• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತೀಯರಿಗೆ ಕೊಟ್ಟ ಮಾತು ಉಳಿಸಿಕೊಂಡ ಅಮೆರಿಕ ಅಧ್ಯಕ್ಷ ಬೈಡನ್

|
Google Oneindia Kannada News

ಚುನಾವಣೆಗೆ ಮೊದಲು ಭಾರತೀಯರಿಗೆ ಸಿಕ್ಕಾಪಟ್ಟೆ ಆಶ್ವಾಸನೆ ನೀಡಿ, ಕೋಟ್ಯಂತರ ಭಾರತೀಯರ ವೋಟ್‌ನ ಪಡೆದಿದ್ದ ಅಮೆರಿಕ ಅಧ್ಯಕ್ಷ ಬೈಡನ್ ಸಿಹಿಸುದ್ದಿ ನೀಡಿದ್ದಾರೆ. ಭಾರತ ಮೂಲದ ನೀರಾ ಟಂಡನ್‌ರನ್ನ ಅಮೆರಿಕ ಅಧ್ಯಕ್ಷ ಬೈಡನ್‌ರ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿದೆ. ನೀರಾ ಟಂಡನ್ ಸೋಮವಾರ ಶ್ವೇತಭವನ ಪ್ರವೇಶಿಸಲಿದ್ದಾರೆ.

ಈ ಹಿಂದೆ ಶ್ವೇತಭವನ ನಿರ್ವಹಣೆ ಹಾಗೂ ಬಜೆಟ್ ಸಹಾಯಕ ನಿರ್ದೇಶಕಿ ಸ್ಥಾನಕ್ಕೆ ಟಂಡನ್ ಅವರನ್ನ ಆಯ್ಕೆ ಮಾಡಲಾಗಿತ್ತು. ಆದರೆ ರಿಪಬ್ಲಿಕನ್‌ ಸೆನೆಟರ್ಸ್ ವಿರೋಧದಿಂದ 2 ತಿಂಗಳ ಹಿಂದಷ್ಟೇ ಶ್ವೇತ ಭವನದ ಬಜೆಟ್‌ ನಿರ್ವಹಣಾ ನಿರ್ದೇಶಕಿ ಸ್ಥಾನದ ನಾಮ ನಿರ್ದೇಶನ ಹಿಂಪಡೆದಿದ್ದರು ಟಂಡನ್. ಈಗ ಮತ್ತೆ ದೊಡ್ಡ ಅವಕಾಶ ಟಂಡನ್ ಅವರನ್ನು ಹುಡುಕಿಕೊಂಡು ಬಂದಿದೆ.

ಒಟ್ಟು 2 ದೊಡ್ಡ ಹೊಣೆಗಾರಿಕೆ ಹೊತ್ತಿರುವ ಟಂಡನ್, ಮೊದಲನೇ ಹೊಣೆಯಾಗಿ ಅಮೆರಿಕದ ಡಿಜಿಟಲ್ ಸೇವೆ ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆ 'ಅಫೋರ್ಡಬಲ್ ಕೇರ್‌ ಆ್ಯಕ್ಟ್' ರದ್ದುಪಡಿಸಲು ಕೋರಿ ರಿಪಬ್ಲಿಕನ್ಸ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಅಮೆರಿಕದ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸಲಿದ್ದಾರೆ.

 ಹಿಲರಿ ಜೊತೆಗೂ ಕೆಲಸ

ಹಿಲರಿ ಜೊತೆಗೂ ಕೆಲಸ

ಭಾರತ ಮೂಲದ ನಂಟು ಹೊಂದಿರುವ ನೀರಾ ಟಂಡನ್ ಹಿಂದೆ ಹಿಲರಿ ಕ್ಲಿಂಟನ್‌ರ ಮೊದಲನೇ ಅಧ್ಯಕ್ಷೀಯ ಚುನಾವಣೆ ಪ್ರಚಾರಕ್ಕೆ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇಂಡಿಯನ್-ಅಮೆರಿನ್‌ ನೀತಿ ತಜ್ಞೆಯೂ ಆಗಿರುವ ಟಂಡನ್, ಪ್ರಗತಿಪರ ಚಿಂತಕರ ಚಾವಡಿ ‘ಸೆಂಟರ್ ಫಾರ್ ಅಮೆರಿಕನ್ ಪ್ರೊಗ್ರೆಸ್‌' ಅಧ್ಯಕ್ಷೆ ಮತ್ತು ಸಿಇಒ ಕೂಡ ಆಗಿದ್ದಾರೆ. ಅಮೆರಿಕದ ರಾಜಕೀಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಂಡನ್, ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿಜ್ಞಾನ ಪದವಿ ಜೊತೆಗೆ ಕಾನೂನು ಪದವಿಯನ್ನೂ ಪಡೆದಿದ್ದಾರೆ. ಒಬಾಮಾ ಕಾಲದಿಂದಲೂ ಮುಂಚೂಣಿಯ ಸ್ಥಾನಗಳನ್ನು ಟಂಡನ್ ಅವರು ಅಲಂಕರಿಸಿದ್ದಾರೆ.

