ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇನ್ನು ಸಹಿಸೋಕಾಗಲ್ಲ', ಭಾರತಕ್ಕೆ ಡೊನಾಲ್ಡ್ ಟ್ರಂಪ್ ಟ್ವೀಟ್ ಬಾಣ

|
Google Oneindia Kannada News

ವಾಷಿಂಗ್ಟನ್, ಜುಲೈ 09: "ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ಅತೀ ಹೆಚ್ಚು ಆಮದು ಸುಂಕ ಹಾಕುತ್ತಿದೆ, ಇದನ್ನು ಇನ್ನು ಸಹಿಸುವುದಕ್ಕೆ ಆಗುವುದಿಲ್ಲ" ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಜೂನ್ 27 ರಂದು ಜಪಾನಿನ ಒಸಾಕದಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, ''ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ" ಎಂದಿದ್ದರು. ಇದೀಗ ಮತ್ತೆ ಟ್ವೀಟ್ ಮಾಡಿರುವ ಅವರು 'ಇನ್ನು ಮುಂದೆ ಇದನ್ನು ಕ್ಷಮಿಸುವುದಿಲ್ಲ' ಎಂದಿದ್ದಾರೆ.

'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

ಹಾರ್ಲೆ ಡೆವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ ಎಂದು ಟ್ರಂಪ್ ದೂರಿದ್ದರು.

No longer acceptable Donald trump again warns India on tariff

'ಇದು ಸ್ವೀಕಾರಾರ್ಹವಲ್ಲ,' ಎಂದು ಮೋದಿ ಜೊತೆ ಮಾತುಕತೆಗೆ ನಿಂತ ಟ್ರಂಪ್'ಇದು ಸ್ವೀಕಾರಾರ್ಹವಲ್ಲ,' ಎಂದು ಮೋದಿ ಜೊತೆ ಮಾತುಕತೆಗೆ ನಿಂತ ಟ್ರಂಪ್

ಇತ್ತೀಚೆಗಷ್ಟೇ ಆದ್ಯತೆಯ ವಹಿವಾಟಿನ(Generalized System of Preferences) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
America president Donald Trump India has long had a field day putting Tariffs on American products. No longer acceptable!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X