• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಜಾ, ಗಾಂಜಾ..! ಮತ್ತೊಂದು ರಾಜ್ಯದಲ್ಲಿ ಗಾಂಜಾ ಈಗ ಲೀಗಲ್..!

|

ಹೆಡ್‌ಲೈನ್ ನೋಡಿ ಇದು ಯಾವ ಸ್ಟೇಟ್ ಅಂತಾ ತುಂಬಾ ಆಲೋಚಿಸಬೇಡಿ. ಏಕೆಂದರೆ ಗಾಂಜಾ ಲೀಗಲ್ ಮಾಡಿದ ಮತ್ತೊಂದು ರಾಜ್ಯ ಇರೋದು ಅಮೆರಿಕದಲ್ಲಿ. ಹೌದು ಅಮೆರಿಕದ ಮತ್ತೊಂದು ರಾಜ್ಯದಲ್ಲಿ ಗಾಂಜಾ ಬೆಳೆ ಕಾನೂನು ಬದ್ಧವಾಗಿದೆ. ಅಮೆರಿಕದ ವಾಣಿಜ್ಯ ರಾಜಧಾನಿ ಎಂದೇ ಹೆಸರು ಪಡೆದ ನ್ಯೂಯಾರ್ಕ್ ಜನರ ಬಳಕೆಗೂ ಗಾಂಜಾ ಇನ್ಮುಂದೆ ಲಭ್ಯವಾಗಲಿದೆ.

ಗಾಂಜಾಗೆ ಲೀಗಲ್ ಸ್ಟೇಟಸ್ ಕೊಟ್ಟ ಮಸೂದೆ ನ್ಯೂಯಾರ್ಕ್ ಶಾಸಕಾಂಗದಲ್ಲಿ ಪಾಸ್ ಆಗಿದೆ. ಹೀಗೆ ಅಮೆರಿಕದ 14 ಇತರ ರಾಜ್ಯಗಳ ಸಾಲಿಗೆ ನ್ಯೂಯಾರ್ಕ್ ರಾಜ್ಯ ಕೂಡ ಸೇರ್ಪಡೆಗೊಂಡಿದೆ. ಅಮೆರಿಕದ ಹಲವು ರಾಜ್ಯಗಳಲ್ಲಿ ಗಾಂಜಾ ಬಳಕೆ, ಕೃಷಿಗೆ ಕಾನೂನು ಬದ್ಧ ಅವಕಾಶವನ್ನು ನೀಡಿರುವ ಬೆನ್ನಲ್ಲೇ ನ್ಯೂಯಾರ್ಕ್‌ನ ಈ ನಡೆ ಸಾಕಷ್ಟು ಗಮನ ಸೆಳೆದಿದೆ.

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ಈ ಮೂಲಕ ಅಮೆರಿಕದ ಒಟ್ಟಾರೆ 50 ರಾಜ್ಯಗಳ ಪೈಕಿ 15 ರಾಜ್ಯಗಳಲ್ಲಿ ಗಾಂಜಾ ಬೆಳೆಗೆ ಅನುಮತಿ ಸಿಕ್ಕಂತಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಔಷಧ ತಯಾರಿಕೆಗೆ ಮಾತ್ರ ಬಳಸಬೇಕು. ಇದೀಗ ನ್ಯೂಯಾರ್ಕ್ ರಾಜ್ಯದ ನಿರ್ಧಾರದಿಂದಾಗಿ ಅಲ್ಲಿ 350 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯವನ್ನು ನಿರೀಕ್ಷೆ ಮಾಡಬಹುದಾಗಿದೆ.

ಔಷಧ ಕಂಪನಿಗಳು ಬಳಸುತ್ತಿವೆ

ಔಷಧ ಕಂಪನಿಗಳು ಬಳಸುತ್ತಿವೆ

ಈಗಾಗಲೇ ಅಮೆರಿಕದ ಹಲವು ಔಷಧ ತಯಾರಿಕಾ ಸಂಸ್ಥೆಗಳು ಗಾಂಜಾ ಗಿಡವನ್ನು ಮೆಡಿಸಿನ್ ತಯಾರಿಕೆಗೆ ಮೂಲ ಪದಾರ್ಥವಾಗಿ ಬಳಸುತ್ತಿವೆ. ಆದರೆ ಹಲವು ದಶಕಗಳ ಹಿಂದೆ ಬಹುತೇಕ ದೇಶಗಳು ಗಾಂಜಾ ಬ್ಯಾನ್ ಮಾಡಲು ಅಮೆರಿಕ ಕಂಪನಿಗಳ ಲಾಬಿ ಕಾರಣ ಎನ್ನಲಾಗಿತ್ತು. ಇಷ್ಟೆಲ್ಲದರ ನಡುವೆ ಅಮೆರಿಕದಲ್ಲೂ ಗಾಂಜಾ ಬಳಕೆ ಬಗ್ಗೆ ಒತ್ತಡಗಳು ಹೆಚ್ಚಾದವು. ಈ ಒತ್ತಡಗಳ ಪರಿಣಾಮ ಒಂದೊಂದೇ ರಾಜ್ಯಗಳು ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡವು. ಈಗ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗಾಂಜಾ ಬಳಕೆಗೆ ಅನುಮತಿ ಸಿಕ್ಕಿದೆ.

