ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಆರು ತಿಂಗಳು ಇನ್ನೂ ಕೆಟ್ಟದಾಗಿರಲಿದೆ; ಬಿಲ್ ಗೇಟ್ಸ್ ವಾರ್ನಿಂಗ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 14: ಕೋವಿಡ್ 19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಭಾಗವಾಗಿರುವ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಮುಂದಿನ ನಾಲ್ಕರಿಂದ ಆರು ತಿಂಗಳು ಕೊರೊನಾ ಸೋಂಕಿನ ಪ್ರಕರಣಗಳ ಸ್ಥಿತಿಗತಿ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದ್ದಾರೆ.

ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಾಲ್ಯುಯೇಷನ್ ಮುಂದಿನ ಆರು ತಿಂಗಳುಗಳಲ್ಲಿ ಕೊರೊನಾ ವೈರಸ್ ನಿಂದ 2,00,000 ಸಾವು ಸಂಭವಿಸುವ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಸೂಚನೆಯಿದೆ. ಆದರೆ ಈಗಲೇ ಎಚ್ಚೆತ್ತುಕೊಳ್ಳುವುದು ಅತಿ ಅನಿವಾರ್ಯವಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಸಾವಿನ ಪ್ರಕರಣಗಳನ್ನು ತಡೆಹಿಡಿಯಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ಲಸಿಕೆ ಪೂರೈಕೆಗೆ ಭಾರತದ ಸಹಕಾರ ಬೇಕು: ಬಿಲ್ ಗೇಟ್ಸ್ಕೊರೊನಾ ವೈರಸ್ ಲಸಿಕೆ ಪೂರೈಕೆಗೆ ಭಾರತದ ಸಹಕಾರ ಬೇಕು: ಬಿಲ್ ಗೇಟ್ಸ್

ಕೆಲವು ವಾರಗಳಿಂದೀಚೆ ಅಮೆರಿಕದಲ್ಲಿ ಹೆಚ್ಚಿನ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಸಾವಿನ ಪ್ರಕರಣಗಳೂ ಹೆಚ್ಚಾಗಿವೆ. ಅಮೆರಿಕ ಈ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತದೆ ಎಂದು ಅಂದಾಜಿಸಿದ್ದೆ. 2015ರಲ್ಲೇ ಈ ರೀತಿಯ ಪರಿಸ್ಥಿತಿಯ ಸೂಚನೆಯನ್ನು ನಾನು ನೀಡಿದ್ದೆ. ಆದರೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪರಿಣಾಮವನ್ನು ಕೊರೊನಾ ಬೀರಿದೆ ಎಂದಿದ್ದಾರೆ.

Next Six Months Could Be Worse Of Pandemic Warned Bill Gates

ಅಮೆರಿಕದಲ್ಲಿ ಕೋವಿಡ್ 19ರಿಂದ ಇದುವರೆಗೂ 2,90,000 ಮಂದಿ ಸಾವನ್ನಪ್ಪಿದ್ದಾರೆ. ಈ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ಕುರಿತು ಸಂಸ್ಥೆಯು ಸಾಕಷ್ಟು ಸಂಶೋಧನೆಯನ್ನು ನಡೆಸುತ್ತಿದೆ. ಶೀಘ್ರವಾಗಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ಇತರೆ ದೇಶಗಳಿಗೆ ಲಸಿಕೆ ವಿತರಣೆಯಾಗುವ ಮುನ್ನ ಮೊದಲು ಅಮೆರಿಕಕ್ಕೆ ಆದ್ಯತೆ ನೀಡಬೇಕು ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಅಮೆರಿಕ ಮಾನವೀಯ ನೆಲೆಯಲ್ಲಿ ಎಲ್ಲರಿಗೂ ನೆರವಾಗಬೇಕಿದೆ. ಇಡೀ ದೇಶದ ಆರ್ಥಿಕತೆಯನ್ನು ಸುಧಾರಿಸಬೇಕಿದೆ. ಸಾವಿನ ಪ್ರಕರಣಗಳನ್ನು ನಿಯಂತ್ರಿಸಬೇಕಿದೆ. ಹೀಗಾಗಿ ಎಲ್ಲಾ ಲಸಿಕೆಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ವೈದ್ಯಕೀಯ ಅವಶ್ಯತೆಯ ಆಧಾರದ ಮೇಲೆ ಲಸಿಕೆ ವಿತರಣೆ ಆಗಬೇಕಿದೆ" ಎಂದು ಹೇಳಿದ್ದಾರೆ.

Recommended Video

ಪ್ರತಿಭಟನಾ ಸ್ಥಳದಲ್ಲಿಯೇ ತನ್ನ ಮಗಳ ಜನ್ಮದಿನ ಆಚರಿಸಿದ ರೈತ | Oneindia Kannada

ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಮೆರಿಕನ್ನರು ಇನ್ನಷ್ಟು ಉತ್ತಮವಾಗಿ ಕೆಲಸ ನಿರ್ವಹಿಸಬೇಕಿದೆ ಎಂದಿದ್ದಾರೆ.

English summary
Microsoft co-founder Bill Gates warned that the next four to six months could be the worst of the coronavirus pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X