ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ದುರ್ಬಲಗೊಳಿಸುವಂತೆ ಕೋವಿಡ್ ರೂಪಾಂತರವಾಗಿಲ್ಲ ಆದರೆ..WHO ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಮೇ 25: ಇದುವರೆಗೂ ಲಸಿಕೆಯ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುವ ಕೋವಿಡ್ ರೂಪಾಂತರವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅದರ ಜತೆ ಜತೆಗೆ ಎಚ್ಚರಿಕೆ ಸಂದೇಶವನ್ನು ಕೂಡ ರವಾನಿಸಿದ್ದು, ಸಾರ್ಸ್ ಕೋವ್ 2ನ ತಳಿಗಳ ಬಗ್ಗೆ ತೀವ್ರವಾಗಿ ಹೆಚ್ಚುತ್ತಿರುವ ಕಳವಳಗಳ ನಡುವೆ ಲಸಿಕೆಗಳ ಪರಿಣಾಮಕಾರಿತ್ವವನ್ನು ಹಾಳು ಮಾಡುವ ಯಾವುದೇ ರೂಪಾಂತರಗಳು ಹೊರಹೊಮ್ಮಿಲ್ಲ ಎಂದು ಸಮಾಧಾನಕರ ಸುದ್ದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಕೊರೊನಾಗೂ ಮುನ್ನ ವುಹಾನ್‌ ಲ್ಯಾಬ್‌ನ 3 ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿದ್ದರುಕೊರೊನಾಗೂ ಮುನ್ನ ವುಹಾನ್‌ ಲ್ಯಾಬ್‌ನ 3 ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿದ್ದರು

ಆದರೆ ಮುಂದಿನ ದಿನಗಳಲ್ಲಿ ಇದು ಹೀಗೆಯೇ ಇರಲಿದೆ ಎನ್ನುವ ಬಗ್ಗೆ ಯಾವುದೇ ಖಾತ್ರಿ ಇಲ್ಲ ಎಂದು ಎಂದು ಮಹಾನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ.

 ವೈರಸ್ ಬದಲಾವಣೆ

ವೈರಸ್ ಬದಲಾವಣೆ

ಲಸಿಕೆಗಳು, ರೋಗನಿರ್ಣಯ ಅಥವಾ ಚಿಕಿತ್ಸಕಗಳ ಪರಿಣಾಮಕಾರಿತ್ವವನ್ನು ಗಮನಾರ್ಹವಾಗಿ ಹಾಳು ಮಾಡುವ ಯಾವುದೇ ರೂಪಾಂತರ ಸೃಷ್ಟಿಯಾಗಿಲ್ಲ, ಆದರೆ ಇದು ಹಾಗೆಯೇ ಉಳಿಯುವ ಗ್ಯಾರಂಟಿಯೂ ಇಲ್ಲ ಏಕೆಂದರೆ ವೈರಸ್ ನಿತ್ಯ ಬದಲಾಗುತ್ತಿರುತ್ತದೆ, ಹೊಸ ಹೊಸ ರೂಪವನ್ನು ಪಡೆದುಕೊಳ್ಳುತ್ತಿರುತ್ತದೆ.

 ಸೆಪ್ಟೆಂಬರ್ ವರೆಗೆ ಶೇ.10ರಷ್ಟು ಮಂದಿಗೆ ಕೊರೊನಾ ಲಸಿಕೆ

ಸೆಪ್ಟೆಂಬರ್ ವರೆಗೆ ಶೇ.10ರಷ್ಟು ಮಂದಿಗೆ ಕೊರೊನಾ ಲಸಿಕೆ

ಎಲ್ಲಾ ದೇಶಗಳಲ್ಲಿ ಸೆಪ್ಟೆಂಬರ್ ಒಳಗೆ ಶೇ.10ರಷ್ಟು ಮಂದಿಗಾದರೂ ಕೊರೊನಾ ಲಸಿಕೆ ಹಾಕಿಸಿ, ಡಿಸೆಂಬರ್ ಒಳಗೆ ಶೇ.30ರಷ್ಟು ಮಂದಿಗೆ ಲಸಿಕೆ ಹಾಕಲೇಬೇಕು ಎನ್ನುವ ಗುರಿಯನ್ನು ಇಟ್ಟುಕೊಳ್ಳಿ ಎಂದು ಸಲಹೆ ನೀಡಲಾಗಿದೆ.

 ಮತ್ತೊಮ್ಮೆ ಚೀನಾ ವಿರುದ್ಧ ಪ್ರಶ್ನೆ

ಮತ್ತೊಮ್ಮೆ ಚೀನಾ ವಿರುದ್ಧ ಪ್ರಶ್ನೆ

ಕೊರೊನಾ ಸೋಂಕು ಹರಡುವ ಮುನ್ನ, 2019ರ ನವೆಂಬರ್‌ನಲ್ಲಿ, ವುಹಾನ್ ಲ್ಯಾಬ್‌ನ ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಅಮೆರಿಕಾದ ಗುಪ್ತಚರ ಇಲಾಖೆಯಮಾಹಿತಿಯ ಆಧಾರದ ಮೇಲೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

 ಮೂರು ಸಿಬ್ಬಂದಿಗೆ ಅನಾರೋಗ್ಯವಾಗಿತ್ತು

ಮೂರು ಸಿಬ್ಬಂದಿಗೆ ಅನಾರೋಗ್ಯವಾಗಿತ್ತು

ಕೊರೊನಾ ಸೋಂಕು ವಿವಿಧ ದೇಶಗಳಿಗೆ ಹರಡುವ ಮುನ್ನ ವುನಾಹ್ ಲ್ಯಾಬ್‌ನ 3 ಸಿಬ್ಬಂದಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಕೇಳಿಬಂದಿದೆ.
ಚೀನಾದ ನಂತರ, ಕೊರೊನಾ ಸಾಂಕ್ರಾಮಿಕವು ಇಡೀ ವಿಶ್ವಾದ್ಯಂತ ಹರಡಿತು, ಅದು ಜನರ ಜೀವನವನ್ನು ಬದಲಾಯಿಸಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ.
ಚೀನಾವು ಪ್ರಯೋಗಾಲಯದಲ್ಲಿ ವೈರಸ್ ತಯಾರಿಸಿದೆ ಮತ್ತು ಅದಕ್ಕೆ ಸಂಬಂಧಿಸಿದ ಡೇಟಾವನ್ನು ಮರೆಮಾಚಿದೆ ಎಂದು ಆರಂಭದಿಂದಲೂ ಆರೋಪಿಸಲಾಗುತ್ತಿದೆ. ಈ ಕುರಿತು ಇದೀಗ ವಿಶ್ವ ಆರೋಗ್ಯ ಸಂಸ್ಥೆ ಸಹ ತನಿಖೆ ಮಾಡಿದೆ.

English summary
Amid growing concerns over virulent strains of SARS-CoV-2, the World Health Organisation has said no Covid-19 variants have emerged that undermine the efficacy of vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X