ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ನಲ್ಲಿ ದಿಗ್ಭ್ರಮೆ ಮೂಡಿಸಿದ ಎರಡು ಬಾಯಿಯ ಮೀನು!

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 22: ಉತ್ತರ ಅಮೆರಿಕದ ಲೇಕ್ ಚಾಂಪ್ಲೇನ್ ನಲ್ಲಿ ಸಿಕ್ಕ ಎರಡು ತಲೆಯ ಮೀನೊಂದು ಇಂಟ್ರನೆಟ್ ಲೋಕದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.

ಡೆಬ್ಬೀ ಗೆಡ್ಡಸ್ ಎಂಬ ಮಹಿಳೆಯೊಬ್ಬರು ಲೇಕ್ ಚಾಂಪ್ಲೇನ್ ನಲ್ಲಿ ಮೀನು ಹಿಡಿಯುತ್ತಿದ್ದಾಗ ಬಲೆಗೆ ಬಿದ್ದ ಮೀನು ವಿಲಕ್ಷಣವಾಗಿತ್ತು. ಹತ್ತಿರ ಹೊಗಿ ನೋಡಿದರೆ ಅದಕ್ಕೆ ಎರಡು ಬಾಯಿ ಇತ್ತು. ಇದರಿಂದ ದಿಗ್ಭ್ರಾಂತರಾದ ಡೆಬ್ಬೀ ಮತ್ತು ಆಕೆಯ ಪತಿ, ತಕ್ಷಣವೇ ಅದರ ಕೆಲವು ಚಿತ್ರಗಳನ್ನು ತೆಗೆದುಕೊಂಡು, ಅದಕ್ಕೆ ಯಾವುದೇ ಹಾನಿಯುಂಟು ಮಾಡದೆ ಮತ್ತೆ ನದಿಗೆ ಬಿಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ... ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...

"ಎರಡು ಬಾಯಿ ಇದ್ದರೂ ಆ ಮೀನು ಆರೋಗ್ಯವಂತವಾಗಿಯೇ ಇತ್ತು, ನೋಡುವುದಕ್ಕೂ ಸುಂದರವಾಗಿತ್ತು. ನಮ್ಮ ಕಣ್ಣನ್ನೇ ನಮಗೆ ನಂಬಲಾಗಲಿಲ್ಲ" ಎಂದು ಕಣ್ಣು ಅಗಲಿಸಿ ಹೇಳುತ್ತಾರೆ ಡೆಬ್ಬೀ.

North America: Fish With Two Mouths Becomes Viral On Social Media

ನಾಟ್ಟಿ ಬಾಯ್ಸ್ ಫಿಶಿಂಗ್ ಎಂಬ ಫೇಸ್ಬುಕ್ ಪುಟದಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 6.4 ಜನ ಈ ಚಿತ್ರವನ್ನು ಶೇರ್ ಮಾಡಿದ್ದರೆ, ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ

ಈ ಚಿತ್ರಕ್ಕೆ ಕಮೆಂಟ್ ಮಾಡಿರುವ ಜೀವಶಾಸ್ತ್ರಜ್ಞರೊಬ್ಬರು, 'ಭ್ರೂಣಸಲ್ಲಿ ಯಾವುದಾದರೂ ವಕ್ರತೆ, ವಿರೂಪತೆಯಿದ್ದರೆ ಈ ರೀತಿಯಾಗುತ್ತದೆ. ಇದಕ್ಕೆ ಬೇರೆ ಯಾವ ಅರ್ಥವನ್ನೂ ಕಲ್ಪಿಸಬೇಕಿಲ್ಲ. ಆದರೆ ಈ ರೀತಿ ಆಗುವುದು ಅತ್ಯಂತ ಅಪರೂಪ' ಎಂದಿದ್ದಾರೆ.

ಮತ್ತೆ ಕೆಲವರು, "ಇದು ಎರಡೂ ಬಾಯಿ ಅಲ್ಲ. ಬಹುಶಃ ಯಾವುದೋ ಮಾಯದ ಗಾಯದಿಂದ ಹೀಗಾಗಿರಬಹುದು" ಎಂದಿದ್ದಾರೆ.

English summary
A Fish With Two Mouths which was found in Lake Champlain, North America shocks the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X