ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ

|
Google Oneindia Kannada News

ಕೊರೊನಾ ಎಂಬ ಸುಂಟರಗಾಳಿಗೆ ಸಿಲುಕಿ ಛಿದ್ರ ಛಿದ್ರವಾಗಿರುವ ಅಮೆರಿಕ ಮತ್ತೆ ಸರಿದಾರಿಗೆ ಬರಲು ಕಡಿಮೆ ಕಡಿಮೆ ಎಂದರೂ 2 ವರ್ಷ ಬೇಕು ಎಂದು ಡಾ. ಆಂಥೋನಿ ಫೌಸಿ ಹೇಳಿದ್ದಾರೆ. ಡಾ. ಫೌಸಿ ಸಾಂಕ್ರಾಮಿಕ ರೋಗಗಳ ತಜ್ಞರಾಗಿದ್ದು, ಇತ್ತೀಚೆಗೆ ಟ್ರಂಪ್ ಜೊತೆಗಿನ ಒಡನಾಟ ಹಾಗೂ ಟ್ರಂಪ್ ಜೊತೆಗಿನ ಕಿತ್ತಾಟದಿಂದ ಎಲ್ಲರ ಮನೆಮಾತಾಗಿದ್ದರು. ಅಮೆರಿಕದಲ್ಲಿ ಎಲ್ಲವೂ ಹಾಳಾಗಿ ಹೋಗಿದೆ. ಆರ್ಥಿಕತೆ, ಜನಗಳ ಆರೋಗ್ಯವೂ ಸೇರಿದಂತೆ ಒಟ್ಟಾರೆ ಸಮಾಜದಲ್ಲಿ ಸಾಕಷ್ಟು ಏರುಪೇರಾಗಿದೆ. ಇದನ್ನೆಲ್ಲಾ ಕೂಡಲೇ ಸರಿದಾರಿಗೆ ತರುವುದಕ್ಕೆ ಸಾಧ್ಯವಿಲ್ಲ.

ಮುಂದಿನ ಕೆಲ ತಿಂಗಳಲ್ಲಿ ಕೊರೊನಾ ವೈರಸ್‌ಗೆ ವ್ಯಾಕ್ಸಿನ್ ಸಿಕ್ಕರೂ ಎಲ್ಲವೂ ಸರಿದಾರಿಗೆ ಬಂದು, ಅಮೆರಿಕ ಮತ್ತೆ ಮೊದಲಿನಂತೆ ಆಗಲು 2022ರವರೆಗೆ ಕಾಯಬೇಕಿದೆ ಎಂದು ಡಾ. ಫೌಸಿ ಪ್ರತಿಪಾದಿಸಿದ್ದಾರೆ. ಅಲ್ಲದೆ ಅಮೆರಿಕದಲ್ಲಿ 'ಕೊರೊನಾ' ನಿಯಂತ್ರಣದ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆಯೂ ಡಾ. ಫೌಸಿ ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಸರಿಸುಮಾರು 92 ಲಕ್ಷದಷ್ಟು ಕೊರೊನಾ ಕೇಸ್‌ಗಳು ಪತ್ತೆಯಾಗಿದ್ದು, 1 ಕೋಟಿಯತ್ತ ದಾಪುಗಾಲು ಇಡುತ್ತಿದೆ. ಅಲ್ಲದೆ 2 ಲಕ್ಷ 33 ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾ ಎಂಬ ಮಹಾಮಾರಿಗೆ ಬಲಿಯಾಗಿದ್ದಾರೆ.

ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡ್ತಾರೆ

ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡ್ತಾರೆ

ಮೆಲ್ಬೋರ್ನ್ (Melbourne) ವಿಶ್ವವಿದ್ಯಾಲಯ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಡಾ. ಫೌಸಿ, ಟ್ರಂಪ್ ವಿರುದ್ಧ ಪರೋಕ್ಷವಾಗಿ ತಮ್ಮ ಆಕ್ರೋಶ ಹೊರಹಾಕಿದರು. ಅಮೆರಿಕವನ್ನು ಕೊರೊನಾ ಕಿತ್ತು ಕಿತ್ತು ತಿನ್ನುತ್ತಿದೆ, ಆದರೆ ದೇಶದಲ್ಲಿ ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡುತ್ತಿದ್ದಾರೆ.

ಶಾಕಿಂಗ್: ಪ್ರಖ್ಯಾತ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಜೀವ ಬೆದರಿಕೆ.!ಶಾಕಿಂಗ್: ಪ್ರಖ್ಯಾತ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಜೀವ ಬೆದರಿಕೆ.!

ಮಾಸ್ಕ್ ಹಾಕಿಕೊಂಡರೆ ಒಂದು ಪಕ್ಷ, ಮಾಸ್ಕ್ ಹಾಕದೇ ಇದ್ದರೆ ಇನ್ನೊಂದು ಪಕ್ಷ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಂದ ಇಂತಹ ಗೊಂದಲ ಉಂಟಾಗಿದೆ. ಜನರಿಗೆ ಕೊರೊನಾ ಕುರಿತು ಸರಿಯಾದ ತಿಳಿವಳಿಕೆ ಹೇಳಬೇಕಿದೆ. ಇಲ್ಲ ಎಂದರೆ ಮುಂದಿನ ದಿನಗಳಲ್ಲೂ ಅಮೆರಿಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಡಾ. ಫೌಸಿ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದಾರೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ.

ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ದೈಹಿಕ ಅಂತರ ಕಾಪಾಡದ ಅಮೆರಿಕದ ನಾಯಕರ ವಿರುದ್ಧ ವಿಶ್ವವೇ ಗರಂ ಆಗಿದೆ.

