• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!

By ಅನಿಕೇತ್
|

ವಾಷಿಂಗ್ಟನ್, ಜುಲೈ 20: ವಿಶ್ವದ ದೊಡ್ಡಣ್ಣ, ಅತ್ಯಂತ ಶ್ರೀಮಂತ ರಾಷ್ಟ್ರ ಅಂತಾ ಬಿಲ್ಡಪ್ ಕೊಡುವ ಅಮೆರಿಕದ ಮರ್ಯಾದೆ ಇದೀಗ ಬೀದಿಪಾಲಾಗಿದೆ. ಕೊರೊನಾ ವೈರಸ್ ಅಮೆರಿಕದ ಮಾನ ಹರಾಜು ಹಾಕಿದೆ. ದೊಡ್ಡಣ್ಣನ ನಾಡಿನ ಸ್ಥಿತಿ ಹೇಗಿದೆ ಅಂದರೆ, ಸದ್ಯಕ್ಕೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಈವರೆಗೆ 39 ಲಕ್ಷ ಕೇಸ್‌ ಕನ್ಫರ್ಮ್ ಆಗಿವೆ. ನಿನ್ನೆ ಕೂಡ 65 ಸಾವಿರ ಕೇಸ್‌ ದಾಖಲಾಗಿವೆ. ಪರಿಣಾಮ ಅಮೆರಿಕದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌ಗಳೇ ಸಿಗುತ್ತಿಲ್ಲ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಫ್ಲೋರಿಡಾ ಸ್ಥಿತಿಯಂತೂ ಬರ್ಬರವಾಗಿದೆ. ಇಲ್ಲಿನ 49 ಆಸ್ಪತ್ರೆಗಳಲ್ಲಿ ಒಂದೇ ಒಂದು ಐಸಿಯು ಹಾಸಿಗೆ ಕೂಡ ಲಭ್ಯವಿಲ್ಲ. ನಿನ್ನೆ ಕೂಡ 12 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಫ್ಲೋರಿಡಾ ಸ್ಟೇಟ್‌ನಲ್ಲಿ ದಾಖಲಾಗಿವೆ. ಒಂದೇ ದಿನ 87 ಅಮೆರಿಕನ್ನರು ಫ್ಲೋರಿಡಾದಲ್ಲಿ ಪ್ರಾಣಬಿಟ್ಟಿದ್ದಾರೆ.

ಕೊರೊನಾಕ್ಕೆ ಅಮೆರಿಕ ಗಢಗಢ, ಟ್ರಂಪ್ ಮೇಲೆ ಜೋ ಗರಂ

ಪರಿಸ್ಥಿತಿ ಹೀಗಿರುವಾಗಲೇ ತುರ್ತಾಗಿ ಒಂದೇ ಒಂದು ಐಸಿಯು ಬೆಡ್ ಕೂಡ ಖಾಲಿ ಇಲ್ಲ. ಫ್ಲೋರಿಡಾ ರಾಜ್ಯದಲ್ಲಿ 3 ಲಕ್ಷ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿವೆ. ಅಮೆರಿಕದಲ್ಲಿ ಕೊರೊನಾ ದಾಳಿಗೆ ತುತ್ತಾದ ರಾಜ್ಯಗಳ ಪೈಕಿ ಫ್ಲೋರಿಡಾ 4ನೇ ಸ್ಥಾನದಲ್ಲಿದೆ.

ಬಹುತೇಕ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ

ಬಹುತೇಕ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ

ಇದು ಒಂದು ರಾಜ್ಯದ ಸ್ಥಿತಿ ಅಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಬಹುಪಾಲು ಸ್ಟೇಟ್‌ಗಳ ಸ್ಥಿತಿ ಇದೇ ಆಗಿದೆ. ಐಸಿಯು ಬೆಡ್ ಬಿಡಿ ಕಾಮನ್ ವಾರ್ಡ್‌ಗೂ ಹಾಹಾಕಾರ ಎದ್ದಿದೆ. ಅದರಲ್ಲೂ ನ್ಯೂಯಾರ್ಕ್‌ ನಿವಾಸಿಗಳನ್ನು ಆ ದೇವರೆ ಕಾಪಾಡಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆಗಳನ್ನ ನಿರ್ಮಿಸಿದ್ದರೂ ಸಾಲುತ್ತಿಲ್ಲ. ಲಕ್ಷ ಲಕ್ಷ ಸೋಂಕಿತರು ಆಸ್ಪತ್ರೆಗೆ ಸೇರಲು ಸಾಧ್ಯವಾಗದೆ ನರಳಾಡಿ ಸಾಯುವ ಸ್ಥಿತಿ ಇದೆ. ಇನ್ನು ವೆಂಟಿಲೇಟರ್ಸ್ ಪಾಡು ಕಂಡವನೇ ಬಲ್ಲ. ಹೀಗೆ ಅಮೆರಿಕ ವಿಶ್ವದೆದುರು ತನ್ನ ಮಾನವನ್ನ ತಾನೇ ಹರಾಜು ಹಾಕಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಬಹುದೊಡ್ಡ ಆಪತ್ತು

