ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ H1B ವೀಸಾ ನಿಯಮದಲ್ಲಿ ಬದಲಾವಣೆ ತಂದ ಬೈಡನ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ವಾಷಿಂಗ್ಟನ್, ಜನವರಿ 28: ''ಸ್ಥಳೀಯರಿಗೆ ಉದ್ಯೋಗ ನೀಡಬೇಕು'' ಎಂಬ ಕೂಗಿಗೆ ಬೆಲೆ ಕೊಟ್ಟು ಡೊನಾಲ್ಡ್ ಟ್ರಂಪ್ ಸರ್ಕಾರ ತಂದಿದ್ದ ವೀಸಾ ನೀತಿ ನಿಯಮಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂಪೂರ್ಣ ಬದಲಾಯಿಸಿದ್ದಾರೆ.

ಟ್ರಂಪ್ ನೀತಿಯನ್ನು ಹಿಂಪಡೆದು, H1B ವೀಸಾ ವಿಚಾರದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದಾರೆ. ಹಾಗೇ ನೂತನ ಪೌರತ್ವ ನೀತಿಯಲ್ಲಿ ಕುಟುಂಬ ಆಧಾರಿತ ವಲಸೆ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಟ್ರಂಪ್‌ ಆಡಳಿತದಲ್ಲಿ 'ಗ್ರೀನ್‌ ಕಾರ್ಡ್‌' ಹೊಂದಿರುವ ಜನರಿಗೂ ಅಮೆರಿಕ ಪೌರತ್ವ ನೀಡುವ ಕಾರ್ಯ ನಿಂತುಹೋಗಿತ್ತು. ಗ್ರೀನ್‌ ಕಾರ್ಡ್‌ ಇರುವವರಿಗೆ ಉದ್ಯೋಗ ಆಧಾರಿತ ವೀಸಾ ನೀಡಲಾಗುತ್ತಿದ್ದು, ಇವರು ಅಮೆರಿಕದ ಶಾಶ್ವತ ಪೌರತ್ವ ಪಡೆಯಬಹುದು.

ಅಮೆರಿಕದಲ್ಲಿ ಈಗ ಸುಮಾರು 6 ಲಕ್ಷ ಎಚ್ -1 ಬಿ ವೀಸಾ ಹೊಂದಿರುವವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತ ಮೂಲದವರು. ಚೀನಾವು ಎರಡನೇ ಸ್ಥಾನದಲ್ಲಿದೆ. ಹೊರಗಿನಿಂದ ಬರುವ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಪ್ರತಿ ವರ್ಷ ಅಮೆರಿಕ ಸರ್ಕಾರವು 85 ಸಾವಿರ ಎಚ್ -1 ಬಿ (H-1B) ವೀಸಾಗಳನ್ನು ನೀಡುತ್ತದೆ. ಇದು ಅತಿ ಹೆಚ್ಚು ಐಟಿ ವೃತ್ತಿಪರರನ್ನು ಹೊಂದಿದೆ.

ಒಬಾಮಾ ನೀತಿ ಬದಲಾಯಿಸಿದ್ದ ಟ್ರಂಪ್

ಒಬಾಮಾ ನೀತಿ ಬದಲಾಯಿಸಿದ್ದ ಟ್ರಂಪ್

ಈ ಹಿಂದಿನ ಒಬಾಮ ಸರ್ಕಾರವು ವೀಸಾ ನಿಯಮ ಸಡಿಲಿಸಿ ಸುಮಾರು 71,000 ಎಚ್-1ಬಿ ವೀಸಾ ಪಡೆದ ಸಂಗಾತಿಗಳಿಗೆ ನೆರವಾಗಿತ್ತು. ಇವರಲ್ಲಿ ಶೇಕಡ 90ಕ್ಕೂ ಹೆಚ್ಚು ಉದ್ಯೋಗಿಗಳು ಭಾರತೀಯರಾಗಿದ್ದರು. ಎಚ್-1ಬಿ ವೀಸಾ ಪಡೆದ ಉದ್ಯೋಗಿಗಳ ಸಂಗಾತಿಗಳಿಗೂ ಉದ್ಯೋಗ ಮಾಡಲು ಅವಕಾಶ ನೀಡುವ ನಿಟ್ಟಿನಲ್ಲಿ 2015ರಲ್ಲಿ ಎಚ್-4 ವೀಸಾವನ್ನು ಒಬಾಮ ಸರ್ಕಾರ ನೀಡಿತ್ತು.

ಆದರೆ, ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕೂಗೆದಿದ್ದರಿಂದ ಟ್ರಂಪ್ ಈ ನಿಯಮ ಬದಲಾಯಿಸಿದ್ದರು. ಆದರೆ, ಟ್ರಂಪ್ ನೀತಿ, ನಿರ್ಬಂಧಗಳನ್ನು ಯುಎಸ್ ನ್ಯಾಯಾಲಯ ರದ್ದುಗೊಳಿಸಿತ್ತು.

