ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ; ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಗೆ ನೋವಾವ್ಯಾಕ್ಸ್ ಅರ್ಜಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಬಯೋಟೆಕ್ನಾಲಜಿ ಸಂಸ್ಥೆ ನೋವಾವ್ಯಾಕ್ಸ್, ಸೀರಂ ಇನ್‌ಸ್ಟಿಟ್ಯೂಟ್ ಜೊತೆಗೂಡಿ ಅಭಿವೃದ್ಧಿಪಡಿಸಿರುವ ತನ್ನ ಕೊರೊನಾ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಕೋರಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಿರುವ ಇಂಥ ಸಂದರ್ಭದಲ್ಲಿ ನಮ್ಮ ಪ್ರೊಟೀನ್ ಆಧಾರಿತ ಕೊರೊನಾ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಾಗಿದೆ. ಇದು ವಿಶ್ವದಾದ್ಯಂತ ಲಸಿಕೆಯ ಹೆಚ್ಚಿನ ಅಗತ್ಯವಿರುವ ದೇಶಗಳಿಗೆ ಹಾಗೂ ಕೊರೊನಾ ಲಸಿಕೆಗಳ ಸಮಾನ ವಿತರಣೆಯನ್ನು ವೇಗಗೊಳಿಸುವ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ನೋವಾವ್ಯಾಕ್ಸ್ ಅಧ್ಯಕ್ಷ ಸ್ಟಾನ್ಲಿ ಸಿ ಎರೆಕ್ ತಿಳಿಸಿದ್ದಾರೆ.

 ಇದೇ ತಿಂಗಳಲ್ಲಿ 920 ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಇದೇ ತಿಂಗಳಲ್ಲಿ 920 ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ

'ಇದು ನೋವಾವ್ಯಾಕ್ಸ್ ವಾಣಿಜ್ಯ ಜಾಗತಿಕ ಲಸಿಕೆ ಕಂಪನಿಯಾಗಿ ಪರಿವರ್ತನೆಯ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಪ್ರತಿನಿಧಿಸುತ್ತಿದೆ ಹಾಗೂ ಕೊರೊನಾ ಲಸಿಕೆ ವಿಷಯದಲ್ಲಿ ಜಾಗತಿಕ ಸಹಯೋಗದ ಮೌಲ್ಯವನ್ನು ಬಲಪಡಿಸಲಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ಬಹು ವಿಧಾನಗಳ ಅಗತ್ಯ ಇಂದಿಗಿದೆ' ಎಂದು ಹೇಳಿದ್ದಾರೆ.

Novavax Seek WHOs Approval For Their Coronavirus

ಕೋವ್ಯಾಕ್ಸ್‌ ಲಸಿಕಾ ಜಾಗತಿಕ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸುವ ಮೂಲಕ ಹಲವಾರು ದೇಶಗಳಿಗೆ ಲಸಿಕೆ ರಫ್ತು ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಪೂರ್ವಾಪೇಕ್ಷಿತವಾಗಿದೆ.

ನೋವಾವ್ಯಾಕ್ಸ್‌ ಕೊರೊನಾ ಲಸಿಕೆಯನ್ನು ಎರಡು ಪ್ರಮುಖ ಹಂತಗಳಲ್ಲಿ ಮೂರು ಪ್ರಯೋಗಗಳ ಮೂಲಕ ಮೌಲ್ಯಮಾಪನ ನಡೆಸಲಾಗಿದೆ. ಮೊದಲು ಬ್ರಿಟನ್‌ನಲ್ಲಿ ಪ್ರಯೋಗ ನಡೆದಿದ್ದು, ಲಸಿಕೆಯು ಮೂಲ ಸೋಂಕಿನ ವಿರುದ್ಧ 96.4% ದಕ್ಷತೆ ತೋರಿದೆ. ಆಲ್ಫಾ ಸೋಂಕಿನ ವಿರುದ್ಧ 86.3% ದಕ್ಷತೆ ಹಾಗೂ ಎಲ್ಲಾ ಸೋಂಕಿನ ವಿರುದ್ಧ 89.7% ದಕ್ಷತೆ ತೋರಿರುವುದಾಗಿ ಕಂಪನಿ ತಿಳಿಸಿದೆ.

ಕೊರೊನಾ ವಿರುದ್ಧ ನೋವಾವ್ಯಾಕ್ಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಏನು ಹೇಳುತ್ತೆ? ಕೊರೊನಾ ವಿರುದ್ಧ ನೋವಾವ್ಯಾಕ್ಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಏನು ಹೇಳುತ್ತೆ?

