• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ರಿಪ್ಟೋಕರೆನ್ಸಿಯಿಂದ ಭಯೋತ್ಪಾದನೆಗೆ ಹಣದ ಹರಿವು: ಹಣಕಾಸು ಸಚಿವೆ ಆತಂಕ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 19: ಹಣದ ಸ್ವರೂಪದಲ್ಲಿ ಹೊಸ ಕ್ರಾಂತಿ ತರುವ ಕ್ರಿಪ್ಟೋಕರೆನ್ಸಿ (Cryptocurrency) ಎಂಬ ಆಧುನಿಕ ತಂತ್ರಜ್ಞಾನ ವಿಶ್ವಾದ್ಯಂತ ಜನಸಮುದಾಯದ ಗಮನ ಸೆಳೆಯುತ್ತಿದೆ. ಇದೇ ವೇಳೆ, ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋಕರೆನ್ಸಿಯಿಂದ ಬಹಳಷ್ಟು ಪ್ರಯೋಜನಗಳು ಇರುವುದರ ಜೊತೆಗೆ ಅದರಿಂದ ಎರಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದ ನಿರ್ಮಲಾ ಸೀತಾರಾಮನ್, "ಕ್ರಿಪ್ಟೋ ಕರೆನ್ಸಿಯಿಂದ ಎಲ್ಲಾ ರಾಷ್ಟ್ರಗಳಿಗೂ ಒದಗುವ ಅತಿ ದೊಡ್ಡ ಅಪಾಯ ಎಂದರೆ ಅದು ಹವಾಲಾ ಜಾಲ. ಹಾಗೆಯೇ, ಈ ಹವಾಲ ಮೂಲಕ ಉಗ್ರ ಚಟುವಟಿಕೆಗಳಿಗೆ ಅಕ್ರಮವಾಗಿ ಹಣದ ಹರಿವು ಆಗುತ್ತದೆ" ಎಂದು ಹೇಳಿದ್ದಾರೆ.

"ತಂತ್ರಜ್ಞಾನ ಬಳಸಿ ಹೊಸ ನಿಬಂಧನೆಗಳನ್ನ ರೂಪಿಸುವುದು ಇದಕ್ಕೆ ಇರುವ ಪರಿಹಾರ. ಈ ಹೊಸ ತಂತ್ರಜ್ಞಾನಶಕ್ತ ಶಾಸನ ಯಾವತ್ತೂ ಹಿಂದೆಬೀಳದಷ್ಟು ಪರಿಣಾಮಕಾರಿಯಾಗಿರಬೇಕು. ಇದು ಬಹುತೇಕ ಸಾಧ್ಯವಿಲ್ಲ. ಈ ಸಮಸ್ಯೆಯನ್ನ ಯಾವುದಾದರೂ ಒಂದು ದೇಶ ನಿರ್ವಹಿಸುತ್ತೆ ಎಂದಾದರೆ ಅದು ಎಲ್ಲಾ ದೇಶಗಳಿಗೂ ಮಾದರಿ ಆಗಬೇಕು" ಎಂದು ನಿರ್ಮಲಾ ಸೀತಾರಾಮನ್ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಜಮ್ಮು ಕಾಶ್ಮೀರದ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿಶ್ವಬ್ಯಾಂಕ್‌ನಲ್ಲಿ ನಡೆಯುವ ಜಿ20 ರಾಷ್ಟ್ರಗಳ ಹಣಕಾಸು ಸಚಿವರ ಸಭೆ ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಗಳಲ್ಲಿ ಪಾಲ್ಗೊಳ್ಳಲೆಂದು ನಿರ್ಮಲಾ ಸೀತಾರಾಮನ್ ಅವರು ಇಂದು ವಾಷಿಂಗ್ಟನ್‌ಗೆ ಆಗಮಿಸಿದರು. ಮೊದಲ ದಿನ ಅವರು ಐಎಂಎಫ್‌ನ ಎಂಡಿ ಆಗಿರುವ ಕ್ರಿಸ್ಟಲಿನಾ ಜಾರ್ಜಿಯೆವಾ ಅವರ ನಡೆಸಿಕೊಟ್ಟ 'ಮನಿ ಅಟ್ ಎ ಕ್ರಾಸ್‌ರೋಡ್' (ಮುಖ್ಯಘಟ್ಟದಲ್ಲಿ ಹಣ) ಎಂಬ ವಿಚಾರದ ಮೇಲಿನ ಚರ್ಚೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಪಾಲ್ಗೊಂಡು ಮಾತನಾಡಿದರು.

"ನಾವು ಬಹಳ ಬೇಗ ಮುಖ್ಯಘಟ್ಟ ಮುಟ್ಟಿದ್ದೇವೆ. ಆದರೆ ಇದನ್ನ ನಾನು ಒನ್ ವೇ ರಸ್ತೆ ಎಂಬುದು ನನ್ನ ಭಾವನೆ. ಡಿಜಿಟಲ್ ಹಣ ಬಹಳ ದೊಡ್ಡ ಪಾತ್ರ ವಹಿಸಲಿದೆ" ಎಂದು ಕ್ರಿಸ್ಟಲಿನಾ ಅವರು ಚರ್ಚೆ ಮೊದಲಿಟ್ಟರು.

ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾರತ ಸರಕಾರ ಡಿಜಿಟಲ್ ಸೌಕರ್ಯ ಚೌಕಟ್ಟು ನಿರ್ಮಿಸಲು ಕಳೆದ ದಶಕದಲ್ಲಿ ಕೈಗೊಂಡ ಕ್ರಮ ಮತ್ತು ವಹಿಸಿದ ಶ್ರಮಗಳ ಮಾಹಿತಿ ನೀಡಿದರು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತದಲ್ಲಿ ಡಿಜಿಟಲ್ ಬಳಕೆ ದರ ಹೆಚ್ಚಾಗಿರುವ ಸಂಗತಿಯನ್ನ ತಿಳಿಸಿದರು.

ನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯ

ಭಾರತದಲ್ಲಿ ಡಿಜಿಟಲ್ ಬೆಳವಣಿಗೆ:

"2019ರ ಡಾಟಾವನ್ನು ನೋಡಿದರೆ ಭಾರತದಲ್ಲಿ ಶೇ. 85ರಷ್ಟು ಡಿಜಿಟಲ್ ಬಳಕೆ ದರ ಇದೆ. ಅದೇ ವರ್ಷ ಜಾಗತಿಕವಾಗಿ ಈ ದರ ಶೇ. 64 ಇದೆ. ಸಾಂಕ್ರಾಮಿಕ ರೋಗದ ಕಾಲಘಟ್ಟದಿಂದ ನಾವು ಡಿಜಿಟಲ್ ಬಳಕೆಯನ್ನ ಪರೀಕ್ಷಿಸಲು ಸುಲಭವಾಯಿತು. ಸಾಮಾನ್ಯ ಜನರೂ ಸರಳವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು" ಎಂದು ಭಾರತದ ಹಣಕಾಸು ಸಚಿವೆ ತಿಳಿಸಿದರು.

Nirmala Sitharaman at Washington, highlights big risk of Cryptocurrency

ಐಎಂಎಫ್, ವಿಶ್ವಬ್ಯಾಂಕ್, ಜಿ20, ಎಫ್‌ಎಟಿಎಫ್ ಸಭೆಗಳ ಜೊತೆಗೆ ಅಟ್ಲಾಂಟಿಕ್ ಕೌನ್ಸಿಲ್ ವೇದಿಕೆಯ ಕಾರ್ಯಕ್ರಮವೊಂದರಲ್ಲೂ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು.

ಈ ವಾಷಿಂಗ್ಟನ್ ಭೇಟಿಯ ವೇಳೆ ಇಂಡೋನೇಷ್ಯಾ, ಸೌತ್ ಕೊರಿಯಾ, ಶ್ರೀಲಂಕಾ, ಸೌತ್ ಆಫ್ರಿಕಾ ಮೊದಲಾದ ದೇಶಗಳ ಪ್ರತಿನಿಧಿಗಳೊಂದಿಗೆ ನಿರ್ಮಲಾ ಅವರು ದ್ವಿಪಕ್ಷೀಯ ಮಾತುಕತೆಗಳನ್ನ ನಡೆಸಲಿದ್ದಾರೆ. ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್‌ಪಾಸ್ ಅವರ ಜೊತೆ ಉನ್ನತ ಮಟ್ಟದ ಸಭೆಯಲ್ಲೂ ಅವರು ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ವಾಷಿಂಗ್ಟನ್‌ನಲ್ಲಿ ಈ ಕಾರ್ಯಕ್ರಮಗಳನ್ನ ಮುಗಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 24ರಂದು ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಲಿದ್ದಾರೆ. ಅಲ್ಲಿ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ, ಉದ್ಯಮ ಮುಂದಾಳುಗಳನ್ನ ಭೇಟಿಯಾಗಿ ಮಾತನಾಡಲಿದ್ದಾರೆ.

ಸೋಮವಾರ ಆರಂಭವಾದ ಅವರ ಅಮೆರಿಕ ಭೇಟಿ 10 ದಿನಗಳ ಕಾಲ ಇದೆ. ಏಪ್ರಿಲ್ 27ಕ್ಕೆ ಅವರು ಅಲ್ಲಿಂದ ಭಾರತಕ್ಕೆ ವಾಪಸ್ ಮರಳುವ ನಿರೀಕ್ಷೆ ಇದೆ. (ಒನ್ಇಂಡಿಯಾ ಸುದ್ದಿ)

ನಿರ್ಮಲಾ ಸೀತಾರಾಮನ್
Know all about
ನಿರ್ಮಲಾ ಸೀತಾರಾಮನ್
English summary
Biggest risk of cryptocurrency could be money laundering and its use for financing terror, said Finance Minister Nirmala Sitharaman during her visit to Washington today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X