ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ: WHO

|
Google Oneindia Kannada News

ಓಮಿಕ್ರಾನ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತಿದೆ. ಓಮಿಕ್ರಾನ್ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದೆ, ತೀವ್ರತೆ ಕಡಿಮೆ ಎಂಬುದನ್ನು ದಾರಿತಪ್ಪಿಸುವ ಹೇಳಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಎಚ್ಚರಿಸಿದ್ದು, ಓಮಿಕ್ರಾನ್ ನಿಂದ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಸಾವು ಜಾಗತಿಕ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ ಎಂದು ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರಿಯೆಸಸ್ ಹೇಳಿದ್ದಾರೆ.

"ನಿರ್ಲಕ್ಷ್ಯ ವಹಿಸಿ ತಪ್ಪು ಮಾಡಬೇಡಿ, ಓಮಿಕ್ರಾನ್ ನಿಂದ ಆಸ್ಪತ್ರೆಗೆ ಸೇರುವ ಸ್ಥಿತಿಯೂ ಬರುತ್ತದೆ ಅಷ್ಟೇ ಅಲ್ಲದೇ ಸಾವೂ ಸಂಭವಿಸಬಹುದು, ಕಡಿಮೆ ತೀವ್ರತೆಯ ಪ್ರಕರಣಗಳೂ ಆರೋಗ್ಯ ಸೌಲಭ್ಯಗಳನ್ನು ಬುಡಮೇಲು ಮಾಡುತ್ತಿದೆ" ಎಂದು ಡಬ್ಲ್ಯುಹೆಚ್ಒ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಜರ್ಮನಿಯಲ್ಲಿ ಮೊದಲ ಬಾರಿಗೆ 100,000 ಕೋವಿಡ್ ಕೇಸ್ ದಾಖಲುಜರ್ಮನಿಯಲ್ಲಿ ಮೊದಲ ಬಾರಿಗೆ 100,000 ಕೋವಿಡ್ ಕೇಸ್ ದಾಖಲು

ಜಾನ್ಸ್ ಹಾಪ್ಕಿನ್ಸ್ ವಿವಿಯ ಮಾಹಿತಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಕೊರೋನಾ ಕೇಸ್ ಲೋಡ್ 333.5 ಮಿಲಿಯನ್ ನ್ನು ದಾಟಿದ್ದು, 5.55 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 9.68 ಬಿಲಿಯನ್ ಮಂದಿಗಿಂತಲೂ ಹೆಚ್ಚಿನ ಜನ ಲಸಿಕೆಗಳನ್ನು ಪಡೆದಿದ್ದಾರೆ.

Omicron Causing Hospitalisations, Deaths Worldwide: WHO

ಭಾರತದಲ್ಲಿ ಜ.19 ರಂದು ಒಂದೇ ದಿನ 2,82,970 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಕೋವಿಡ್-19 ನ ಯಾವುದೇ ರೂಪಾಂತರಿಯೂ ಅಪಾಯಕಾರಿಯಾಗಿದ್ದು ಸಾವಿಗೆ ಕಾರಣವಾಗಬಹುದು ಮುಂದಿನ ರೂಪಾಂತರಿಗಳು ಮತ್ತಷ್ಟು ಅಪಾಯಕಾರಿಯಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

"ಸರಾಸರಿಯಲ್ಲಿ ಓಮಿಕ್ರಾನ್ ಕಡಿಮೆ ತೀವ್ರತೆಯನ್ನು ಹೊಂದಿರಬಹುದು, ಆದರೆ ಅದು ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂಬುದು ಮಾತ್ರ ದಾರಿ ತಪ್ಪಿಸುವ ವಿಷಯವಾಗಿದೆ. ಈ ರೀತಿ ವದಂತಿಗಳನ್ನು ಹಬ್ಬಿಸಿದರೆ ಅದರಿಂದ ಸಾವು-ನೋವುಗಳು ಹೆಚ್ಚಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

24 ನವೆಂಬರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಕರೋನಾ, ಓಮಿಕ್ರಾನ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಯಿತು. ದಕ್ಷಿಣ ಆಫ್ರಿಕಾದ ಹೊರತಾಗಿ, ಈ ರೂಪಾಂತರವನ್ನು ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್‌ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಗುರುತಿಸಲಾಗಿದೆ. ಈ ರೂಪಾಂತರವು ಕಾಣಿಸಿಕೊಂಡ ನಂತರ, ಪ್ರಪಂಚದ ಅನೇಕ ದೇಶಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಕರನ್ನು ನಿಷೇಧಿಸಿವೆ.

