ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್ ಪರ ವಾಲುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 19: ಅಮರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳು ಮತ್ತು ಕೆಲವು ತಿಂಗಳ ಹಿಂದೆ ಸರ್ಕಾರದಿಂದ ಹೊರ ನಡೆದಿದ್ದ ರಾಜಕೀಯ ನೇಮಕದ ಅಧಿಕಾರಿಗಳು ಈಗ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಅಧಿಕಾರ ಹಸ್ತಾಂತರ ತಂಡಗಳ ಸದಸ್ಯರನ್ನು ಭೇಟಿ ಮಾಡಲು ಆರಂಭಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ತಮ್ಮ ಸೋಲನ್ನು ಮುಕ್ತವಾಗಿ ಒಪ್ಪಿಕೊಂಡಿಲ್ಲ. ಇದರಿಂದ ಶ್ವೇತಭವನದಲ್ಲಿನ ಗೊಂದಲ ಹಾಗೂ ಅಡೆತಡೆಗಳು ಮುಂದುವರಿದಿದ್ದು, ಟ್ರಂಪ್ ಆಡಳಿತದಲ್ಲಿ ಭಾಗಿಯಾಗಿರುವರಲ್ಲಿಯೂ ಇದು ಕಿರಿಕಿರಿ ಉಂಟುಮಾಡುತ್ತಿದೆ. ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಬೈಡನ್ ಗೆಲುವನ್ನು ಇನ್ನೂ ಒಪ್ಪಿಕೊಂಡು ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭಿಸಬೇಕಿದೆ. ಇದರ ಪರಿಣಾಮವಾಗಿ ಬೈಡನ್ ಮತ್ತು ಅವರ ತಂಡಕ್ಕೆ ವಿವಿಧ ಫೆಡರಲ್ ಸಂಸ್ಥೆಗಳೊಂದಿಗಿನ ಸಂಪರ್ಕಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ವಂಚನೆ ನಿರಾಕರಿಸಿದ್ದ ಅಧಿಕಾರಿಯನ್ನು ವಜಾಗೊಳಿಸಿದ ಟ್ರಂಪ್ಚುನಾವಣೆ ವಂಚನೆ ನಿರಾಕರಿಸಿದ್ದ ಅಧಿಕಾರಿಯನ್ನು ವಜಾಗೊಳಿಸಿದ ಟ್ರಂಪ್

ಪಕ್ಷಪಾತಿ ನಿಲುವುಗಳಾಚೆ ತಾವು ದೇಶದೆಡೆಗಿನ ಕರ್ತವ್ಯ ನಡೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ಟ್ರಂಪ್ ಆಡಳಿತದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಬೈಡನ್ ಅವರ ತಂಡಗಳ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದು ಅಧಿಕೃತ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಷ್ಟು ವಿವರವಾಗಿ ನಡೆಯುತ್ತಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಜೋ ಬೈಡನ್ ಅವರು ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ವೇಳೆಗೆ ಅವರ ತಂಡಗಳು ಎದುರಿಸಬಹುದಾದ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಮಾಹಿತಿ ನೀಡುವ ಮೂಲಕ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ.

 Officials Of Donald Trump Are Reach Out To Joe Biden Team

ತಾವು ಟ್ರಂಪ್ ಆಡಳಿತದಲ್ಲಿ ನಿಭಾಯಿಸಿದ ಕೆಲಸಕ್ಕೆ ನೇಮಕಗೊಳ್ಳಲಿದ್ದಾರೆ ಎಂದು ನಿರೀಕ್ಷೆಯಿರುವ ವ್ಯಕ್ತಿಯೊಬ್ಬರಿಗೆ ವೈಯಕ್ತಿಕವಾಗಿ ಇ-ಮೇಲ್ ಮಾಡಿದ್ದು, ಅವರಿಗೆ ಸಹಾಯ ಮಾಡುವ ಬಯಕೆ ವ್ಯಕ್ತಪಡಿಸಿರುವುದಾಗಿ ಕೆಲವು ತಿಂಗಳ ಹಿಂದೆ ಶ್ವೇತಭವನದಿಂದ ನಿರ್ಗಮಿಸಿದ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕಾದ ಆರ್ಥಿಕತೆ ಬಲಪಡಿಸಲು ಜೋ ಬಿಡೆನ್ ಪ್ರತಿಜ್ಞೆಅಮೆರಿಕಾದ ಆರ್ಥಿಕತೆ ಬಲಪಡಿಸಲು ಜೋ ಬಿಡೆನ್ ಪ್ರತಿಜ್ಞೆ

ಈ ನಡುವೆ ಬೈಡನ್ ಆಡಳಿತ ತಂಡದಲ್ಲಿರುವ ಯಾರೊಂದಿಗೂ ಸಂಪರ್ಕ ಇರಿಸಿಕೊಳ್ಳದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಜೋ ಬೈಡನ್ ಅವರ ತಂಡದ ಯಾರಾದರೂ ತಮ್ಮನ್ನು ಸಂಪರ್ಕಿಸಿದರೆ ಅವರೊಂದಿಗೆ ಮಾತುಕತೆ ನಡೆಸಬಾರದು. ಈ ಬಗ್ಗೆ ಡೆಪ್ಯುಟಿ ಸರ್ಜನ್ ಜನರಲ್ ಅವರಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಮತ್ತು ಮಾನವ ಸೇವೆಗಳ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

English summary
Many current and former Trump administration officials have quietly started to reach out to members of transition team of Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X