ಇದರಿಂದ ಭಾರತಕ್ಕೇನು ಲಾಭ..?

ಇದರಿಂದ ಭಾರತಕ್ಕೇನು ಲಾಭ..?

ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಹಿಡಿದು, ಭದ್ರತಾ ಮಂಡಳಿವರೆಗೂ ಭಾರತದ ಪ್ರತಿಭೆಗಳು ರಾರಾಜಿಸುತ್ತಿವೆ. ಇದರಿಂದ ಭಾರತಕ್ಕೆ ಸಾಕಷ್ಟು ಲಾಭವಿದೆ. ಸಚಿವ ಸ್ಥಾನದಲ್ಲಿ ನಮ್ಮವರೇ ಕೂತಿರುವಾಗ, ಇದರಿಂದ ಭಾರತಕ್ಕೆ ಸಾಕಷ್ಟು ಅನುಕೂಲವಾಗಲಿದೆ. ನಮ್ಮ ಸುತ್ತಮುತ್ತ ಶತ್ರು ರಾಷ್ಟ್ರಗಳು ಕಾಲು ಕೆರೆದು ಜಗಳಕ್ಕೆ ಬರುತ್ತಿರುವಾಗ ಅಮೆರಿಕದ ಬೆಂಬಲ ಸಿಗಬಹುದು. ಕಷ್ಟದ ಸಂದರ್ಭದಲ್ಲಿ ಅಮೆರಿಕದ ನಾಯಕರ ಮೇಲೆ ಒತ್ತಡ ಹಾಕಿ ಭಾರತಕ್ಕೆ ಸಹಾಯ ಸಿಗುವಂತೆ ಮಾಡುವಲ್ಲಿ ಇವರ ಪಾತ್ರವೂ ಪ್ರಮುಖವಾಗಲಿದೆ. ಹೀಗಾಗಿಯೇ ಅಮೆರಿಕ ಆಡಳಿತಕ್ಕೆ ಭಾರತ ಮೂಲದವರ ಆಯ್ಕೆ ಸಿಹಿಸುದ್ದಿ ಎನ್ನಬಹುದು.

ಕಮಲಾ ಸಾಧನೆ ಅವಿಸ್ಮರಣೀಯ

ಕಮಲಾ ಸಾಧನೆ ಅವಿಸ್ಮರಣೀಯ

ಅಮೆರಿಕ ಎಂದರೆ ಕೈಗೆಟುಕದ ಕುಸುಮ ಎಂಬ ಕಾಲವೊಂದಿತ್ತು. ಆದರೆ ಈಗ ಮಾತು ಬದಲಾಗಿದೆ. ಅದನ್ನು ಸಾಧಿಸಿದ್ದು ಕಮಲಾ ಹ್ಯಾರಿಸ್. ಭಾರತದ ತಮಿಳುನಾಡು ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿದ್ದಾರೆ. ಹೀಗೆ ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರಿಗೆ ದೊಡ್ಡ ಅವಕಾಶ ಸಿಕ್ಕಂತಾಗಿದೆ.

ಬೈಡನ್ ಗೆಲ್ಲುವಲ್ಲಿಯೂ ಕಮಲಾ ಹ್ಯಾರಿಸ್

ಬೈಡನ್ ಗೆಲ್ಲುವಲ್ಲಿಯೂ ಕಮಲಾ ಹ್ಯಾರಿಸ್

ಹಾಗೇ ಬೈಡನ್ ಗೆಲ್ಲುವಲ್ಲಿಯೂ ಕಮಲಾ ಹ್ಯಾರಿಸ್ ಆಯ್ಕೆಯ ಪರಿಣಾಮ ದೊಡ್ಡದಿದೆ. ಹೇಗೆಂದರೆ ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರು ಹಾಗೂ ಅವರ ತಂದೆ ಜಮೈಕನ್ ಆಗಿದ್ದು, ಇದೇ ಕಾರಣಕ್ಕೆ ಒಂದು ಕಡೆ ಭಾರತೀಯರ ಮತ ಹಾಗೂ ಮತ್ತೊಂದ್ಕಡೆ ಆಫ್ರಿಕನ್-ಅಮೆರಿಕನ್ಸ್ ಮತಗಳನ್ನು ಬೈಡನ್ ಪಡೆದಿದ್ದರು ಎನ್ನುತ್ತಾರೆ ವಿಶ್ಲೇಷಕರು.

English summary
Indian-American Neera Tanden appointed for White House senior adviser post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X