ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 15: ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಹಿಂದಿನ ಯಾವುದೇ ರೂಪಾಂತರದೊಂದಿಗೆ ಕಂಡುಬರದ ಪ್ರಮಾಣದಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, "77 ದೇಶಗಳು ಈಗ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ವಾಸ್ತವವೆಂದರೆ ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿ ಇನ್ನೂ ಪತ್ತೆಯಾಗದಿದ್ದರೂ ಸಹ ಓಮಿಕ್ರಾನ್ ಹಿಂದಿನ ಯಾವುದೇ ರೂಪಾಂತರದೊಂದಿಗೆ ನಾವು ನೋಡದ ದರದಲ್ಲಿ ಹರಡುತ್ತಿದೆ'' ಎಂದು ಎಚ್ಚರಿಸಿದ್ದಾರೆ.

ಕೇವಲ ಕೊರೊನಾ ಲಸಿಕೆಗಳಿಂದ ಯಾವುದೇ ದೇಶವನ್ನು ಓಮಿಕ್ರಾನ್ ರೂಪಾಂತರ ವೈರಸ್ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಓಮಿಕ್ರಾನ್ ಹರಡುವಿಕೆಯನ್ನು ದೇಶಗಳು ತಡೆಗಟ್ಟಬಹುದು ಮತ್ತು ತಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.

Omicron is Spreading Faster Than Previous Variants Says World Health Organization

WHOನ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತು ಮುಂದುವರೆಸಿ, "ಜನರು ಓಮಿಕ್ರಾನ್ ವೈರಸ್ ಅನ್ನು ಸೌಮ್ಯ ಸ್ವಭಾವದ್ದು ಎಂದು ತಳ್ಳಿಹಾಕುತ್ತಿರುವುದನ್ನು ನೋಡಿ ನಾವು ಕಳವಳಗೊಂಡಿದ್ದೇವೆ. ಖಂಡಿತವಾಗಿ, ನಾವು ಈ ವೈರಸ್ ಅನ್ನು ಕಡಿಮೆ ಗಂಡಾಂತರ ಎಂದು ಅಂದಾಜು ಮಾಡಿದ್ದೇವೆ. ಆದರೆ ಹೆಚ್ಚಿನ ನಷ್ಟ ಮಾಡಲಿದೆ ಎಂದು ಹೇಳಿದರು.

ಓಮಿಕ್ರಾನ್ ರೂಪಾಂತರ ಕಡಿಮೆ ತೀವ್ರತರವಾದ ರೋಗವನ್ನು ಉಂಟು ಮಾಡಿದರೂ, ಪ್ರಕರಣಗಳ ಒಟ್ಟು ಸಂಖ್ಯೆಗಳು ಮತ್ತೊಮ್ಮೆ ಸಿದ್ಧವಿಲ್ಲದ ಆರೋಗ್ಯ ವ್ಯವಸ್ಥೆಗಳನ್ನು ಮುಳುಗಿಸಿ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ರೂಪಾಂತರದ ವಿರುದ್ಧ ಬೂಸ್ಟರ್‌ಗಳ ಪರಿಣಾಮಕಾರಿತ್ವದ ಪುರಾವೆಗಳಿಲ್ಲದಿದ್ದರೂ ಸಹ ಓಮಿಕ್ರಾನ್‌ನ ಪ್ರಕರಣಗಳ ಸಂಖ್ಯೆಗಳಿಂದ ಕೆಲವು ದೇಶಗಳು ತಮ್ಮ ಸಂಪೂರ್ಣ ವಯಸ್ಕ ಜನಸಂಖ್ಯೆಗಾಗಿ ಕೋವಿಡ್-19 ಬೂಸ್ಟರ್ ಡೋಸ್ ಹೊರತರಲು ಪ್ರೇರೇಪಿಸಿದೆ.

ಹೊಸ ಓಮಿಕ್ರಾನ್ ಕೊರೊನಾ ವೈರಸ್‌ಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ದಾಖಲಾಗುವವರ ಮತ್ತು ಸಾವು- ನೋವುಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಾಗತಿಕವಾಗಿ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ ಮತ್ತು ಸಾವುಗಳು ಸಹ ವರದಿಯಾಗುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದು ತಿಳಿಸಿದೆ.

ಓಮಿಕ್ರಾನ್ ಸೋಂಕಿತರ ಕ್ಲಿನಿಕಲ್ ಚಿತ್ರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೋವಿಡ್-19 ಕ್ಲಿನಿಕಲ್ ಡೇಟಾ ಪ್ಲಾಟ್‌ಫಾರ್ಮ್ ಮೂಲಕ ಆಸ್ಪತ್ರೆಗೆ ದಾಖಲಾದ ರೋಗಿಗಳ ಡೇಟಾವನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ದೇಶಗಳಿಗೆ ಸೂಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೊಸ ಓಮಿಕ್ರಾನ್ ರೂಪಾಂತರವು ಸಾಂಕ್ರಾಮಿಕದ ಹಾದಿಯಲ್ಲಿ ಪ್ರಮುಖ ಪರಿಣಾಮವನ್ನು ಬೀರಬಹುದು ಎಂದು ಸೂಚಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಕಳೆದ ವಾರ ಇತರ ರೂಪಾಂತರಗಳಿಗೆ ಹೋಲಿಸಿದರೆ ಓಮಿಕ್ರಾನ್ ಹೆಚ್ಚಳದ ನಿಖರವಾದ ದರವನ್ನು ಪ್ರಮಾಣೀಕರಿಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದರು.

English summary
The World Health Organization (WHO) said Tuesday that the Omicron mutation of the coronavirus is spreading at a rate not seen with any previous mutation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X