• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾನ್ಸನ್ & ಜಾನ್ಸನ್‌ ಪೌಡರ್‌ನಿಂದ ಕ್ಯಾನ್ಸರ್‌ ಬಂದ ಆರೋಪ: ಮಹಿಳೆಗೆ 890 ಕೋಟಿ ರೂ. ಪರಿಹಾರ !

|

ನ್ಯೂಯಾರ್ಕ್, ನವೆಂಬರ್ 21: ಜಾನ್ಸನ್ & ಜಾನ್ಸನ್‌ ಕಂಪನಿಯ ಬೇಬಿ ಪೌಡರ್ ಬಳಸಿ ಕ್ಯಾನ್ಸ್‌ರ್‌ಗೆ ಕಾರಣವಾಗಿದೆ ಎಂದು ಆರೋಪಿಸಿದ್ದ ಬ್ರೂಕ್ಲಿನ್ ಮಹಿಳೆ ಮತ್ತು ಅವರ ಪತಿಗೆ 120 ಮಿಲಿಯನ್ ಡಾಲರ್ ಅಥವಾ 890 ಕೋಟಿ ರೂ. ನಷ್ಟ ತುಂಬಿಕೊಡುವಂತೆ ನ್ಯೂಯಾರ್ಕ್ ರಾಜ್ಯದ ನ್ಯಾಯಾಧೀಶರು ಜಾನ್ಸನ್ & ಜಾನ್ಸನ್‌ ಕಂಪನಿಗೆ ಆದೇಶಿಸಿದ್ದಾರೆ.

ಮ್ಯಾನ್ಹ್ಯಾಟ್‌ನ ರಾಜ್ಯ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆರಾಲ್ಡ್ ಲೆಬೊವಿಟ್ಸ್ 14 ವಾರಗಳ ವಿಚಾರಣೆಯ ನಂತರ, 2019 ರ ಮೇ ತಿಂಗಳಲ್ಲಿ ಡೊನ್ನಾ ಓಲ್ಸನ್(67), ಮತ್ತು ರಾಬರ್ಟ್ ಓಲ್ಸನ್ (65) ಅವರಿಗೆ ನೀಡಲಾದ 325 ಮಿಲಿಯನ್ ಡಾಲರ್ ಪರಿಹಾರ ಮೊತ್ತವನ್ನು 120 ಮಿಲಿಯನ್ ಡಾಲರ್‌ಗೆ ತಗ್ಗಿಸಿದರು.

120 ಮಿಲಿಯನ್ ಡಾಲರ್ ಪರಿಹಾರದ ಮೊತ್ತದಲ್ಲಿ 15 ಮಿಲಿಯನ್ ಡಾಲರ್ ಪರಿಹಾರದ ಹಾನಿ ಮತ್ತು 105 ಮಿಲಿಯನ್ ಡಾಲರ್ ನಷ್ಟದ ಹಾನಿಗಳನ್ನು ಒಳಗೊಂಡಿದೆ. ಇದು ಮೊದಲು ಕ್ರಮವಾಗಿ 25 ಮಿಲಿಯನ್ ಡಾಲರ್ ಮತ್ತು 300 ಮಿಲಿಯನ್‌ನಿಂದ ಕಡಿಮೆಯಾಗಿದೆ.

ಕಂಪನಿಯು ಪರಿಹಾರದ ಮೊತ್ತವನ್ನು ತಗ್ಗಿಸಲು ಪ್ರತಿವಾದ ಮಂಡಿಸಿದ ಬಳಿಕ, ಸತತ ವಿಚಾರಣೆಯಿಂದಾಗಿ ನ್ಯಾಯಾಧೀಶರಾದ ಲೆಬೊವಿಟ್ಸ್ 14 ವಾರಗಳ ವಿಚಾರಣೆಯ ನಂತರ ಈ ಕಡಿಮೆ ಪಾವತಿಗೆ ಅನುಮೋದನೆ ನೀಡಿದ್ದಾರೆ.

ಡೊನ್ನಾ ಓಲ್ಸನ್ ಪರ ವಕೀಲರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತೀರ್ಪಿನ ಬಗ್ಗೆ ತನ್ನ ಕಕ್ಷಿದಾರರು ತೃಪ್ತಿಯಾಗಿದ್ದಾರೆ. ಒಂದು ವೇಳೆ ಕಂಪನಿಯು ಮೇಲ್ಮನವಿ ಸಲ್ಲಿಸಿದರೆ ಯಾವುದೇ ಕೋರ್ಟ್‌ ಆದೇಶವನ್ನು ಎತ್ತಿಹಿಡಿಯುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಡೊನ್ನಾ ಓಲ್ಸನ್ ಕಳೆದ 50 ವರ್ಷಗಳಿಗಿಂತ ಹೆಚ್ಚು ಕಾಲ ಜಾನ್ಸನ್ & ಜಾನ್ಸನ್‌ ಪೌಡರ್‌ ಬಳಸಿರುವುದಾಗಿ ಹೇಳಿದ್ದಾರೆ.

ಜಾನ್ಸನ್& ಜಾನ್ಸನ್ ಕಂಪನಿಯು ತಕ್ಷಣವೇ ಕೋರ್ಟ್‌ ಆದೇಶದ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ವಿಚಾರಣೆಯಲ್ಲಿ ತೀರ್ಪನ್ನು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಜೊತೆಗೆ "ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಾರಿಗಾದರೂ ನಾವು ತೀವ್ರವಾಗಿ ಸಹಾನುಭೂತಿ ಹೊಂದಿದ್ದೇವೆ, ಆದರೆ ಸತ್ಯ ಹೊರಬೀಳುವುದು ಬಹಳ ಮುಖ್ಯ" ಎಂದು ಕಂಪನಿ ತಿಳಿಸಿದೆ.

English summary
Johnson & Johnson has been ordered by a New York state judge to pay $120 million in damages to a Brooklyn woman and her husband, after she blamed her cancer from using the company's baby powder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X