ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಮೆರಿಕದ ಕಥೆ: ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 29: ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕವನ್ನು ಕೊರೊನಾ ವೈರಸ್ ಸೋಂಕು ಹಿಂಡಿ ಹಿಪ್ಪೆ ಮಾಡಿದೆ. ಹಿಂದೆಂದೂ ಕಾಣದ ರೀತಿ ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ವ್ಯಾಪಾರ ಉದ್ಯಮಗಳು ನೆಲಕಚ್ಚಿವೆ. ಇದರಿಂದ ನಿರುದ್ಯೋಗ ಹೆಚ್ಚಾಗಿ ಜನರು ತಮ್ಮ ಮನೆಯ ಬಾಡಿಗೆ ಮೊತ್ತ ಪಾವತಿಸಲು ಕೂಡ ಪರದಾಡುವಂತಹ ಸ್ಥಿತಿ ಎದುರಾಗಿದೆ.

ಈ ನಡುವೆ ನ್ಯೂಯಾರ್ಕ್‌ನ ಶಾಸಕಾಂಗ ಸೋಮವಾರ ಬಲವಂತದ ಒಕ್ಕಲೆಬ್ಬಿಸುವಿಕೆ ತಡೆಯುವ ಮಹತ್ವದ ಕಾನೂನುಗಳಲ್ಲಿ ಒಂದನ್ನು ಸರ್ವಾನುಮತದಿಂದ ಅನುಮೋದಿಸಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಕಾರಣ ಉಂಟಾಗಿರುವ ನಿರುದ್ಯೋಗವು ಅಧಿಕ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕು ಇದುವರೆಗೂ 3.30 ಲಕ್ಷಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿದೆ.

ಪರಿಹಾರ ಪ್ಯಾಕೇಜ್‌ಗೆ ಕೊನೆಗೂ ಡೊನಾಲ್ಡ್ ಟ್ರಂಪ್ ಸಹಿಪರಿಹಾರ ಪ್ಯಾಕೇಜ್‌ಗೆ ಕೊನೆಗೂ ಡೊನಾಲ್ಡ್ ಟ್ರಂಪ್ ಸಹಿ

ಹಲವು ತಿಂಗಳಿನಿಂದ ತಮ್ಮ ಬಾಡಿಗೆ ಮೊತ್ತ ಪಾವತಿಸಲು ಸಾಧ್ಯವಾಗದಿದ್ದರೂ ಅವರನ್ನು ಮನೆಗಳಿಂದ ಹೊರಹಾಕದಂತೆ ರಕ್ಷಿಸಿರುವ ಒಕ್ಕಲೆಬ್ಬಿಸುವಿಕೆ ನಿಷೇಧದ ಆದೇಶವು ಈ ವರ್ಷದ ಅಂತ್ಯಕ್ಕೆ ಮುಕ್ತಾಯಗೊಳ್ಳಲಿವೆ. ಇದರಿಂದ ಬಾಡಿಗೆದಾರರು ಮತ್ತು ವಕಾಲತ್ತು ಗುಂಪುಗಳು ಆತಂಕಕ್ಕೆ ಒಳಗಾಗಿವೆ. ಹೊಸ ಕ್ರಮದ ಅಡಿಯಲ್ಲಿ ಮನೆ ಮಾಲೀಕರು ಹೆಚ್ಚೂಕಡಿಮೆ ಎಲ್ಲ ವಿಭಿನ್ನ ಪ್ರಕರಣಗಳಲ್ಲಿಯೂ ಮುಂದಿನ ಕನಿಷ್ಠ 60 ದಿನಗಳವರೆಗೆ ಬಾಡಿಗೆದಾರರನ್ನು ಮನೆಯಿಂದ ತೆರವುಗೊಳಿಸುವಂತಿಲ್ಲ. ಮುಂದೆ ಓದಿ.

ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿದ್ದಾರೆ 'ಕೊರೊನಾ' ಸೋಂಕಿತರು..!ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿದ್ದಾರೆ 'ಕೊರೊನಾ' ಸೋಂಕಿತರು..!