ಅಮೆರಿಕ ಹಾಗೂ ಮೆಕ್ಸಿಕೋದಲ್ಲಿ ಎರಡನೇ ಪ್ರಯೋಗ ನಡೆದಿದ್ದು, ಮಧ್ಯಮ ಹಾಗೂ ತೀವ್ರತರ ರೋಗಗಳ ವಿರುದ್ಧ 100% ರಕ್ಷಣೆ ನೀಡುತ್ತದೆ ಹಾಗೂ ಒಟ್ಟಾರೆ 90.4% ದಕ್ಷತೆ ಪ್ರದರ್ಶಿಸಿದೆ ಎಂದು ತಿಳಿದುಬಂದಿದೆ. ಲಸಿಕೆ ಪಡೆದವರಲ್ಲಿ ದೃಢವಾದ ಪ್ರತಿಕಾಯ ಪ್ರತಿಕ್ರಿಯೆ ಸೃಷ್ಟಿಯಾಗಿರುವುದಾಗಿ ಕಂಪನಿ ಮಾಹಿತಿ ನೀಡಿದೆ.

Novavax Seek WHOs Approval For Their Coronavirus

ಅಮೆರಿಕ ಮೂಲದ ಲಸಿಕೆ ತಯಾರಕ ನೋವಾವ್ಯಾಕ್ಸ್‌ ಇಂಕ್, ಕಡಿಮೆ, ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಭಾರತದಲ್ಲಿ NVX-CoV2373 ಅಭಿವೃದ್ಧಿ ಹಾಗೂ ವಾಣಿಜ್ಯೀಕರಣಕ್ಕಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಜೊತೆ ಪರವಾನಗಿ ಒಪ್ಪಂದ ಮಾಡಿಕೊಂಡಿತ್ತು. ಅಮೆರಿಕದ ಲಸಿಕಾ ಅಭಿವೃದ್ಧಿ ಸಂಸ್ಥೆ ನೋವಾವ್ಯಾಕ್ಸ್ ಸಹಯೋಗದೊಂದಿಗೆ "ಕೋವೊವ್ಯಾಕ್ಸ್‌" ಅಭಿವೃದ್ಧಿಯಲ್ಲಿ ತೊಡಗಲು ಸೀರಂ ಒಪ್ಪಂದ ಮಾಡಿಕೊಂಡಿತ್ತು. ಕೋವೊವ್ಯಾಕ್ಸ್ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಮಾರ್ಚ್‌ನಲ್ಲಿ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ವೇಳೆಗೆ ವಯಸ್ಕರಿಗೆ ಈ ಲಸಿಕೆಯನ್ನು ಬಿಡುಗಡೆ ಮಾಡಲು ಸೀರಂ ಸಂಸ್ಥೆ ಯೋಜನೆ ರೂಪಿಸಿದೆ.

ಲಸಿಕೆಯ ಸಂಗ್ರಹಣೆ ಬಗ್ಗೆ ನೋವಾವ್ಯಾಕ್ಸ್ ಮಾಹಿತಿ ನೀಡಿದ್ದು, 2 ಡಿಗ್ರಿ ಸೆಲ್ಸಿಯಸ್‌ನಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಇಡಬಹುದು ಹಾಗೂ ಸುಲಭವಾಗಿ ಸಾಗಿಸಬಹುದು ಎಂದು ಹೇಳಲಾಗಿದೆ. ನೋವಾವ್ಯಾಕ್ಸ್ ಪ್ರೊಟೀನ್ ಆಧಾರಿತ ಕೋವಿಡ್ 19 ಲಸಿಕೆ ಪ್ರಮುಖ ರೂಪಾಂತರದ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಅಮೆರಿಕ ಹಾಗೂ ಮೆಕ್ಸಿಕೋದಲ್ಲಿ ಸುಮಾರು 30,000 ಮಂದಿಗೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಅದರ ಅನ್ವಯ ಲಸಿಕೆ ಕೋವಿಡ್ ಸೋಂಕಿನ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಎಂಬುದು ಕಂಡುಬಂದಿದೆ.

ಔಷಧ ನಿಯಂತ್ರಕರ ಎಲ್ಲಾ ರೀತಿಯಾನುಮೋದನೆಯನ್ನು ಪಡೆದುಕೊಳ್ಳಲು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲಿ ವಿಶ್ವದೆಲ್ಲೆಡೆ ಈ ಲಸಿಕೆಯ ಬಳೆಯಾಗುವುದನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಕಂಪನಿ ಅಧ್ಯಕ್ಷ ತಿಳಿಸಿದ್ದಾರೆ.

English summary
Novavax along with its partner Serum Institute of India (SII) has sought the World Health Organization's approval for emergency use listing (EUL) of its Covid-19 vaccine, said the company in a statement,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X