ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಟ್ರಂಪ್ ಮಗಳು ಎಂದ ಮಹಿಳೆ: ಹಳೆಯ ವಿಡಿಯೋ ಮತ್ತೆ ವೈರಲ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 1: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದ ಸೋಲು ಕಂಡಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಅಲ್ಲದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ. ಆದರೆ ಈ ಆರೋಪಗಳಿಗೆ ಇದುವರೆಗೂ ಅವರು ಯಾವುದೇ ಪುರಾವೆ ನೀಡಿಲ್ಲ. ಈ ರೀತಿ ಸಾಕ್ಷ್ಯರಹಿತ ಆರೋಪಗಳನ್ನು ಅವರು ಅನೇಕ ಬಾರಿ ಮಾಡಿದ್ದಾರೆ. ಈಗ ಟ್ರಂಪ್ ಅವರ ಬಗ್ಗೆಯೇ ವಿಚಿತ್ರ ಹೇಳಿಕೆ ಹೊರಬಂದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಹಿಜಬ್ ತೊಟ್ಟ ಮಹಿಳೆಯೊಬ್ಬರು ಡೊನಾಲ್ಡ್ ಟ್ರಂಪ್ ತಮ್ಮ ನಿಜವಾದ ತಂದೆ ಎಂದು ಹೇಳುವ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ತಂದೆ ಎಂದು ಆಕೆ ಸುದ್ದಿಗಾರರಿಗೆ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.

'ಡೊನಾಲ್ಡ್ ಟ್ರಂಪ್ ನನ್ನ ನಿಜವಾದ ತಂದೆ. ನಾನು ನನ್ನ ತಂದೆಯನ್ನು ಭೇಟಿ ಮಾಡಲು ಬಯಸಿದ್ದೇನೆ' ಎಂದು ಆಕೆ ಹೇಳಿದ್ದಾಳೆ. 'ನೀನು ಅಸಡ್ಡೆ ಮನೋಭಾವದವಳಾಗಿದ್ದು, ಮಗಳ ಮೇಲೆಯೂ ಯಾವುದೇ ಮಮಕಾರ ತೋರಬಾರದು' ಎಂದು ಟ್ರಂಪ್ ತಮ್ಮ ತಾಯಿಗೆ ಹೇಳಿದ್ದರು. ಈ ವಿಚಾರವಾಗಿ ಟ್ರಂಪ್ ಮತ್ತು ತಮ್ಮ ತಾಯಿ ಹಲವು ಬಾರಿ ಜಗಳವಾಡಿದ್ದರು ಎಂದಿದ್ದಾಳೆ.

ಈ ವಿಡಿಯೋ 2018ರಲ್ಲಿಯೇ ಕಾಣಿಸಿಕೊಂಡಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡಿತ್ತು. ಈಗ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ ಸಂಘರ್ಷ ನಡೆಸುತ್ತಿರುವ ವೇಳೆ ಪುನಃ ವೈರಲ್ ಆಗಿದೆ.

Old Video Of A Pakistani Woman Claiming Donald Trump Is Her Father Viral Again

ಎರಡು ವರ್ಷಗಳ ಹಿಂದೆ ಈ ವಿಡಿಯೋ ಬಿಡುಗಡೆಯಾದಾಗ ಅನೇಕ ಬಗೆಯ ಪ್ರತಿಕ್ರಿಯೆಗಳು ದಾಖಲಾಗಿದ್ದವು. ಈಗ ಹೊಸದಾಗಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಾಗಲೂ ಜನರು ಅದೇ ರೀತಿ ಮುಗಿಬಿದ್ದು ಪ್ರತಿಕ್ರಿಯಿಸುತ್ತಿದ್ದಾರೆ.

English summary
An old video of a Pakistani woman claiming that US president Donald Trump is her real father goes viral again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X