ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್ ಕಾರ್ಡ್ ಉಳ್ಳವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಬಹುದು

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 13: ಗ್ರೀನ್ ಕಾರ್ಡ್ ಉಳ್ಳವರು ಇನ್ನುಮುಂದೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಗ್ರೀನ್ ಕಾರ್ಡ್ ಹೊಂದಿರುವವರು ಇಷ್ಟು ದಿನ ಅಮೆರಿಕದಲ್ಲಿ ನೆಲೆಸಬೇಕೆಂದುಕೊಂಡವರ ಕನಸು ಇದೀಗ ನನಸಾಗಲಿದೆ.

ಶಾಶ್ವತ ನಿವಾಸಿ ಕಾರ್ಡ್ ಎನ್ನಲಾಗುವ ಗ್ರೀನ್ ಕಾರ್ಡ್ , ವಲಸಿಗ ವ್ಯಕ್ತಿಗೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಕ್ಕು ಒದಗಿಸಲಿದೆ. ಸಂಸತ್ತಿನ ನ್ಯಾಯಾಂಗ ಸಮಿತಿ ಪ್ರಕಾರ, 2 ವರ್ಷಕ್ಕೂ ಹೆಚ್ಚು ಸಮಯಗಳಿಂದ ನೆಲೆಸಿರುವ ಉದ್ಯೋಗ ಆಧಾರಿತ ವಲಸಿಗ ಅಭ್ಯರ್ಥಿಯು 5 ಸಾವಿರ ಡಾಲರ್ ಶುಲ್ಕ ಪಾವತಿಸುವ ಮೂಲಕ ಅನಿಯಮಿತ ಅವಧಿಗೆ ಶಾಶ್ವತವಾಗಿ ನೆಲೆಸುವ ಹಕ್ಕನ್ನು ಪಡೆಯಲಿದ್ದಾರೆ.

2 ತಿಂಗಳೊಳಗೆ ವ್ಯರ್ಥವಾಗಲಿದೆ 1 ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್, ಕಾರಣವೇನು?2 ತಿಂಗಳೊಳಗೆ ವ್ಯರ್ಥವಾಗಲಿದೆ 1 ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್, ಕಾರಣವೇನು?

ಗ್ರೀನ್ ಕಾರ್ಡ್ ಪಡೆದು ವರ್ಷಗಳಿಂದ ನೆಲೆಸಿರುವ ಉದ್ಯೋಗಿಗಳಲ್ಲಿ ಗಮನಾರ್ಹ ಸಂಖ್ಯೆಯ ಭಾರತೀಯರಿದ್ದಾರೆ. ನಿಗದಿತ ಶುಲ್ಕ ಪಾವತಿಸಿ ಶಾಶ್ವತವಾಗಿ ನೆಲೆಸಲು ಅವಕಾಶ ಕಲ್ಪಿಸುವ ಸಮನ್ವಯ ಪ್ಯಾಕೇಜ್‌ನ್ನು ಉದ್ದೇಶಿತ ಮಸೂದೆ ಒಳಗೊಂಡಿದೆ.

New Provisions Could Ease Green Card Process For Indians

ನಿಗದಿತ ಅವಧಿ ಎರಡು ವರ್ಷವನ್ನು ಮೀರದಿರುವ ಆದರೆ, ಅಮೆರಿಕದಲ್ಲಿ ಅವರ ಉಪಸ್ಥಿತಿಯ ಅಗತ್ಯ ಎನ್ನಲಾದ ವ್ಯಕ್ತಿಗೆ 1500 ಡಾಲರ್ ಆಗಿರುತ್ತದೆ. ಸಂಸ್ಕರಣಾ ಶುಲ್ಕ ಹೊರತುಪಡಿಸಿ ಈ ಶುಲ್ಕವನ್ನು ಅರ್ಜಿದಾರರು ನೀಡಬೇಕಾಗುತ್ತದೆ.

ಇಬಿ-ವರ್ಗದ ಅರ್ಜಿದಾರರಿಗೆ ಈ ಶುಲ್ಕದ ಮೊತ್ತ 50 ಸಾವಿರ ಡಾಲರ್ ಆಗಿರುತ್ತದೆ. ಅಮೆರಿಕ ನಾಗರಿಕ ಪ್ರಾಯೋಜಿಸುವ ಕುಟುಂಬ ಆಧಾರಿತ ವಲಸಿಗ ಅರ್ಜಿದಾರರಿಗೆ , ಗ್ರೀನ್ ಕಾರ್ಡ್ ಪಡೆಯಲು ಪಾವತಿಸಬೇಕಾದ ಶುಲ್ಕ 2500 ಡಾಲರ್ ಅಂದರೆ 1.84 ಲಕ್ಷ ಆಗಿರುತ್ತದೆ.

ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಮಂಜೂರಿಗೆ ಬಾಕಿ ಉಳಿದುಕೊಂಡಿರುವ ಹಲವು ಕಾರ್ಮಿಕರು ಈಗಾಗಲೇ ಅಮೆರಿಕದಲ್ಲಿ ತಾತ್ಕಾಲಿಕ ವಲಸೆಯೇತರ ವೀಸಾದಲ್ಲಿ ಇದ್ದಾರೆ. H-1B ವೀಸಾದ ಅಡಿಯಲ್ಲಿ ಇರುವವರಿಗೆ ನವೀಕರಣ ಮಾಡಬಹುದು. ಆದರೆ ಪೂರ್ಣ ಸಾಮರ್ಥ್ಯವನ್ನು ತಲುಪುವುದಕ್ಕೆ ಫಲಾನುಭವಿಗಳಿಗೆ ನಿರ್ಬಂಧವಾಗುತ್ತದೆ.

