ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನ ಆರಂಭಿಕ ಹೊಸ ಲಕ್ಷಣಗಳನ್ನು ಪತ್ತೆ ಹಚ್ಚಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 28: ವಿಶ್ವದ ಬಹುತೇಕ ಕೊವಿಡ್ 19 ರೋಗಿಗಳಲ್ಲಿ ಆಋಂಭಿಕ ಹಂತದಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂಬುದು ತಿಳಿದುಬಂದಿದೆ.
ವಿಶ್ವದಲ್ಲಿ ಕೊರೊನಾ ಲಕ್ಷಣಗಳಿಲ್ಲದ ಮಂದಿಯ ವರದಿಯಲ್ಲಿ ಪಾಸಿಟಿವ್ ಬಂದಿರುವ ಸಂಖ್ಯೆ ಹೆಚ್ಚು ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಸೋಂಕಿನ ಆರಂಭಿಕ ಲಕ್ಷಣಗಳೇನು ಎನ್ನುವ ಕುರಿತು ಅಮೆರಿಕದ ತಜ್ಞರು ಸಾಕಷ್ಟು ದಿನಗಳ ಕಾಲ ಅಧ್ಯಯನ ಮಾಡಿ ವರದಿ ನೀಡಿದ್ದಾರೆ.

ಗುಜರಾತ್‌ನಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ಗುಜರಾತ್‌ನಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ವಿಶ್ವದಾದ್ಯಂತ ಇರುವ ಕೊವಿಡ್ 19 ರೋಗಿಗಳನ್ನು ಪತ್ತೆ ಹಚ್ಚುತ್ತದೆ. ಹಾಗೆಯೇ ಕೊವಿಡ್ 19 ಕುರಿತು ಪ್ರಯೋಗಾಲಯದಲ್ಲಿ ಅಧ್ಯಯನದಲ್ಲಿ ತೊಡಗಿರುವರು ಕೊರೊನಾ ಹೊಸ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಕಷ್ಟು ರೋಗಿಗಳಿಗೆ ಕಡಿಮ ಪ್ರಮಾಣದ ಸೋಂಕು ಇರುತ್ತದೆ. ಅಂತವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೆಯೇ ಗುಣಮುಖರಾಗಿದ್ದಾರೆ. ಐದು ಮಂದಿ ಕೊರೊನಾ ಸೋಂಕಿತರ ಪೈಕಿ ಓರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಉಸಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

ಕೊರೊನಾ ಪಕ್ಕಕ್ಕಿಡಿ, ಬೇರೆ ರೋಗಿಗಳ ಪರಿಸ್ಥಿತಿ ಏನಾಗಿದೆ ನೋಡಿ ಕೊರೊನಾ ಪಕ್ಕಕ್ಕಿಡಿ, ಬೇರೆ ರೋಗಿಗಳ ಪರಿಸ್ಥಿತಿ ಏನಾಗಿದೆ ನೋಡಿ

ಮಧುಮೇಹ, ಕ್ಯಾನ್ಸರ್ ರೋಗಿಗಳು, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಇರುವವ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.

 ಸೋಂಕು ತಗುಲಿದ 2-14 ದಿನಗಳಲ್ಲಿ ಲಕ್ಷಣಗಳು ಗೋಚರ

ಸೋಂಕು ತಗುಲಿದ 2-14 ದಿನಗಳಲ್ಲಿ ಲಕ್ಷಣಗಳು ಗೋಚರ

ಕೊರೊನಾ ಸೋಂಕು ತಗುಲಿದ 2-14 ದಿನಗಳೊಳಗಾಗಿ ಕೊರೊನಾ ಲಕ್ಷಣಗಳು ಗೋಚರಿಸಲು ಆರಂಭವಾಗುತ್ತದೆ. ನಿಮಗೆ ತಿಳಿಯದಂತೆ ಅನಾರೋಗ್ಯ ನಿಮ್ಮನ್ನು ಕಾಡಲು ಆರಂಭಿಸುತ್ತದೆ.

ಸೋಂಕಿನ ಪ್ರಾರಂಭಿಕ ಹಂತದಲ್ಲಿ ಕಂಡು ಬರುವ ಲಕ್ಷಣಗಳು

ಸೋಂಕಿನ ಪ್ರಾರಂಭಿಕ ಹಂತದಲ್ಲಿ ಕಂಡು ಬರುವ ಲಕ್ಷಣಗಳು

ತುಂಬಾ ನಡುಕ ಉಂಟಾಗುವುದು, ಸ್ನಾಯು ಸೆಳೆತ, ವಿಪರೀತ ತಲೆ ನೋವು, ಊಟ ರುಚಿಸದೆ ಇರುವುದು ಪ್ರಾರಂಭಿಕ ಹಂತದ ಲಕ್ಷಣಗಳಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಜ್ವರ, ಒಣ ಕೆಮ್ಮು, ಸುಸ್ತು, ಮೈಕೈ ನೋವು, ಉಸಿರಾಟದ ತೊಂದರೆ, ಗಂಟಲು ನೋವು, ಕಫ ಕೊರೊನಾ ಲಕ್ಷಣಗಳು.

ಯಾವುದೇ ಒಂದು ಲಕ್ಷಣಗಳಿದ್ದರೂ ಆಸ್ಪತ್ರೆಗೆ ಹೋಗಿ

ಯಾವುದೇ ಒಂದು ಲಕ್ಷಣಗಳಿದ್ದರೂ ಆಸ್ಪತ್ರೆಗೆ ಹೋಗಿ

ಇವುಗಳಲ್ಲಿ ಯಾವುದೇ ಒಂದು ಲಕ್ಷಣಗಳು ಕಾಣಿಸಿಕೊಂಡರೂ ಕೂಡ ಆಸ್ಪತ್ರೆಗೆ ಹೋಗುವುದು ಒಳಿತು. ಡಿಸೆಂಬರ್‌ ತಿಂಗಳಿನಲ್ಲಿ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಸ್ ಮೊದಲ ಪ್ರಕರಣ ಪತ್ತೆಯಾಗಿತ್ತು. ಹಾಗೆಯೇ ಅದು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಕೊಂಡಿದೆ. ಇದೇ ಮೊದಲ ಬಾರಿಗೆ ಕೊರೊನಾ ಮನುಷ್ಯನ ದೇಹದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ವಿಜ್ಞಾನಿಗಳು ಅಧ್ಯಯನ ಚುರುಕುಗೊಳಿಸಿದ್ದಾರೆ.

English summary
The top medical watchdog in the US has added new symptoms of the highly infectious novel coronavirus to a list of known ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X