ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ಚಿತ್ರ ಬಿಡುಗಡೆ

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 13: ನ್ಯೂಯಾರ್ಕ್‌ನ ಬ್ರೂಕ್ಲಿನ್ ಸಬ್ ವೇ ಸ್ಟೇಷನ್‌ನಲ್ಲಿ ಮಂಗಳವಾರ ಗ್ಯಾಸ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನ್ಯೂಯಾರ್ಕ್ ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಫ್ರಾಂಕ್ ಜೇಮ್ಸ್ ಫೋಟೋವನ್ನು ಏಪ್ರಿಲ್ 13ರ ಬುಧವಾರ ಬಿಡುಗಡೆಗೊಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ದಟ್ಟಣೆಯ ಸಮಯದಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಅಪರಿಚಿತ ಬಂದೂಕುಧಾರಿ ಹೊಗೆ ಬಾಂಬ್‌ಗಳನ್ನು ಎಸೆದು ಗುಂಡು ಹಾರಿಸಿದ ನಂತರ 20ಕ್ಕೂ ಹೆಚ್ಚು ಜನರು ವಿವಿಧ ಗಾಯಗೊಂಡಿದ್ದರು. ಆರೋಪಿಯು 33 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ; ಸ್ಫೋಟಕಗಳು ವಶಕ್ಕೆ ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ; ಸ್ಫೋಟಕಗಳು ವಶಕ್ಕೆ

ತನಿಖೆಯ ಕುರಿತು ವಿವರಿಸಿದ ಕಾನೂನು ಜಾರಿ ಮೂಲಗಳ ಪ್ರಕಾರ, ಪ್ರಾಥಮಿಕ ಮಾಹಿತಿಯು ಶಂಕಿತನು ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ ನಿರ್ಮಾಣ ಸಿಬ್ಬಂದಿಯ ಉಡುಪನ್ನು ಧರಿಸಿದ್ದು, ಗ್ಯಾಸ್ ಮಾಸ್ಕ್ ಧರಿಸಿದ್ದಾನೆ ಎಂದು ಗೊತ್ತಾಗಿದೆ. ನ್ಯೂಯಾರ್ಕ್ ನಗರದಲ್ಲಿ ನಡೆದಿರುವ ಗುಂಡಿನ ದಾಳಿಯ ಕುರಿತು ಪ್ರಮುಖ ಅಂಶಗಳನ್ನು ಮುಂದೆ ವಿವರಿಸಲಾಗಿದೆ.

New York Police Release the Photo of Who, Wear Gas Mask Fired 33 Rounds

ನ್ಯೂಯಾರ್ಕ್ ನಗರದಲ್ಲಿ 33 ಸುತ್ತು ಗುಂಡಿನ ದಾಳಿ:

- 10 ಜನರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ

- ರೈಲ್ವೆ ನಿಲ್ದಾಣದಲ್ಲಿ ಬೆಂಕಿಯ ಎಚ್ಚರಿಕೆಯ ಶಬ್ಧದಿಂದ ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು

- ದೃಶ್ಯದಲ್ಲಿ ಅನೇಕ ಹೊಗೆ ಸಾಧನಗಳು ಕಂಡು ಬಂದಿವೆ ಎಂದು ಮೇಯರ್ ವಕ್ತಾರ ಫ್ಯಾಬಿಯನ್ ಲೆವಿ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಸ್ಫೋಟಕ ಸಾಧನಗಳು ಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ.

- ಶಂಕಿತ ಶೂಟರ್ ಸುಮಾರು 5.5 ಅಡಿ ಮತ್ತು 80 ಕೆಜಿಗಿಂತ ಹೆಚ್ಚಿನ ತೂಕವನ್ನು ಹೊಂದಿದ್ದು, ಕಪ್ಪು ಬಣ್ಣದ ವ್ಯಕ್ತಿ ಎಂದು ಪೊಲೀಸರು ವಿವರಿಸಿದ್ದಾರೆ. ಶಂಕಿತನು ಏಕಾಂಗಿಯಾಗಿ ಈ ದಾಳಿ ನಡೆಸಿದ್ದು, ಆತನ ಉದ್ದೇಶವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

New York Police Release the Photo of Who, Wear Gas Mask Fired 33 Rounds

- ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ನ್ಯೂಯಾರ್ಕ್ ಪೊಲೀಸ್ ಇಲಾಖೆಯೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿದೆ

- ರೈಲ್ವೆ ನಿಲ್ದಾಣದ ಹೊರಗೆ ಚೈನಾಟೌನ್ ಮತ್ತು ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ವೀಕ್ಷಣೆಗಳಿಗೆ ಹೆಸರುವಾಸಿಯಾದ ಪ್ರದೇಶದಲ್ಲಿ 12ಕ್ಕಿಂತ ಹೆಚ್ಚು ಬ್ಲಾಕ್‌ಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಅಪರಾಧ ಕೃತ್ಯ ನಡೆದ ಸ್ಥಳದಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಕ್ಕಪಕ್ಕದ ಪ್ರದೇಶದಲ್ಲಿನ ಶಾಲೆಗಳನ್ನು ಬಂದ್ ಮಾಡಲಾಗಿದೆ.

- 36ನೇ ಸ್ಟ್ರೀಟ್ ಸ್ಟೇಷನ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಂಚಾರವನ್ನು ರದ್ದುಗೊಳಿಸಲಾಗಿದೆ

- "ಶ್ವೇತಭವನವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬಂದೂಕುಧಾರಿ ಪತ್ತೆಯಾಗುವವರೆಗೂ ನಾವು ಬಿಡುವುದಿಲ್ಲ," ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು.

- ಯುನೈಟೆಡ್ ಸ್ಟೇಟ್ಸ್‌ನ ಅತ್ಯಂತ ಜನನಿಬಿಡ ನಗರವಾದ ನ್ಯೂಯಾರ್ಕ್, ಸಾಂಕ್ರಾಮಿಕ ಸಮಯದಲ್ಲಿ ಹಿಂಸಾತ್ಮಕ ಅಪರಾಧಗಳಲ್ಲಿ ತೀವ್ರ ಏರಿಕೆ ಕಂಡಿದೆ, ಇದರಲ್ಲಿ ನ್ಯೂಯಾರ್ಕ್ ನಗರದ ಸುರಂಗಮಾರ್ಗದಲ್ಲಿನ ದಾಳಿಗಳು ಸೇರಿವೆ.

English summary
New York Police release the Photo of who, wear gas mask fired 33 rounds; Here read Top Points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X