ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಹೃದಯ ಗೆದ್ದರೆ ಮಾತ್ರ ಅಮೆರಿಕ ಅಧ್ಯಕ್ಷರಾಗಲು ಸಾಧ್ಯ..!

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿದೆ. ಹಾಗೇ ಭಾರತ ಮತ್ತು ಭಾರತೀಯರಿಗೂ ಈ ಚುನಾವಣೆ ಅತಿಮುಖ್ಯ. ಭಾರತೀಯರಿಗಿಂತ ಹೆಚ್ಚಾಗಿ ಅಮೆರಿಕನ್ನರಿಗೂ ಭಾರತ ಮೂಲದವರ ಮತಗಳು ಅತಿಮುಖ್ಯ. ಹೀಗೆ ಭಾರತ-ಅಮೆರಿಕದ ನಡುವೆ 2020ರ ಅಧ್ಯಕ್ಷೀಯ ಚುನಾವಣೆ ಗಾಢ ನಂಟನ್ನೇ ಬೆಸೆದಿದೆ.

ಇದೇ ಕಾರಣಕ್ಕೆ ಟ್ರಂಪ್, ಬಿಡೆನ್ ಹಾಗೂ ಕಮಲಾ ಭಾರತೀಯರನ್ನು ಓಲೈಸಲು ಸರ್ಕಸ್ ಮಾಡುತ್ತಿದ್ದಾರೆ. ಭಾರತೀಯರಿಗೆ ದೊಡ್ಡ ಹಬ್ಬವಾದ ನವರಾತ್ರಿ ಶುಭಾಶಯ ಕೋರಿರುವ ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಭಾರತೀಯರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳೇನು ಹೊರತಾಗಿಲ್ಲ. ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಹಾಗೂ ಟ್ರಂಪ್ ಎದುರಾಳಿ ಬಿಡೆನ್, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ನವರಾತ್ರಿ ಪ್ರಯುಕ್ತ ಶುಭ ಹಾರೈಸಿದ್ದಾರೆ.

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಪ್ರತಿವರ್ಷವೂ ವಿಶ್ವದಾದ್ಯಂತ ಭಾರತೀಯರಿಗೆ ನವರಾತ್ರಿ ಶುಭಾಶಯ ಕೇಳಿಬರುವುದು ಮಾಮೂಲು. ಆದರೆ ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಶುಭ ಹಾರೈಕೆ ಭಾರಿ ಮಹತ್ವ ಪಡೆದಿದೆ. ಇವರಷ್ಟೇ ಅಲ್ಲದೆ, ಭಾರತ ಮೂಲದ ಅಮೆರಿಕ ಸಂಸದರಾದ ರಾಜಾ ಕೃಷ್ಣಮೂರ್ತಿ, ಡಾ. ಅನಿಲ್ ಬೇರಾ, ಪ್ರಮೀಳಾ ಜೈಪಾಲ್, ರೋ ಖನ್ನಾ ಸೇರಿದಂತೆ ಅನೇಕರು ನವರಾತ್ರಿ ಶುಭಾಶಯ ಕೋರಿದ್ದಾರೆ. ಹಾಗೇ ದುರ್ಗಾ ಮಾತೆ ಭಾರತೀಯರಿಗೆ ಸುಖ-ಸಂತೋಷ ಹಾಗೂ ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದ್ದಾರೆ.

Navratri Special: Best wishes from Trump, Biden & Kamala

ಭಾರತಕ್ಕೂ ಬಹುಮುಖ್ಯ ಈ ಚುನಾವಣೆ..!
ಒಟ್ಟಾರೆ ಹೇಳುವುದಾದರೆ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರತೀಯರಿಗೆ ಬಹುಮುಖ್ಯವಾಗಿದೆ. ಒಂದೆಡೆ ಆರ್ಥಿಕ ಕುಸಿತ ಹಾಗೂ ಚೀನಾ ಜೊತೆಗಿನ ಯುದ್ಧ ಸನ್ನಿವೇಶ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಸಂದರ್ಭದಲ್ಲಿ ಭಾರತದ ಪರ ಒಲವಿರುವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಮೆರಿಕದಲ್ಲಿ ಅಧಿಕಾರ ವಹಿಸಿಕೊಂಡರೆ ಭಾರತದ ಪರ ನಿಲ್ಲುವುದು ಖಚಿತ. ಹೀಗಾಗಿ ಹೈವೋಲ್ಟೇಜ್ ಅಮೆರಿಕನ್ ಎಲೆಕ್ಷನ್‌ನತ್ತ ಕೋಟ್ಯಂತರ ಭಾರತೀಯರ ಚಿತ್ತ ನೆಟ್ಟಿದೆ.