31ರಂದು ಅಂತ್ಯಗೊಳ್ಳುತ್ತಿದ್ದ ನಿಯಮ

31ರಂದು ಅಂತ್ಯಗೊಳ್ಳುತ್ತಿದ್ದ ನಿಯಮ

ಈ ಆದೇಶವನ್ನು ಹೊರಡಿಸಲು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮಧ್ಯೆ ಅಪರೂಪದ ವಿಶೇಷ ಅಧಿವೇಶನವನ್ನು ಶಾಸಕಾಂಗ ನಡೆಸಿತ್ತು. ಈ ಹಿಂದೆ ಗವರ್ನರ್ ಆದೇಶ ಮೂಲಕ ಹೇರಲಾಗಿದ್ದ ಒಕ್ಕಲೆಬ್ಬಿಸುವಿಕೆ ನಿಷೇಧದ ಅವಧಿಯು ಡಿ. 31ರಂದು ಅಂತ್ಯಗೊಳ್ಳುತ್ತಿತ್ತು.

ಆರ್ಥಿಕತೆಗೆ ಕೊರೊನಾ ಹೊಡೆತ

ಆರ್ಥಿಕತೆಗೆ ಕೊರೊನಾ ಹೊಡೆತ

ಕೆಲಸವಿಲ್ಲದೆ ಮತ್ತು ಉದ್ಯೋಗಾವಕಾಶಗಳಿಲ್ಲದೆ ಲಕ್ಷಾಂತರ ಜನರ ಭವಿಷ್ಯದ ಬಗ್ಗೆ ರಾಷ್ಟ್ರೀಯ ಕಳವಳ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಈಗಲೂ ಜನರನ್ನು ತೀವ್ರವಾಗಿ ಕಾಡುತ್ತಿದ್ದು, ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಉದ್ಯೋಗ ವಂಚಿತರಾದ ಜನರು ಬೀದಿಗೆ ಬರುವುದನ್ನು ತಡೆಯುವುದು ಸವಾಲಾಗಿದೆ.

ಜನರು ದಾಖಲೆ ನೀಡಬೇಕು

ಜನರು ದಾಖಲೆ ನೀಡಬೇಕು

ಈ ಮಸೂದೆಯು ಅಂಗೀಕಾರಗೊಳ್ಳುತ್ತಿದ್ದಂತೆಯೇ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಎಂ ಕುವಾಮೊ ವಿಳಂಬ ಮಾಡದೆ ಸಹಿ ಹಾಕಿದ್ದಾರೆ. ಈ ಮಸೂದೆಯ ಅಂಗೀಕಾರವು ಲಕ್ಷಾಂತರ ಬಾಡಿಗೆ ಮನೆ ನಿವಾಸಿಗಳಿಗೆ ನೆಮ್ಮದಿ ನೀಡಿದೆ. ಜನರು ಕೊರೊನಾ ವೈರಸ್ ಸಂಬಂಧಿತ ಕಾರಣದಿಂದ ತಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಬಾಡಿಗೆ ಮನೆಯನ್ನು ಉಳಿಸಿಕೊಳ್ಳಬಹುದಾಗಿದೆ.

ನ್ಯಾಯಾಲಯಗಳಲ್ಲಿ ವಿಚಾರಣೆ

ನ್ಯಾಯಾಲಯಗಳಲ್ಲಿ ವಿಚಾರಣೆ

ನ್ಯೂಯಾರ್ಕ್ ಒಂದರಲ್ಲಿಯೇ ಸುಮಾರು 1.2 ಮಿಲಿಯನ್ ನಿವಾಸಿಗಳು ತಮ್ಮ ಮನೆಗಳಿಂದ ಹೊರಹಾಕುವ ಭೀತಿ ಎದುರಿಸುತ್ತಿದ್ದಾರೆ. ಪ್ರಸ್ತುತ ಹೊಸ ಕಾಯ್ದೆಯು ಮುಂದಿನ ಕನಿಷ್ಠ 60 ದಿನಗಳವರೆಗೆ ಈ ಒಕ್ಕಲೆಬ್ಬಿಸುವಿಕೆಯ ತೊಂದರೆಯಿಂದ ಪಾರಾಗಿದ್ದಾರೆ. ನ್ಯಾಯಾಲಯಗಳಲ್ಲಿ ಕೂಡ ಅನೇಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಮುಂದಿನ ಮೇ 1ರವರೆಗೂ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆ ಜಾರಿಗೊಳಿಸಲು ಅವಕಾಶ ನೀಡುವ ಸಾಧ್ಯತೆ ಕಡಿಮೆ ಇದೆ.

English summary
New York legislature has passed anti-eviction bill which bans evictions as tenants struggle to pay rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X