ಬೈಡನ್ ತಂದಿರುವ ಪ್ರಮುಖ ಬದಲಾವಣೆ ಏನು?

ಬೈಡನ್ ತಂದಿರುವ ಪ್ರಮುಖ ಬದಲಾವಣೆ ಏನು?

ಎಚ್ 4 ವೀಸಾ ಹೊಂದಿರುವವರಿಗೆ ವೃತ್ತಿಪರ ಪ್ರಮಾಣ ಪತ್ರ ನಿಯಮ ರದ್ದು ಆದೇಶ ಹಿಂಪಡೆಯಲಾಗಿದೆ. ಎಚ್ 1 ಬಿ ವೀಸಾ ಹೊಂದಿರುವ ಸಿಬ್ಬಂದಿಯ ಅವಲಂಬಿತ ಪತಿ ಅಥವಾ ಪತ್ನಿಗೆ ನೀಡುವ ಎಚ್ 4 ವೀಸಾ ರದ್ದುಗೊಳಿಸಲು ಟ್ರಂಪ್ ನೀಡಿದ್ದ ಆದೇಶವನ್ನು ಬೈಡನ್ ರದ್ದುಗೊಳಿಸಿದ್ದಾರೆ.(Removing H-4 Dependent Spouses from the Class of Aliens Eligible for Employment Authorisation) ಹೀಗಾಗಿ, ಎಚ್ 1 ಬಿ ವೀಸಾ ಹೊಂದಿರುವ ವ್ಯಕ್ತಿಯ ಸಂಗಾತಿ ಅಥವಾ 21ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಎಚ್ 4 ವೀಸಾ ನೀಡಬಹುದು ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ನೀತಿಯಲ್ಲಿ ಬದಲಾವಣೆ ತರಲಾಗಿದೆ.

ಟ್ರಂಪ್ ತಂದ ವೀಸಾ ನೀತಿಯಿಂದ ಆತಂಕ ಉಂಟಾಗಿತ್ತು

ಟ್ರಂಪ್ ತಂದ ವೀಸಾ ನೀತಿಯಿಂದ ಆತಂಕ ಉಂಟಾಗಿತ್ತು

ಪತಿ ಹಾಗೂ ಪತ್ನಿಯು ಪ್ರತ್ಯೇಕವಾಗಿ ಎಚ್-1ಬಿ ವೀಸಾ ಪಡೆಯಲು ಅರ್ಹರಾಗಿದ್ದರೆ ಹಾಗೂ ಇಬ್ಬರು ಕೌಶಲ್ಯ ಆಧಾರದ ಮೇಲೆ ವೀಸಾ ಪಡೆದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಎಚ್-1 ಬಿ ವೀಸಾ ಅವಲಂಬಿತ ಎಚ್ 4 ವೀಸಾ ಹೊಂದಿದವರಿಗೆ ಮಾತ್ರ ಸದ್ಯಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಟ್ರಂಪ್ ಹೇಳಿದ್ದರು. ವರದಿಗಳ ಪ್ರಕಾರ ಎಚ್-4 ವೀಸಾ ಸುಮಾರು 1 ಲಕ್ಷ ಜನ ಪಡೆದುಕೊಂಡಿದ್ದರೆ ಅದರಲ್ಲಿ ಶೇ.94 ಮಂದಿ ಭಾರತೀಯರೇ ಇರುವುದು ವಿಶೇಷ.

ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ

ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ

2015ರಿಂದ ಈಚೆಗೆ ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿ ಅಥವಾ ಉನ್ನತ ಕೌಶಲ್ಯ ಇರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ವೀಸಾ ಇರುವಂಥವರು ಎಚ್ -4 ಅವಲಂಬಿತ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಿತ್ತು. ಒಬಾಮ ಆಡಳಿತಾವಧಿಯಲ್ಲಿ ಈ ನಿಯಮ ಪರಿಚಯಿಸಲಾಗಿತ್ತು. ಆದರೆ, ಕಳೆದ ಅಧ್ಯಕ್ಷೀಯ ಚುನಾವಣೆ ಬಳಿಕ ಅಮೆರಿಕದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆದರೆ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಎಚ್-4 ವೀಸಾ ರದ್ದು ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಕೋವಿಡ್ 19 ಸಂದರ್ಭದಲ್ಲಿ ವೀಸಾ ನೀತಿಯನ್ನು ಟ್ರಂಪ್ ಸರ್ಕಾರ ಇನ್ನಷ್ಟು ಬಿಗಿಗೊಳಿಸಿತ್ತು.

English summary
The Joe Biden administration on Thursday reversed former President Donald Trump's order on work permit for H4 workers who are spouses of those possessing H-1B work visas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X