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ ಬಹುಪಾಲು ದೇಶಗಳಲ್ಲಿ ಮರಿಜುನಾ ಈಗಲೂ ನಿಷೇಧಿತ ವಸ್ತು. ಆದರೆ 40ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಜಾ ಬೆಳೆಯುವುದಕ್ಕೆ ಹಾಗೂ ಬಳಸುವುದಕ್ಕೆ ಅನುಮತಿ ಇದೆ. ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಗಾಂಜಾ ಗಿಡಕ್ಕೆ ಲೀಗಲ್ ಪಟ್ಟವಿದೆ. ಹಾಗೇ ಅಮೆರಿಕದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆಗೆ ಗಾಂಜಾ ಬಳಸಲು ಅನುಮತಿ ಇದೆ. ಭಾರತದಲ್ಲಿ ಮಾತ್ರ ಗಾಂಜಾ ಈಗಲೂ ಬ್ಯಾನ್ ಆಗಿದೆ. ಹೀಗಾಗಿ ಆಯುರ್ವೇದ ತಜ್ಞರು ಕಾನೂನಾತ್ಮಕವಾಗಿ ಗಾಂಜಾ ಬಳಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಆಯುರ್ವೇದದಲ್ಲಿ ಗಾಂಜಾಗೆ ಮನ್ನಣೆ ಇದ್ದು, ಇದನ್ನು ನೋವು ನಿವಾರಕದಂತೆ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ನೋವು ನಿವಾರಕವಾಗಿ ಮಾತ್ರವಲ್ಲ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೂ ಗಾಂಜಾ ರಾಮಬಾಣ ಎನ್ನಲಾಗುತ್ತೆ. ಹೀಗೆ ಸಾವಿರಾರು ವರ್ಷಗಳಿಂದಲೂ ಗಾಂಜಾ ಗಿಡ ಆಯುರ್ವೇದದಲ್ಲಿ ಬೆರೆತು ಹೋಗಿತ್ತು. 1961ರಲ್ಲೇ ಗಾಂಜಾ ಭಾರತದಲ್ಲಿ ಬ್ಯಾನ್ ಆಗುವಂತೆ ಮಾಡಲು ಲಾಬಿ ನಡೆದಿತ್ತು. ಅಮೆರಿಕ ಆಸೆ ಆಗ ಈಡೇರಲಿಲ್ಲ. ಆದರೆ 1985ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರ ಅಮೆರಿಕ ಫಾರ್ಮಾ ಕಂಪನಿಗಳ ಒತ್ತಡಕ್ಕೆ ಮಣಿದು ಗಾಂಜಾ ಬ್ಯಾನ್ ಮಾಡಿತ್ತು ಎಂಬ ಆರೋಪವಿದೆ. ಆದರೂ ಭಾರತದಲ್ಲಿ ಕಳ್ಳದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಉದಾಹರಣೆಗೆ ಹಿಮಾಚಲ ಪ್ರದೇಶ ಒಂದರಲ್ಲೇ ಬರೋಬ್ಬರಿ 60 ಸಾವಿರ ಕೆ.ಜಿ ಗಾಂಜಾ ಬೆಳೆಯಲಾಗುತ್ತಿದೆ.

ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಮರಿಜುನಾ ಹಲವು ಔಷಧೀಯ ಗುಣ ಹೊಂದಿದೆ. ಇದರಲ್ಲಿನ ಕೆಲವು ರಾಸಾಯನಿಕ ವಸ್ತುಗಳು ದೇಹದಲ್ಲಿ ಒತ್ತಡ ಹಾಗೂ ನೋವು ಕಡಿಮೆ ಮಾಡುವ ಶಕ್ತಿ ಹೊಂದಿವೆ ಎಂಬುದು ಆಯುರ್ವೇದ ತಜ್ಞರ ಮಾತು. ಸಿಗರೇಟ್ ಹಾಗೂ ಆಲ್ಕೋಹಾಲ್‌ಗೆ ಹೋಲಿಕೆ ಮಾಡಿದರೆ ಗಾಂಜಾ ಗಿಡದಿಂದ ಆಗುವ ಅಪಾಯವೂ ತೀರಾ ಕಡಿಮೆ ಎಂಬುದು ಕೆಲ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೂ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಏಕೆಂದರೆ ಗಾಂಜಾ ಬ್ಯಾನ್ ಆಗಿರೋದರಿಂದ ಹಲವು ಸಂಶೋಧನೆಗೂ ಅಡ್ಡಿಯಾಗಿದೆ.

ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಔಷಧೀಯ ಉಪಯೋಗಕ್ಕಾಗಿ ಗಾಂಜಾ ಬಳಕೆಗೆ ಹಾಗೂ ಬೆಳೆಸಲು ಅನುಮತಿ ನೀಡಬೇಕು ಎಂಬ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಕೂಡ ಔಷಧೀಯ ಸಂಶೋಧನೆಗೆ ಗಾಂಜಾ ಬಳಕೆಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಇದ್ಯಾವುದೂ ಇನ್ನೂ ಫೈನಲ್ ಆಗಿಲ್ಲ. ಭವಿಷ್ಯದಲ್ಲಿ ಆಯುರ್ವೇದ ತಜ್ಞರ ಮಾತಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡುತ್ತಾ, ಇಲ್ಲ ಗಾಂಜಾ ಬಳಕೆ ಮೇಲಿನ ನಿಷೇಧ ಮುಂದುವರಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

English summary
Cannabis become legal in another state of US. New York government passed bill to make Cannabis legal in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X