• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ನೊಡೆನ್ ಕೇಸ್: ಖಾಸಗಿ ಮಾಹಿತಿ ಕದಿಯುವುದು ಅಪರಾಧ- ಕೋರ್ಟ್

|

ಭದ್ರತೆ ಹೆಸರಲ್ಲಿ ಜನರ ಖಾಸಗಿ ಮಾಹಿತಿ ಕದಿಯುವುದು ಅಪರಾಧ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಕೋರ್ಟ್ ಛೀಮಾರಿ ಹಾಕಿದೆ. NSA ನಾಗರಿಕರ ಖಾಸಗಿ ಮಾಹಿತಿ ಕದಿಯುತ್ತಿದ್ದ ಬಗ್ಗೆ 2013ರಲ್ಲಿ ಸ್ವತಃ NSA ಉದ್ಯೋಗಿಯಾಗಿದ್ದ ಎಡ್ವರ್ಡ್ ಸ್ನೋಡೆನ್ ಸತ್ಯ ಬಯಲಿಗೆಳೆದಿದ್ದರು. ಸ್ನೋಡೆನ್ ಹಗರಣ ಬಯಲಿಗೆಳೆದ ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ತೀರ್ಪು ಈಗ ಹೊರಬಿದ್ದಿದೆ.

ಭದ್ರತೆ ಹೆಸರಲ್ಲಿ ಅಮೆರಿಕನ್ನರ ಖಾಸಗಿ ಮಾಹಿತಿ ಪಡೆದಿರುವ NSA ಕ್ರಮ ಕಾನೂನುಬಾಹೀರ ಎಂದು ಕೋರ್ಟ್ ಚಾಟಿ ಬೀಸಿದೆ. ಸ್ನೋಡೆನ್ ಅಮೆರಿಕ ಸರ್ಕಾರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ ಮಾಡಿದಾಗ, ಅಂದಿನ ಒಬಾಮಾ ಸರ್ಕಾರ ಸ್ನೋಡೆನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿತ್ತು. ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ಹಿಮ್ಮೆಟ್ಟಿಸಲು 'ರಾಷ್ಟ್ರೀಯ ಭದ್ರತಾ ಸಂಸ್ಥೆ' ಪ್ರಜೆಗಳ ಖಾಸಗಿ ಮಾಹಿತಿ ಕದಿಯುತ್ತಿತ್ತು. ಹೀಗೆ ಅಮೆರಿಕನ್ನರ ಮೇಲೆ ಸ್ವತಃ ಸರ್ಕಾರವೇ ಗೂಢಾಚಾರಿಕೆ ನಡೆಸುತ್ತಿದೆ ಎಂದು ಸ್ನೋಡೆನ್ ಆರೋಪಿಸಿದ್ದರು.

ಯುಎಸ್ ವಿರುದ್ಧವಾಗಿ ಅಂತೂ ಸ್ನೋಡೆನಿಗೆ ಆಶ್ರಯ ದಕ್ಕಿತು

ಇದರಿಂದ ಸ್ನೋಡೆನ್ ಅಮೆರಿಕದ ಗೌಪ್ಯತೆ ರಕ್ಷಿಸದೆ ಅಪರಾಧ ಮಾಡಿದ್ದಾರೆಂದು ಒಬಾಮಾ ಸರ್ಕಾರ ಆರೋಪಿಸಿತ್ತು. ಆದರೆ ಅಷ್ಟರಲ್ಲಾಗಲೇ ಸ್ನೋಡೆನ್ ಅಮೆರಿಕ ಬಿಟ್ಟು ಹಾಂಕಾಂಗ್ ಮಾರ್ಗವಾಗಿ ರಷ್ಯಾಗೆ ಹಾರಿದ್ದ. ರಷ್ಯಾದಲ್ಲಿ ತನಗೆ ನೆಲೆ ನೀಡಬೇಕೆಂದು ಸ್ನೋಡೆನ್ ಮನವಿ ಮಾಡಿದ್ದ. ಇದನ್ನು ಪುರಸ್ಕರಿಸಿದ್ದ ಪುಟಿನ್ ಸರ್ಕಾರ ಇಂದಿಗೂ ಸ್ನೋಡೆನ್‌ಗೆ ಜಾಗ ನೀಡಿದೆ.

ಆಧಾರ್ ಬಗ್ಗೆಯೂ ಮಾತನಾಡಿದ್ದ ಸ್ನೋಡೆನ್

ಈ ಹಿಂದೆ ಭಾರತದಲ್ಲಿ ನಡೆದಿದ್ದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಎಡ್ವರ್ಡ್ ಸ್ನೋಡೆನ್, ಭಾರತದ ಆಧಾರ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಧಾರ್ ಯೋಜನೆ ಉತ್ತಮ ಧ್ಯೇಯ ಹೊಂದಿದೆ, ಆದರೆ ಆಧಾರ್‌ನಿಂದ ಭಾರತೀಯರ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂದು ಸ್ನೋಡೆನ್ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಆಧಾರ್ ಮೂಲಕ ಭಾರತೀಯರ ಖಾಸಗಿ ಮಾಹಿತಿ ದುರಪಯೋಗ ಮಾಡಿಕೊಂಡರೆ, ಅಂತಹ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗಡಿಪಾರಾದ ಸ್ನೋಡೆನ್ ಟ್ವೀಟ್ ಲೋಕಕ್ಕೆ ಎಂಟ್ರಿ

ಸ್ನೋಡೆನ್‌ಗೆ 30 ವರ್ಷ ಶಿಕ್ಷೆ ಕಾದಿತ್ತು..!

2013ರಲ್ಲಿ NSA ಕುರಿತಾದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ತಿಳಿಸಿದ್ದ ಸ್ನೋಡೆನ್‌ಗೆ ಕಠಿಣ ಶಿಕ್ಷೆ ಕಾದಿತ್ತು. ಒಬಾಮಾ ಸರ್ಕಾರ ಸ್ನೋಡೆನ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿತ್ತು. ಅಷ್ಟಕ್ಕೂ ಅಮೆರಿಕದಲ್ಲಿ ಈ ರೀತಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಹೊರಗೆಡವಿದರೆ 30 ವರ್ಷದವರೆಗೆ ಶಿಕ್ಷೆ ನೀಡಬಹುದು. ಆದರೆ 7 ವರ್ಷಗಳ ಹಿಂದೆಯೇ ಅಮೆರಿಕ ಬಿಟ್ಟು ಎಸ್ಕೇಪ್ ಆಗಿರುವ ಸ್ನೋಡೆನ್ ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ ಶಿಕ್ಷೆಯಿಂದ ಪಾರಾಗಿದ್ದಾರೆ.

English summary
A federal court has ruled that the US intelligence’s surveillance program exposed by whistle-blower Edward Snowden was unlawful, and possibly unconstitutional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X