ಬಟ್ಟೆಯ ಮಾಸ್ಕ್​ ಸುಲಭವಾಗಿ ಸ್ವಚ್ಛಗೊಳಿಸಿ, ಮರುಬಳಕೆ ಮಾಡಬಹುದಾದ ಮಾಸ್ಕ್​ ಎಂದರೆ ಅದು ಬಟ್ಟೆಯ ಮಾಸ್ಕ್​. ನೀವು ಒಂದು ಬಾರಿ ಬಳಸಿ ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು, ನೀವು ಜನಜಂಗುಳಿಯೆಡೆಗೆ, ಧೂಳಿರುವ ಪ್ರದೇಶಗಳಿಗೆ ಹೋಗುವಾಗ ಪ್ರಾಥಮಿಕ ಹಂತದ ಮುನ್ನೆಚ್ಚರಿಕ ಕ್ರಮವಾಗಿ ಬಟ್ಟೆಯ ಮಾಸ್ಕ್​ಅನ್ನು ಧರಿಸಿ. ಆದರೆ ನೆನಪಿಡಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಬಟ್ಟೆಯ ಮಾಸ್ಕ್​ ಅನ್ನು ನಿರ್ಬಂಧಿಸಿ.

ಸರ್ಜಿಕಲ್​ ಮಾಸ್ಕ್​ ಒಂದು ಬಾರಿ ಮಾತ್ರ ಬಳಸಲು ಯೋಗ್ಯವಾದ ಮಾಸ್ಕ್​ ಎಂದರೆ ಸರ್ಜಿಕಲ್ ​ ಮಾಸ್ಕ್​. ಸರ್ಜಿಕಲ್​ ಮಾಸ್ಕ್​ ಅನ್ನು ಒಂದು ಬಾರಿ ತೊಳೆದರೆ ಅದರ ದಾರಗಳು ಸಡಿಲಗೊಂಡು ಬಳಕೆಗೆ ಯೋಗ್ಯವಾಗದ ರೀತಿಯಾಗುತ್ತದೆ. ಅಲ್ಲದೆ ಸರ್ಜಕಲ್​ ಮಾಸ್ಕ್​ಗಳನ್ನು ಒಂದು ಬಾರಿ ನೀರಿಗೆ ಹಾಕಿದ ಮೇಲೆ ಅದರ ಪದರಗಳು ತೆಳ್ಳಗಾಗುತ್ತವೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ.

ಬಟ್ಟೆ ಮತ್ತು ಸರ್ಜಿಕಲ್​ ಮಾಸ್ಕ್​ ಈ ಮಾಸ್ಕ್​ಗಳನ್ನು ಚೆನ್ನಾಗಿ ಶೋಧಿಸಿದ ವಸ್ತುಗಳಿಂದ ನಿರ್ಮಿಸಲಾಗುತ್ತದೆ. ಆದರೆ ಇವು ದುರ್ಬಲವಾಗಿರುತ್ತದೆ. ಹೀಗಾಗಿ ಮರುಬಳಕೆಗೆ ಯೋಗ್ಯವಲ್ಲ. ಆದರೆ ಇವುಗಳು ಮೊದಲ ಬಳಕೆಯಲ್ಲಿ ಉತ್ತಮವಾಗಿ ರಕ್ಷಣೆ ನೀಡುತ್ತವೆ. ಎರಡು ಪದರಗಳಿಂದ ಕೂಡಿದ ಮಾಸ್ಕ್​ ಶೇ.75ರಷ್ಟು ಸುರಕ್ಷತೆ ನೀಡುತ್ತದೆ ಎನ್ನಲಾಗಿದೆ.

N95 ಮಾಸ್ಕ್​ ಅಮೇರಿಕನ್ ಕಾನ್ಫರೆನ್ಸ್ ಆಫ್ ಗವರ್ನಮೆಂಟ್ ಇಂಡಸ್ಟ್ರಿಯಲ್ ಹೈಜೀನಿಸ್ಟ್ಸ್ ಪ್ರಕಾರ N95 ಮಾಸ್ಕ್​ ಬಳಕೆಗೆ ಯೋಗ್ಯವಾದ ಮಾಸ್ಕ್​ ಆಗಿದೆ. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸದಿದ್ದರೂ N95 ಮಾಸ್ಕ್​ ಧರಿಸಿದವರಿಗೆ ಸೋಂಕು ಹರಡಲು ಎರಡೂವರೆ ಗಂಟೆಗಳ ಅವಧಿ ಬೇಕು. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿದ್ದರೆ. ಸೋಂಕು ಇತರರಿಗೆ ಹರಡಲು 25 ಗಂಟೆಗಳ ಕಾಲ ಸಮಯ ಬೇಕು ಎಂದು ಹೇಳಿದೆ. ಹೀಗಾಗಿ ಕೊರೋನಾ ಇರಲಿ, ಓಮಿಕ್ರಾನ್ ಇರಲಿ N95 ಮಾಸ್ಕ್​ ಸುರಕ್ಷತೆ ದೃಷ್ಟಿಯಿಂದ ಬಳಕಗೆ ಯೋಗ್ಯ ಎನ್ನುತ್ತಾರೆ ತಜ್ಞರು

ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?

*ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
*ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
*ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
*ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಟ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
*ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
*ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
*ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
*ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
*ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.

English summary
In a fresh warning, WHO chief Tedros Adhanom Ghebreyesus has said that Omicron variant of the coronavirus is causing hospitalisations and deaths the world over, and the narrative that it is a mild disease is misleading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X