ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯಾರೂ ನನ್ನ ಇಷ್ಟಪಡುವುದಿಲ್ಲ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ಯಾಕೆ?

|
Google Oneindia Kannada News

ವಾಷಿಂಗ್ಟನ್,ಜುಲೈ 29: ಅಮೆರಿಕದಲ್ಲಿ ಕೊವಿಡ್ 19 ಪರಿಸ್ಥಿತಿ ವಿಷಮಗೊಳಿಸುತ್ತಿರುವುದು ಹಾಗೂ ಅದಕ್ಕೆ ಬರುತ್ತಿರುವ ಟೀಕೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಡಂಬನಾತ್ಮಕ ಹೇಳಿಕೆ ನೀಡಿದ್ದಾರೆ.

Recommended Video

Corona ಚಳಿಯಲ್ಲಿ ಹೆಚ್ಚಾಗಲಿದೆಯಾ ? WHO ಹೇಳೋದೇನು | Oneindia kannada

ಡಾ. ಆಂಥೊನಿ ಫಾಸಿ ಹಾಗೂ ಡಾ. ಎಲ್ ಬ್ರಿಕ್ಸ್ ಅಮೆರಿಕ ಸರ್ಕಾರದ ಕೊವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿ ಉತ್ತಮ ರೇಟಿಂಗ್ ನೀಡಿದ್ದಾರೆ. ಸರ್ಕಾರವು ಉತ್ತಮ ಕೆಲಸಗಳನ್ನು ಮಾಡಿದೆ ಆದರೂ ಕೆಲವರಿಗೆ ಇದನ್ನು ಸ್ವೀಕರಿಸಲಾಗುತ್ತಿಲ್ಲ. ಯಾರೂ ನನ್ನನ್ನು ಇಷ್ಟಪಡುವುದಿಲ್ಲ , ಆದರೆ ನಾನೇನು ಮಾಡಲಾಗದು ಇದು ನನ್ನ ವ್ಯಕ್ತಿತ್ವ ಎಂದು ಹೇಳಿಕೊಂಡಿದ್ದಾರೆ.

ಕೋವಿಡ್‌ಗೆ ಸಿಕ್ಕಿತಾ ಔಷಧಿ?; ಕುತೂಹಲ ಮೂಡಿಸಿದ ಡೊನಾಲ್ಡ್ ಟ್ರಂಪ್ ಟ್ವೀಟ್ಕೋವಿಡ್‌ಗೆ ಸಿಕ್ಕಿತಾ ಔಷಧಿ?; ಕುತೂಹಲ ಮೂಡಿಸಿದ ಡೊನಾಲ್ಡ್ ಟ್ರಂಪ್ ಟ್ವೀಟ್

ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಕೊವಿಡ್ 19 ಪರೀಕ್ಷೆಯಗಳನ್ನು ಮಾಡಿದೆ. ವಿಶ್ವದ ಇನ್ಯಾವ ರಾಷ್ಟ್ರಗಳಲ್ಲಿ ಈ ಪ್ರಮಾಣದ ಪರೀಕ್ಷೆಗಳನ್ನು ನಡೆಸಿಲ್ಲ, ಅಮೆರಿಕದಲ್ಲಿ ನಡೆಸಿದ್ದರಿಂದಲೇ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

Nobody likes me: Donald Trump complains approval rating is lower than Anthony Faucis

ಪರೀಕ್ಷೆಯ ಪ್ರಮಾಣದ ಗ್ರಾಫ್ ಅನ್ನು ನೋಡಿದಾಗ, ಅದರಲ್ಲಿ ಗಮನಿಸಿದರೆ ಟೀಕಾಕಾರರ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.ಅಮೆರಿಕದ ಗ್ರಾಫ್ ಉತ್ತುಂಗದಲ್ಲಿದ್ದರೆ ವಿಶ್ವದ ಇನ್ನಿತರೆ ದೇಶಗಳು ಕೆಳಗಿವೆ, ಟೀಕಾಕಾರರು ಟೀಕೆ ಮಾಡುವ ಮುನ್ನ ಇದೆಲ್ಲವನ್ನು ಗಮನಿಸಿಸಬೇಕು, ಅನವಶ್ಯಕ ರಾಜಕೀಯ ಮಾಡುವುದರಿಂದ ಪ್ರಯೋಜನವಾಗದು. ಗ್ರಾಫ್‌ನ ಅಂಕಿ ಅಂಶಗಳೇ ಎಲ್ಲಾ ಸತ್ಯವನ್ನು ಹೇಳುತ್ತದೆ, ನಾನು ಹೆಚ್ಚು ವಿವರಿಸುವ ಅಗತ್ಯವಿಲ್ಲವೆಂದು ನುಡಿದಿದ್ದಾರೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ತೆಗೆದುಕೊಂಡರೆ ಸಾಕು ಯಾವುದೇ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದಿದ್ದ ವಿಡಿಯೋ ಒಂದನ್ನು ಟ್ರಂಪ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಬಳಿಕ ಡಿಲೀಟ್ ಮಾಡಿದ್ದರು.

ಡಾ ಫಾಸಿ ಈ ಕುರಿತು ಮಾತನಾಡಿ, ಹೈಡ್ರಾಕ್ಸಿಕ್ಲೋರೊಕ್ವಿನ್ ನಿಂದ ಕೊರೊನಾ ಸೋಂಕು ಗುಣವಾಗುತ್ತದೆ ಎಂದು ಎಲ್ಲಿಯೂ ಇಲ್ಲ, ಕೊರೊನಾ ಸೋಂಕಿತರು ಗುಣಮುಖವೂ ಆಗಿಲ್ಲ, ಸಾವಿನ ಸಂಖ್ಯೆಯೂ ಕಡಿಮೆಯಾಗಿಲ್ಲ ಎಂದು ಹೇಳಿದ್ದರು.

English summary
President Donald Trump devolved into self-pity during a White House coronavirus briefing Tuesday, lamenting that his approval ratings were lower than those of two top government medical experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X