ಸದ್ಯಕ್ಕೆ ಇರುವ ನಿಯಮದ ಪ್ರಕಾರ, ಒಂದು ದೇಶದಿಂದ ಈಗ ಶೇ 7ಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗ ಆಧಾರಿತ ಗ್ರೀನ್​ ಕಾರ್ಡ್​ಗಳು ದೊರೆಯುವುದಿಲ್ಲ. ಇದರಿಂದ ಭಾರತ ಮತ್ತು ಚೀನಾದಿಂದ ವಲಸಿಗರ ಬಾಕಿಯನ್ನು ದಶಕಗಳಿಂದ ಸೃಷ್ಟಿ ಮಾಡಿದೆ.

ಭಾರತೀಯ ನಾಗರಿಕರಿಂದ ನಿರ್ದಿಷ್ಟವಾಗಿ 80 ವರ್ಷಗಳಿಂದ ಬಾಕಿ ಉಳಿದಿದೆ. 2 ಲಕ್ಷ ಮಂದಿ ಶಾಶ್ವತ ವಾಸ್ತವ್ಯ ಪಡೆಯುವ ಮುಂಚೆಯೇ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಜನಪ್ರತಿನಿಧಿಗಳು.

H-1B ವೀಸಾ ಇರುವಂಥವರು ತಮ್ಮ ಉದ್ಯೋಗ ಬದಲಾವಣೆ ಮಾಡಲು ಸಾಧ್ಯವಿಲ್ಲ ಅಥವಾ ಹೊಸದಾಗಿ ಸ್ವಂತ ವ್ಯವಹಾರ ಮಾಡುವುದಕ್ಕೆ ಅವಕಾಶ ಇಲ್ಲ. ಅವರಿಂದ ಒಟ್ಟಾರೆ ಉತ್ಪಾದಕತೆ ಹೆಚ್ಚಾದರೂ, ಹೊಸ ಪೇಟೆಂಟ್​ಗಳನ್ನು, ವೇತನವನ್ನು ತೋರಿದರೂ ಸಹಾಯ ಆಗಲ್ಲ. H-1B ವೀಸಾ ತಾತ್ಕಾಲಿಕವಾದದ್ದು. ಅನಿಶ್ಚತತೆ ಇದ್ದೇ ಇರುತ್ತದೆ. ಏಕೆಂದರೆ ಅವರು ಉದ್ಯಮಿಗಳಾಗಲು ಸಾಧ್ಯವಿಲ್ಲ, ಮನೆ ಖರೀದಿಸಲು ಆಗಲ್ಲ.

ಅರ್ಜಿದಾರರು ಪಾವತಿಸುವ ಇತರ ಆಡಳಿತಾತ್ಮಕ ಪ್ರೊಸೆಸಿಂಗ್ ಶುಲ್ಕದ ಮೇಲೆ ಹೆಚ್ಚುವರಿಯಾಗಿ ಈ ಪೂರಕ ಶುಲ್ಕವನ್ನು ಭರಿಸಬೇಕಾಗುತ್ತದೆ. ಆದರೆ ಕಾನೂನಾತ್ಮಕ ವಲಸೆ ವ್ಯವಸ್ಥೆಯ ರಚನೆಯಲ್ಲಿ ಯಾವುದೇ ಶಾಶ್ವತವಾದ ಬದಲಾವಣೆ ಆಗಲ್ಲ. ಅದರಲ್ಲಿ ಗ್ರೀನ್​ ಕಾರ್ಡ್​ಗಳ ಮಿತಿ ಅಥವಾ H-1B ವೀಸಾದ ವಾರ್ಷಿಕ ಕೋಟಾದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ.

ಇದು ಕಾನೂನು ಆಗುವ ಮುನ್ನ, ನ್ಯಾಯಾಂಗ ಸಮಿತಿಯಲ್ಲಿ, ಜನಪ್ರತಿನಿಧಿಗಳ ಸಭೆ ಹಾಗೂ ಸೆನೆಟ್​ನಲ್ಲಿ ಪ್ರಾವಿಷನ್ ಅನುಮೋದನೆ ಪಡೆದು, ಅಮೆರಿಕ ಅಧ್ಯಕ್ಷರಿಂದ ಸಹಿ ಆಗಬೇಕು, ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಿಬಿಎಸ್​ನ್ಯೂಸ್​ ವರದಿ ಪ್ರಕಾರ, ಯಶಸ್ಸು, ಕಾನೂನುಬದ್ಧ ಯೋಜನೆಯು ದಾಖಲೆಗಳು ಇಲ್ಲದ ವಲಸಿಗರು ಅಮೆರಿಕಕ್ಕೆ ಮಕ್ಕಳಾಗಿ, ಟೆಂಪೊರರಿ ಪ್ರೊಟೆಕ್ಟೆಡ್ ಸ್ಟೇಟಸ್ (ಟಿಪಿಎಸ್) ಫಲಾನುಭವಿಗಳು, ಕೃಷಿ ಕಾರ್ಮಿಕರು ಮತ್ತು ಕೊರೊನಾ ಕಾಲದಲ್ಲಿ ಬಂದಿರುವ ಇತರ ಅಗತ್ಯ ಸೇವೆ ಕಾರ್ಮಿಕರು ಅಮೆರಿಕದ ವಾಸ್ತವ್ಯ ಅಥವಾ ಗ್ರೀನ್ ಕಾರ್ಡ್​ಗಳಿಗೆ ಅರ್ಜಿ ಹಾಕಬಹುದು.

English summary
A new set of immigration provisions to be introduced as part of a budget reconciliation bill in the US could result in a reduction in wait times for Indians in line for Permanent residency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X