Navratri Special: Best wishes from Trump, Biden & Kamala

ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು

ಭಾರತೀಯರ ಮತವೇ ನಿರ್ಣಾಯಕ..!
ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಭಾರತ ಮೂಲದ ಮತದಾರರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ಆ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅಮೆರಿಕ ರಾಜಕಾರಣದಲ್ಲಿ ಭಾರತೀಯರ ಹವಾ ಎಷ್ಟಿದೆ ಎಂದರೆ, ಹಲವು ಸಂಸದರು ಭಾರತ ಮೂಲದವರೇ ಆಗಿದ್ದಾರೆ. ಅಷ್ಟೇ ಏಕೆ ಈಗ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಕೂಡ ಭಾರತ ಮೂಲದ ನಂಟನ್ನು ಹೊಂದಿದ್ದಾರೆ. ಕಮಲಾ ಹ್ಯಾರಿಸ್ ತಾಯಿ ತಮಿಳುನಾಡು ಮೂಲದವರು. ಸ್ವತಃ ಕಮಲಾ ಭಾರತದ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ಇದು ರಾಜಕಾರಣಿಗಳ ಮಟ್ಟದ್ದದಾರೆ, ಭಾರತ ಮೂಲದ ಮತದಾರರ ಶಕ್ತಿ ಕೂಡ ಹೆಚ್ಚುತ್ತಲೇ ಸಾಗಿದೆ. ಹೀಗಾಗಿಯೇ ಭಾರತೀಯರ ಮನ ಗೆಲ್ಲಲು ಅಮೆರಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಗಳು ಪ್ರಯತ್ನಿಸುತ್ತಿರುವುದು.

Navratri Special: Best wishes from Trump, Biden & Kamala

ಅಮೆರಿಕದಲ್ಲಿ ಭಾರತೀಯರದ್ದೇ ಹವಾ..!
ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರತೀಯ ಮತದಾರರನ್ನೇ ಅವಲಂಬಿಸಿದೆ. ಇತ್ತೀಚೆಗೆ ಅಮೆರಿಕದಲ್ಲಿ ಘಟಿಸಿದ ಜಾರ್ಜ್ ಫ್ಲಾಯ್ಡ್ ಸಾವು ಹಾಗೂ ಆ ನಂತರದ ವರ್ಣಭೇದ ಸಂಘರ್ಷ ಈಗಾಗಲೇ ಟ್ರಂಪ್ ವಿರುದ್ಧ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆಗಳನ್ನು ಒಗ್ಗೂಡಿಸಿದೆ. ಈ ನಡುವೆ ಕಮಲಾ ಭಾರತ ಮೂಲದವರ ಮತಗಳನ್ನು ಒಗ್ಗೂಡಿಸುತ್ತಿದ್ದಾರೆ. ಕೊರೊನಾ ನಿಭಾಯಿಸುವಲ್ಲೂ ಟ್ರಂಪ್ ಎಡವಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಈ ಬಾರಿ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಭಾರತೀಯರ ಪಾತ್ರ ಮಹತ್ವದ್ದಾಗಿದ್ದು, ಸಮೀಕ್ಷೆಗಳ ಪ್ರಕಾರ ಬಹುಪಾಲು ಭಾರತೀಯರು ಬಿಡೆನ್ ಪರ ಒಲವು ಹೊಂದಿದ್ದಾರೆ. ಹೀಗಾಗಿ ಕಮಲಾ ಆಯ್ಕೆ ಡೆಮಾಕ್ರಟಿಕ್ ಪಕ್ಷದ ಚುನಾವಾಣಾ ದಿಕ್ಕನ್ನೇ ಬದಲಾಯಿಸಿದೆ.

English summary
American candidates trying to win the votes of Indians as the US election draws to a close. Trump, Biden, Kamala Harris wished for Navaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X