ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಸತ್ ಬಳಿ ಪ್ರತಿಭಟನೆ ಅಲ್ಲ, ಭೀಕರ ಯುದ್ಧ ನಡೆಸಲು ಬಂದಿದ್ದರು..!’

|
Google Oneindia Kannada News

ಅಮೆರಿಕದ ಸಂಸತ್ 'ಕ್ಯಾಪಿಟಲ್ ಹಿಲ್' ಮೇಲೆ ದಾಳಿ ನಡೆಸಿದ್ದ ಟ್ರಂಪ್ ಬೆಂಬಲಿಗರು ಕೇವಲ ಪ್ರತಿಭಟನೆ ಅಥವಾ ಹಿಂಸಾಚಾರ ನಡೆಸಲು ಬಂದಿರಲಿಲ್ಲ. ಬದಲಾಗಿ ಭೀಕರ ಯುದ್ಧಕ್ಕೆ ಅವರು ತಯಾರಿ ಮಾಡಿಕೊಂಡು ಎಂಟ್ರಿ ಕೊಟ್ಟಿದ್ದರು ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಸೆನೆಟ್ ಕಮಿಟಿ ವಿಚಾರಣೆ ಸಂದರ್ಭದಲ್ಲಿ ಈ ರೀತಿ ಹಲವು ಶಾಕಿಂಗ್ ಸಂಗತಿಗಳು ರಿವೀಲ್ ಆಗಿವೆ.

ಜ. 6ರಂದು ಟ್ರಂಪ್ ಬೆಂಬಲಿಗರು ಏಕಾಏಕಿ ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಮೊದಲಿಗೆ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸದ ಭದ್ರತಾ ಸಿಬ್ಬಂದಿಗೆ ಶಾಕ್ ಆಗಿತ್ತು. ಏಕೆಂದರೆ ನೋಡ ನೋಡುತ್ತಿದ್ದಂತೆ ಹಲ್ಲಿಗಳಂತೆ ಗೋಡೆ, ಕಾಂಪೌಂಡ್‌ನ್ನು ಏರಿದ್ದ ಕಿರಾತಕರು ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರ ಸಾವಿಗೂ ಕಾರಣರಾಗಿದ್ದರು. ಆದರೆ ಹಿಂಸೆಯಲ್ಲಿ ತೊಡಗಿದ್ದ ಟ್ರಂಪ್ ಬೆಂಬಲಿಗರನ್ನು ನಿಭಾಯಿಸಲು ಆಗಲಿಲ್ಲ. ಕಡೆಗೆ ಭದ್ರತಾ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಓಡಿದ್ದರು.

ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..! ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..!

ಈ ವಿಡಿಯೋಗಳು ಈಗಲೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗಲೇ ಸೆನೆಟ್ ಸಮಿತಿ ವಿಚಾರಣೆ ವೇಳೆ ಹಿಂಸೆ ನಡೆಸಿದವರ ಬಗ್ಗೆ ಹಲವು ಆಘಾತಕಾರಿ ಸಂಗತಿಗಳು ಬಯಲಾಗುತ್ತಿವೆ.

ಗೊತ್ತಿದ್ದೂ ಸೇನೆ ನಿಯೋಜಿಸಲಿಲ್ವಾ..?

ಗೊತ್ತಿದ್ದೂ ಸೇನೆ ನಿಯೋಜಿಸಲಿಲ್ವಾ..?

ಎಫ್‌ಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಕ್ಯಾಪಿಟಲ್ ಹಿಲ್ ದಾಳಿಯ ಮುನ್ಸೂಚನೆ ನೀಡಿದ್ದವು. ಆ ಕೂಡಲೇ ಅಲರ್ಟ್ ಆಗಬೇಕಿದ್ದ ಟ್ರಂಪ್ ಸರ್ಕಾರ ಬೇಕೆಂದು ಸುಮ್ಮನಾಗಿತ್ತು ಎಂಬ ಆರೋಪ, ದಾಳಿ ನಡೆದ ಮೊದಲ ದಿನದಿಂದಲೇ ಕೇಳಿಬರುತ್ತಿದೆ. ಇನ್ನು ಈ ಆರೋಪ ಸತ್ಯ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಗುತ್ತಿವೆ.

ಹಿಂಸಾಚಾರದ ವೇಳೆ ಕ್ಯಾಪಿಟಲ್ ಹಿಲ್‌ನಲ್ಲಿ ಸೆಕ್ಯೂರಿಟಿ ನೀಡಿದ್ದ ಅಧಿಕಾರಿಗಳೇ ಆಘಾತಕಾರಿ ವಿಚಾರಗಳನ್ನು ಬಯಲು ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಹಿಂಸಾಚಾರ ಭುಗಿಲೆದ್ದ ಕೂಡಲೇ ಸೇನೆಯನ್ನು ನಿಯೋಜನೆ ಮಾಡಬಹುದಿತ್ತು. ಆದರೆ ಅಂದಿನ ಸರ್ಕಾರ ಅಂದರೆ ಟ್ರಂಪ್ ಆಡಳಿತ ಈ ಕೆಲಸ ಮಾಡಲಿಲ್ಲ ಎಂದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜನವರಿ 6ರಂದು ನಡೆದಿದ್ದೇನು..?

ಜನವರಿ 6ರಂದು ನಡೆದಿದ್ದೇನು..?

