ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಗಳ ವಿರುದ್ಧವೂ ನೋವಾವ್ಯಾಕ್ಸ್‌ 90% ಪರಿಣಾಮಕಾರಿ; ವರದಿ

|
Google Oneindia Kannada News

ವಾಷಿಂಗ್ಟನ್, ಜೂನ್ 14: ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ಧವೂ ನೋವಾವ್ಯಾಕ್ಸ್ ಲಸಿಕೆ 90% ಪರಿಣಾಮಕಾರಿ ಎಂದು ಲಸಿಕೆ ಅಭಿವೃದ್ಧಿಗೊಳಿಸಿದ ಸಂಸ್ಥೆ ಸೋಮವಾರ ಪ್ರಕಟಿಸಿದೆ.

ನೋವಾವ್ಯಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ NVX-CoV2373 ಲಸಿಕೆ ಕುರಿತು ಅಧ್ಯಯನ ನಡೆದಿದ್ದು, ಮಧ್ಯಮ ಹಾಗೂ ತೀವ್ರ ಸ್ವರೂಪದ ಸೋಂಕಿನ ವಿರುದ್ಧ ಲಸಿಕೆಯು 100% ಪರಿಣಾಮಕಾರಿಯಾಗಿದೆ. ಒಟ್ಟಾರೆಯಾಗಿ ಸೋಂಕಿನ ವಿರುದ್ಧ 90.4% ಪರಿಣಾಮಕಾರಿ ಎಂಬುದು ಸಾಬೀತಾಗಿರುವುದಾಗಿ ಸಂಸ್ಥೆ ಹೇಳಿಕೆ ನೀಡಿದೆ.

 ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಸಲು ಡಿಸಿಜಿಐ ಅನುಮತಿ ಕೇಳಿದ ಸೀರಂ ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಸಲು ಡಿಸಿಜಿಐ ಅನುಮತಿ ಕೇಳಿದ ಸೀರಂ

ಲಸಿಕೆಯ ದಕ್ಷತೆ, ಸುರಕ್ಷತಾ ಪ್ರಮಾಣ, ರೋಗನಿರೋಧಕ ಅಂಶಗಳ ಕುರಿತು ಮೌಲ್ಯಮಾಪನ ಮಾಡಲು ಅಮೆರಿಕ ಹಾಗೂ ಮೆಕ್ಸಿಕೊದ 119 ಪ್ರದೇಶಗಳ 29,960 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

Novavax Covid Vaccine Shows 90% Efficacy Says Report

2021ರ ಮೂರನೇ ತ್ರೈಮಾಸಿಕದೊಳಗೆ ಈ ಲಸಿಕೆಯ ಅನುಮೋದನೆಗೆ ಅರ್ಜಿ ಸಲ್ಲಿಸಲಾಗುವುದು ಎಂದು ಮೇರಿಲ್ಯಾಂಡ್‌ನಲ್ಲಿನ ಲಸಿಕೆ ತಯಾರಕ ಪ್ರಧಾನ ಕಚೇರಿ ಪ್ರಕಟಣೆ ಹೊರಡಿಸಿದೆ.

ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ತಿಂಗಳಿಗೆ ನೂರು ಮಿಲಿಯನ್ ಡೋಸ್ ಲಸಿಕೆ ಹಾಗೂ ವರ್ಷಾಂತ್ಯಕ್ಕೆ, ತಿಂಗಳಿಗೆ 150 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

"ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಅಗತ್ಯಗಳನ್ನು ಆದ್ಯತೆಯಾಗಿಸಿಕೊಂಡು ಲಸಿಕೆ ಅಭಿವೃದ್ಧಿಯಲ್ಲಿ ನೋವಾವ್ಯಾಕ್ಸ್ ಮುಂದಡಿ ಇಟ್ಟಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆಗಳಿಗೆ ಉಂಟಾಗಿರುವ ಅಭಾವವನ್ನು ಅರ್ಥೈಸಿಕೊಂಡು ಲಸಿಕೆಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ," ಎಂದು ನೋವಾವ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಟಾನ್ಲಿ ಸಿ ಎರ್ಕ್ ತಿಳಿಸಿದ್ದಾರೆ.

ಶ್ರೀಮಂತ ರಾಷ್ಟ್ರಗಳು ತಮ್ಮಿಡೀ ಜನಸಂಖ್ಯೆಗೆ ವೇಗಗತಿಯಲ್ಲಿ ಲಸಿಕೆ ನೀಡುತ್ತಿವೆ. ಆದರೆ ಬಡ ರಾಷ್ಟ್ರಗಳು ಲಸಿಕೆ ಅಭಿಯಾನದಲ್ಲಿ ತೀರಾ ಹಿಂದುಳಿದಿವೆ. ಇಂಥ ದೇಶಗಳನ್ನು ಉದ್ದೇಶವಾಗಿಟ್ಟುಕೊಂಡು ಲಸಿಕೆ ತಯಾರಿ ನಡೆಯುತ್ತಿದೆ. ಸುಲಭ ಸಾಗಣೆ ಸಾಧ್ಯವಾಗುವಂತೆ ಲಸಿಕೆಗಳಿರಲಿವೆ. ಆರೋಗ್ಯ ಸೌಲಭ್ಯಗಳನ್ನು ಹೊಂದಿರದ ಬಡರಾಷ್ಟ್ರಗಳಿಗೆ ಇದು ನೆರವಾಗಲಿದೆ ಎಂದಿದೆ.

ಮುಂದೆ, ಭಾರತದ ಸೆರಂ ಇನ್‌ಸ್ಟಿಟ್ಯೂಟ್ ನೋವಾವ್ಯಾಕ್ಸ್‌ನ ಲಸಿಕೆಗಳ ಉತ್ಪಾದನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿದುಬಂದಿದೆ.

English summary
Novavax's COVID-19 jab is more than 90 percent effective against coronavirus variants, the vaccine maker said on Monday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X