸ್ಯೆಗಳು ಮಿಕ್ಕ ವೈರಾಣು ತಳಿಗಳಿಗೆ ಹೋಲಿಸಿದರೆ ಕಡಿಮೆ ಎಂದೂ ಹೇಳಿದ್ದಾರೆ.

ಓಮಿಕ್ರಾನ್ ಜಗತ್ತಿನ ಎಲ್ಲಾ ದೇಶದೊಳಕ್ಕೂ ಲಗ್ಗೆಯಿಟ್ಟಿದ್ದು ತನ್ನ ಜಾಲವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ. ಕಳೆದ ವಾರ ಒಮಿಕ್ರಾನ್ ಸೋಂಕಿಗೆ ವಿಶ್ವಾದ್ಯಂತ 43,000 ಮಂದಿ ಮೃತಪಟ್ಟಿದ್ದಾರೆ.

Omicron Quickly Overtaking Delta Globally In Terms Of Circulation: WHO

ಅತಿ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಅಮೆರಿಕಾದಲ್ಲಿ ಪತ್ತೆಯಾಗಿದೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್, ಬ್ರಿಟನ್, ಇಟಲಿ ಮತ್ತು ಭಾರತ ಸ್ಥಾನ ಪಡೆದಿವೆ.

ದೇಶಾದ್ಯಂತ ಬೆಚ್ಚುಬೀಳಿಸಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಸೌಮ್ಯ ಸೋಂಕು ಎಂದು ಪರಿಗಣಿಸಲ್ಪಟ್ಟರೂ ಕೂಡ ಇದು ದೇಹದ ಕೆಲವು ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ.

ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕೊರೋನ ವೈರಸ್ ಸೋಂಕು ರೋಗಿಗಳು ಅದರ ರೋಗಲಕ್ಷಣಗಳನ್ನು ತೋರಿಸದಿದ್ದರೂ ಸಹ ಅದರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.

ಓಮಿಕ್ರಾನ್ ನ್ನು ಪ್ರಪಂಚದಾದ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೂಪಾಂತರಿ ಸೋಂಕು ಎಂದು ನಿರ್ಲಕ್ಷಿಸಲಾಗುತ್ತಿದೆ. ಆದರೆ ಈ ರೀತಿಯ ನಿರ್ಲಕ್ಷ್ಯದ ಬಗ್ಗೆ ಜರ್ಮನ್ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೋಗಲಕ್ಷಣಗಳನ್ನು ಸೌಮ್ಯ/ ಕಡಿಮೆ ತೀವ್ರತೆಯ ಸೋಂಕು ಎಂದು ಪರಿಗಣಿಸಲಾಗುತ್ತಿದೆ. ಆದರೆ ಅಧ್ಯಯನವೊಂದರ ಪ್ರಕಾರ, ಓಮಿಕ್ರಾನ್ ಮೇಲ್ನೋಟಕ್ಕೆ ಕಡಿಮೆ ತೀವ್ರತೆ ಹೊಂದಿದ್ದರೂ ದೇಹದ ಅಂಗಗಳನ್ನು ಹಾನಿಗೊಳಿಸುತ್ತದೆ.

ಇದಕ್ಕಾಗಿ, SARS-CoV-2 ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ 45 ರಿಂದ 74 ವರ್ಷ ವಯಸ್ಸಿನ ಒಟ್ಟು 443 ಜನರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಓಮಿಕ್ರಾನ್ ಸೋಂಕು ತಗುಲಿಸಿಕೊಂಡವರು ಹಾಗೂ ಓಮಿಕ್ರಾನ್ ಸೋಂಕು ರಹಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಓಮಿಕ್ರಾನ್ ಸೋಂಕಿಗೆ ಒಳಗಾಗದ ಜನರಿಗೆ ಹೋಲಿಸಿದರೆ, ಓಮಿಕ್ರಾನ್ ಸೋಂಕಿತರಿಗೆ ಮಧ್ಯಮ ಅವಧಿಯ ಅಂಗ ಹಾನಿ ಕಂಡುಬಂದಿದೆ ಎಂದು ಅದರ ಫಲಿತಾಂಶವು ತೋರಿಸಿದೆ.

ಕೊರೋನಾ ಹೊಸ ರೂಪಾಂತರಿ ಸೋಂಕಿತರಿಗೆ "ಶ್ವಾಸಕೋಶದ ಕಾರ್ಯ ಪರೀಕ್ಷೆಗಳು ಶ್ವಾಸಕೋಶದ ಕಾರ್ಯನಿರ್ವಹಣೆ ಪ್ರಮಾಣದಲ್ಲಿ ಮೂರು ಪ್ರತಿಶತದಷ್ಟು ಕಡಿತವನ್ನು ತೋರಿಸಿದೆ"ಎಂದು ಅಧ್ಯಯನದ ಸಂಶೋಧಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Recommended Video

Siddharth ಗೆ ಬೇಕಿತ್ತಾ ಇದೆಲ್ಲಾ!! | Oneindia Kannada

ಇದರ ಜೊತೆಗೆ, ಹೃದಯದ ಶಕ್ತಿಯಲ್ಲಿ ಸರಾಸರಿ 1 ರಿಂದ 2 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ರಕ್ತದಲ್ಲಿನ ಪ್ರೋಟೀನ್ ಮಟ್ಟವು 41 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಹೃದಯದ ಮೇಲಿನ ಒತ್ತಡದ ಬಗ್ಗೆ ಹೇಳುತ್ತದೆ.

English summary
Omicron is quickly overtaking the Delta variant of COVID-19 and becoming dominant around the world, a senior WHO official has warned, with the global health agency cautioning that there is "increasing evidence" Omicron is able to evade immunity but has less disease severity as compared to other variants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X