ಮಚ್ಚು, ಲಾಂಗ್, ಬಾಕು, (ಇದೇ ರೀತಿ ಮಾರಕಾಸ್ತ್ರ) ಗನ್ ಹಿಡಿದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಹಿಂಸೆ ನಡೆಯುವ ಮುನ್ನ ಟ್ರಂಪ್ ತಮ್ಮ ಬೆಂಬಲಿಗರನ್ನ ಉದ್ದೇಶಿಸಿ ಮಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎಂಬ ಆರೋಪವೂ ಇತ್ತು. ಇದೇ ಭಾಷಣದಿಂದ ಕ್ಯಾಪಿಟಲ್ ಹಿಲ್‌ನಲ್ಲಿ ಹಿಂಸೆ ನಡೆದಿದೆ ಎಂಬುದು ವಿಪಕ್ಷಗಳ ವಾದವಾಗಿತ್ತು. ಹೀಗಾಗಿ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಯಲಿ ಎಂದು ಪಟ್ಟು ಹಿಡಿದಿದ್ದರು ಡೆಮಾಕ್ರಟಿಕ್ ಸದಸ್ಯರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷ 'ರಿಪಬ್ಲಿಕನ್ ಪಾರ್ಟಿ' ಸದಸ್ಯರ ಬೆಂಬಲವೂ ಇತ್ತು. ಆದರೆ ಕೆಳಮನೆ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಕೈಗೊಂಡರೂ ಸೆನೆಟ್‌ನಲ್ಲಿ ಸೋಲಾಯಿತು. ಹೀಗಾಗಿ ಕೂದಲೆಳೆ ಅಂತರದಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಬಚಾವ್ ಆಗಿದ್ದರು.

ಸಂಸತ್ ಹಿಂಸಾಚಾರದ ಸ್ವತಂತ್ರ ತನಿಖೆ, ಟ್ರಂಪ್ ಬೆನ್ನೇರಿದನಾ ಶನಿ?ಸಂಸತ್ ಹಿಂಸಾಚಾರದ ಸ್ವತಂತ್ರ ತನಿಖೆ, ಟ್ರಂಪ್ ಬೆನ್ನೇರಿದನಾ ಶನಿ?

230ಕ್ಕೂ ಹೆಚ್ಚು ಜನರಿಗೆ ಜೈಲೂಟ..!

230ಕ್ಕೂ ಹೆಚ್ಚು ಜನರಿಗೆ ಜೈಲೂಟ..!

ಈವರೆಗೂ ಅಮೆರಿಕದ ತನಿಖಾ ಸಂಸ್ಥೆಗಳು 230 ಜನರ ವಿರುದ್ಧ ಪ್ರಕರಣ ದಾಖಲಿಸಿವೆ. ಕ್ಯಾಪಿಟಲ್ ಹಿಲ್ ಅಟ್ಯಾಕ್ ಸಂಬಂಧ ಇವರನ್ನೆಲ್ಲಾ ಬಂಧಿಸಲಾಗಿದೆ. ಸಂಸತ್ ಭವನಕ್ಕೆ ನುಗ್ಗಿ ಹುಚ್ಚರಂತೆ ವರ್ತಿಸಿದ್ದೂ ಅಲ್ಲದೆ ಹಿಂಸೆ ನಡೆಸಿದ್ದರಂತೆ ಇವರು. ಇದನ್ನೆಲ್ಲಾ ತೀರಾ ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕದ ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಟ್ರಂಪ್ ಮತ್ತು ಟ್ರಂಪ್ ಗ್ಯಾಂಗ್ ವಿರುದ್ಧ ತಿರುಗಿಬಿದ್ದರು. ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದ್ದು, ಅವರಿಗಾಗಿ ಇಂಚಿಂಚು ಜಾಗವನ್ನೂ ತನಿಖಾಧಿಕಾರಿಗಳು ಬೆದಕುತ್ತಿದ್ದಾರೆ.

ಎಲ್ಲೋ ಹೋದ್ರು ಅವರೆಲ್ಲಾ..?

ಎಲ್ಲೋ ಹೋದ್ರು ಅವರೆಲ್ಲಾ..?

ಬೈಡನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಅಮೆರಿಕ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕ್ಯಾಪಿಟಲ್ ಹಿಲ್ ಗಲಭೆಕೋರರ ಹೆಡೆಮುರಿ ಕಟ್ಟಲು ಖೆಡ್ಡಾ ತೋಡಿದ್ದಾರೆ. ಹೀಗೆ ಎಲ್ಲೆಲ್ಲಿ ಹಿಂಸಾಚಾರ ನಡೆಸಿದ್ದವರು ಅಡಗಿದ್ದಾರೆ ಎಂಬುದನ್ನ ಹುಡುಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಕಿರಾತಕರು, ತಮ್ಮ ಮೊಬೈಲ್‌ಗಳನ್ನು ನಾಶ ಮಾಡುವ ಜೊತೆಗೆ ಸೋಷಿಯಲ್ ಮೀಡಿಯಾಗಳಿಂದ ಓಡಿ ಬಂದಿದ್ದಾರೆ. ಆ ದಿನ ಅಂದರೆ ಜನವರಿ 6ರಂದು ಹಿಂಸೆ ನಡೆಯುವಾಗ ಹಾಕಿದ್ದ ಪ್ರಚೋದನಕಾರಿ ಪೋಸ್ಟ್‌ಗಳನ್ನ ಕೂಡ ಸದ್ಯ ಡಿಲೀಟ್ ಮಾಡಿ ಬಿಸಾಕಿದ್ದಾರೆ. ಹೀಗಾಗಿ ಹಿಂಸೆ ನಡೆಸಿದ್ದ ಹಲವರು ಎಲ್ಲೋದರು ಅನ್ನೋದೇ ಗೊತ್ತಾಗುತ್ತಿಲ್ಲ.

English summary
US Security officials are revealed that, rioters were came with war materials to 'Capitol hill'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X