ಮುಂದಿನ 6 ವಾರಗಳು ಹಾರಿಬಲ್..!

ಮುಂದಿನ 6 ವಾರಗಳು ಹಾರಿಬಲ್..!

ಹೌದು, ಅಮೆರಿಕ ನಾಯಕರಿಗೆ ಈಗಾಗಲೇ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ 6 ವಾರಗಳು ಭಾರಿ ಗಂಡಾಂತರದಿಂದ ಕೂಡಿರಬಹುದು. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ನವೆಂಬರ್-ಡಿಸೆಂಬರ್ ವೇಳೆಗೆ ಪ್ರಾರಂಭವಾಗಿ ಜನವರಿ-ಫೆಬ್ರವರಿ ತಿಂಗಳವರೆಗೂ ಮುಂದುವರಿಯಲಿದೆ. ಅದರಲ್ಲೂ ಮುಂದಿನ 6 ವಾರಗಳು ಅಮೆರಿಕನ್ನರ ಪಾಲಿಗೆ ಹಾರಿಬಲ್ ಎಂದು ತಜ್ಞ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ

ಈ ಹಿಂದೆ ಟ್ರಂಪ್ ಡಿಸೆಂಬರ್ ಒಳಗಾಗಿ ವ್ಯಾಕ್ಸಿನ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಇದರ ಹಿಂದೆ ಚಳಿ ಹತ್ತಿರವಾಗುತ್ತಿದೆ ಎಂಬ ಮುನ್ಸೂಚನೆ ಕೂಡ ಇತ್ತು. ಆದರೆ ಟ್ರಂಪ್ ಭರವಸೆ ಈಡೇರಿಲ್ಲ, ಟ್ರಂಪ್ ಊಹೆ ಸುಳ್ಳಾಗಿ ಹೋಗಿದೆ. ಇಷ್ಟೆಲ್ಲದರ ಮಧ್ಯೆ 2 ಲಕ್ಷ 29 ಸಾವಿರ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಚಳಿಗಾಲ ಅಮೆರಿಕದ ನೆಲಕ್ಕೆ ಬಂದಪ್ಪಳಿಸುತ್ತಿರುವ ಈ ಕಾಲಘಟ್ಟದಲ್ಲಿ ಆ ಭಗವಂತನೇ ಅಲ್ಲಿನ ನಿವಾಸಿಗಳನ್ನು ಕಾಪಾಡಬೇಕು. ಮಾಮೂಲಿ ಚಳಿ ಇದ್ದಾಗಲೇ ಜನ ನೂರಾರು ರೋಗಿಗಳಿಗೆ ತುತ್ತಾಗುತ್ತಿದ್ದರು. ಆದರೆ ಈಗ ಬಂಪರ್ ಗಿಫ್ಟ್ ಎಂಬಂತೆ ಕೊರೊನಾ ಬಂದೆರಗಿದ್ದು, ದೊಡ್ಡಣ್ಣನ ನಾಡು ಸಂದಿಗ್ಧ ಸ್ಥಿತಿಯಲ್ಲಿ ಸುಧಾರಿಸಿಕೊಳ್ಳಲು ಕೂಡ ಸಾಧ್ಯವಾಗದೆ ನಲುಗಿ ಹೋಗಿದೆ.

Recommended Video

ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada
ಲಸಿಕೆ ನಂಬಿ ಕೂತರೆ ಸ್ಮಶಾನ..!

ಲಸಿಕೆ ನಂಬಿ ಕೂತರೆ ಸ್ಮಶಾನ..!

ಕೆಲ ದಿನಗಳ ಹಿಂದೆ ಬ್ರಿಟನ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ಒಂದು ಆಘಾತಕಾರಿ ಸಂಗತಿ ತಿಳಿಸಿದ್ದರು. ಕೊರೊನಾ ಸೋಂಕು ಅಷ್ಟು ಸುಲಭವಾಗಿ ಭೂಮಿಯಿಂದ ನಾಶವಾಗದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ ಇನ್ನೇನು ಲಸಿಕೆ ಬಂದುಬಿಡುತ್ತೆ, ಕೊರೊನಾ ಈ ಭೂಮಿಯನ್ನೇ ಬಿಟ್ಟು ತೊಲಗುತ್ತೆ ಎಂಬ ಊಹೆಗಳು ಇದ್ದರೆ ಮನಸ್ಸಿನಿಂದ ತೆಗೆದುಹಾಕಿ ಎಂದಿದ್ದರು.
ಏಕೆಂದರೆ ಈವರೆಗೂ ಯಾವುದೇ ಲಸಿಕೆಗಳು ಅಷ್ಟು ಪ್ರಭಾವ ಬೀರುತ್ತಿಲ್ಲ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆಯಿಂದ ಸದ್ಯಕ್ಕೆ ಕೊರೊನಾ ನಿಯಂತ್ರಿಸಬಹುದು. ಲಸಿಕೆ ಬಂದ ನಂತರ ಹಲವು ವರ್ಷಗಳ ಕಾಲ ಕೊರೊನಾ ಭೂಮಿ ಮೇಲೆ ಇರುತ್ತದೆ ಎಂದು ಎಚ್ಚರಿಸಿದ್ದರು. ತಜ್ಞರ ಎಚ್ಚರಿಕೆ ಬೆನ್ನಲ್ಲೇ ಅಮೆರಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿ ಆತಂಕವನ್ನು ಹೆಚ್ಚುಮಾಡಿದೆ.

English summary
Dr. Anthony Fauci says U.S. may not return to normal until 2022. Dr. Fauci also angered about the ongoing ‘politics of mask’ in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X