ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ: ಸಾಮಾನ್ಯ ಸಭೆಯಲ್ಲಿ ಅಫ್ಘಾನಿಸ್ತಾನದಿಂದ ಯಾರೂ ಪ್ರತಿನಿಧಿಸಿಲ್ಲ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 28:ವಿಶ್ವಸಂಸ್ಥೆಯಲ್ಲಿ ಯಾರೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಲೇ ಇಲ್ಲ. ಸೋಮವಾರ ಅಫ್ಘಾನ್ ರಾಯಭಾರಿ ಗುಲಾಮ್ ಇಸಾಕ್‌ಜಾಯ್ ರಾಷ್ಟ್ರವನ್ನುದ್ದೇಶಿ ಮಾಡತನಾಡಬೇಕಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಅದಕ್ಕೆ ಕಾರಣವಿದೆ, ತಿಂಗಳ ಹಿಂದಷ್ಟೇ ಸ್ಥಾಪಿತಗೊಂಡಿರುವ ತಾಲಿಬಾನ್ ಆಡಳಿತವು ಇಸಾಕ್‌ಜಾಯ್ ಅವರನ್ನು ತಮ್ಮ ಸರ್ಕಾರದ ರಾಯಭಾರಿ ಸ್ಥಾನದಿಂದ ಕಿತ್ತುಹಾಕಿದೆ.

 UNGA ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ಪ್ರೈಸ್‌ಗೆ ಕೊರೊನಾ ಸೋಂಕು UNGA ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ಪ್ರೈಸ್‌ಗೆ ಕೊರೊನಾ ಸೋಂಕು

ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ನಿಗದಿಯಾಗಿದ್ದ ಒಂದು ದಿನ ಮೊದಲು ಇಸಾಕ್‌ಜಾಯ್ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ.

No One From Afghanistan, Myanmar Addressed UN General Assembly

ತಾಲಿಬಾನ್ ಆಡಳಿತದಿಂದ ಪದಚ್ಯುತಿಗೊಂಡಿದ್ದರೂ ಗುಲಾಮ್ ಇಸಾಕ್‌ಜಾಯ್ ಅವರು ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸುವ ಅಧಿಕೃತ ರಾಯಭಾರಿಯಾಗಿದ್ದರು. ಮಾನ್ಯತೆ ಪತ್ರವನ್ನು ನವೀಕರಿಸುವಂತೆ ಕೋರಲಾಗಿತ್ತು.

ಕೊನೆಗೆ ಇಸಾಕ್‌ಜಾಯ್ ಅವರೇ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ. ಈ ನಿರ್ಣಯ ಬಗ್ಗೆ ಇಸಾಕ್‌ಜಾಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಬೇಕು ಎಂದು ತಾಲಿಬಾನ್ ಮನವಿ ಮಾಡಿತ್ತು.

ವಿಶ್ವಸಂಸ್ಥೆಯ ಅಫ್ಘಾನಿಸ್ತಾನ ರಾಯಭಾರಿಯನ್ನಾಗಿ ದೋಹಾ ಮೂಲದ ವಕ್ತಾರ ಸುಹೈಲ್ ಶಹೀನ್‌ನನ್ನು ನೇಮಕ ಮಾಡಿತ್ತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಪತ್ರ ಬರೆದಿದ್ದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಈ ಮನವಿ ಸಲ್ಲಿಸಿದ್ದಾನೆ.

ಸೋಮವಾರ ಅಂತ್ಯಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಮುತ್ತಾಕಿ ಕೋರಿದ್ದನು.

ಮುತ್ತಾಕಿ ಪತ್ರ ಬರೆದಿರುವುದನ್ನು ಗುಟೆರಸ್ ಅವರ ವಕ್ತಾರ ಫರ್ಹಾನ್ ಹಖ್ ಖಚಿತಪಡಿಸಿದ್ದರು, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ರಾಯಭಾರಿಯಾಗಿ ಪ್ರತಿನಿಧಿಸುತ್ತಿದ್ದ ಗುಲಾಮ್ ಇಸಾಕ್‌ಜೈ ಅವರು ಕಳೆದ ತಿಂಗಳು ಅಫ್ಘಾನಿಸ್ತಾನ ಸರ್ಕಾರವನ್ನು ಉರುಳಿಸಿದ ಬಳಿಕ ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ ಎಂಬುದನ್ನು ಇದು ಸೂಚಿಸಿದೆ.

ವಿಶ್ವಸಂಸ್ಥೆಯಲ್ಲಿ ಸ್ಥಾನ ನೀಡಬೇಕೆಂದು ತಾಲಿಬಾನಿಗಳು ಸಲ್ಲಿಸಿದ ಮನವಿಯನ್ನು ಅಮೆರಿಕ, ಚೀನಾ, ರಷ್ಯಾ, ಬಹಮಾಸ್, ಭೂತಾನ್, ಚಿಲಿ, ನಮೀಬಿಯಾ, ಸಿಯೆರಾ ಲಿಯೋನ್ ಮತ್ತು ಸ್ವೀಡನ್ ಸದಸ್ಯರನ್ನು ಒಳಗೊಂಡ 9 ಸದಸ್ಯರ ಅರ್ಹತಾ ಸಮಿತಿಗೆ ರವಾನಿಸಲಾಗಿತ್ತು.

1996-2001ರ ಅವಧಿಯಲ್ಲಿ ತಾಲಿಬಾನ್ ಆಡಳಿತ ನಡೆಸಿದ್ದಾಗ ಅಫ್ಘಾನಿಸ್ತಾನದ ಸರ್ಕಾರವನ್ನು ಉರುಳಿಸಿದ್ದರೂ, ವಿಶ್ವಸಂಸ್ಥೆಯಲ್ಲಿನ ಅಫ್ಘನ್ ಪ್ರತಿನಿಧಿಯನ್ನಾಗಿ ತಾಲಿಬಾನ್ ಆಯ್ಕೆ ಮಾಡಿದ ವ್ಯಕ್ತಿಗೆ ಅವಕಾಶ ನೀಡುವ ಬಗ್ಗೆ ಅರ್ಹತಾ ಸಮಿತಿ ನಿರ್ಧಾರ ತೆಗೆದುಕೊಳ್ಳುವುದನ್ನು ವಿಳಂಬ ಮಾಡಿತ್ತು. ಹೀಗಾಗಿ ಹಿಂದಿನ ಸರ್ಕಾರದ ಪ್ರತಿನಿಧಿಯೇ ಮುಂದುವರಿದಿದ್ದರು.

ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್ ಪ್ರತಿನಿಧಿಯು ಗೈರಾಗಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್ ಚುನಾಯಿತ ಸರ್ಕಾರವನ್ನು ತೆಗೆದುಹಾಕಿ ಮಿಲಿಟರಿ ಆಡಳಿತ ಹೇರಲ್ಪಟ್ಟಿದೆ.

English summary
No representatives from Myanmar and Afghanistan addressed the world leaders at the 76th United Nations General Assembly despite a discourse scheduled initially for the last day of the General Debate on Tuesday, September 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X