ಮುಂದಿನ ದಿನಗಳಲ್ಲಿ ಬಹುದೊಡ್ಡ ಆಪತ್ತು

ಅಮೆರಿಕದಲ್ಲಿ ಈಗ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಜಸ್ಟ್ ಸ್ಯಾಂಪಲ್ ಅಷ್ಟೇ. ಮುಂಬರುವ ದಿನಗಳಲ್ಲಿ ಈ ಅಂಕಿ-ಅಂಶ ದುಪ್ಪಟ್ಟಾಗುವ ಬಗ್ಗೆ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ನಿಯಮಗಳ ಸಡಿಲಿಕೆ ಮತ್ತು ಚಿಕಿತ್ಸೆಗೆ ಅಗತ್ಯವಾದ ಸೂಕ್ತ ವ್ಯವಸ್ಥೆಗಳನ್ನು ಮಾಡದೇ ಇರುವುದು ಇಂತಹ ಸ್ಥಿತಿ ತಂದೊಡ್ಡಿದೆ. ವಿಶ್ವದ ಪವರ್‌ಫುಲ್ ರಾಷ್ಟ್ರದ ಪರಿಸ್ಥಿತಿಯೇ ಹೀಗಾದರೆ ಬಡ ರಾಷ್ಟ್ರಗಳ ಪಾಡು ಹೇಗೆ ಎಂಬ ಆತಂಕ ಇಡೀ ಜಗತ್ತಿನಾದ್ಯಂತ ಮನೆಮಾಡಿದೆ.

‘ಮಾಸ್ಕ್ ಪಾಲಿಟಿಕ್ಸ್'ಗೆ ಅಮೆರಿಕನ್ನರು ಹೈರಾಣ..!

ರಾಜ್ಯವಾರು ಸೋಂಕಿತರ ಮಾಹಿತಿ

ರಾಜ್ಯವಾರು ಸೋಂಕಿತರ ಮಾಹಿತಿ

ರಾಜ್ಯವಾರು ಸೋಂಕಿತರ ಮಾಹಿತಿ
ರಾಜ್ಯ ಪ್ರಕರಣಗಳು ಸಾವು
ನ್ಯೂಯಾರ್ಕ್ 4.12 ಲಕ್ಷ 32,187
ಕ್ಯಾಲಿಫೋರ್ನಿಯಾ 3.91 ಲಕ್ಷ 7,710
ಫ್ಲೋರಿಡಾ 3.50 ಲಕ್ಷ 4,981
ಟೆಕ್ಸಾಸ್ 3.38 ಲಕ್ಷ 4,033
ನ್ಯೂಜೆರ್ಸಿ 1.79 ಲಕ್ಷ 15,706
ವಿಶ್ವದಲ್ಲಿ ಕೊರೊನಾವೈರಸ್ ಪ್ರಕರಣಗಳು

ವಿಶ್ವದಲ್ಲಿ ಕೊರೊನಾವೈರಸ್ ಪ್ರಕರಣಗಳು

ಜಾಗತಿಕ ಮಹಾಮಾರಿ ಕೊರೊನಾವೈರಸ್ ಪ್ರಕರಣಗಳ ಲೆಕ್ಕಾಚಾರ ಜುಲೈ 20ರಂತೆ 14,664,746 ಕೊರೊನಾ ಕೇಸ್ ದಾಖಲಾಗಿವೆ. 609,291 ಮಂದಿ ಮೃತಪಟ್ಟಿದ್ದಾರೆ. 8,748,224 ಮಂದಿ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ 3,898,550 ಪ್ರಕರಣಗಳಿದ್ದು, 143,289 ಮಂದಿ ಮೃತಪಟ್ಟಿದ್ದಾರೆ.1,952,923 ಸಕ್ರಿಯ ಪ್ರಕರಣಗಳಿದ್ದು, 16,552 ವಿಷಮ ಪರಿಸ್ಥಿತಿಯಲ್ಲಿದ್ದು, 1,802,338 ಮಂದಿ ಗುಣಮುಖರಾಗಿದ್ದಾರೆ.

ಕೊವಿಡ್ 19 ನಿಭಾಯಿಸುವಲ್ಲಿ ಟ್ರಂಪ್ ಸೋತಿದ್ದಾರೆ: ಅಮೆರಿಕನ್ನರು

English summary
Corona Virus Pandemic Become Very Crucial In United States Of America. According To Florida’s Agency For Health Administration, There Is No ICU Beds Available In Florida’s 49 hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X