• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಹ್ಯಾಕಾಶದ ಚಿತ್ರ ಕ್ಲಿಕ್ಕಿಸಿ ರವಾನಿಸಿದ ನಾಸಾದ ಸೋಲಾರ್ ಪ್ರೋಬ್ ನೌಕೆ

|

ವಾಷಿಂಗ್ಟನ್, ಸೆಪ್ಟೆಂಬರ್ 24: ಕಳೆದ ತಿಂಗಳಷ್ಟೇ ಸೂರ್ಯನ ಅಂಗಳದ ಹತ್ತಿರಕ್ಕೆ ಹೊರಟಿರುವ ನಾಸಾದ ಮಹತ್ವಾಕಾಂಕ್ಷೆಯ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಮೊದಲ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.

ಸೂರ್ಯನತ್ತ ಪ್ರಯಾಣ ಬೆಳೆಸಿರುವ ನೌಕೆಯಲ್ಲಿನ ವೈಡ್ ಫೀಲ್ಡ್ ಇಮೇಜರ್ (ಡಬ್ಲ್ಯೂಐಎಸ್‌ಪಿಆರ್) ಸೆ.9ರಂದು ತನ್ನ ಮುಚ್ಚಿದ ಬಾಗಿಲುನ ತೆರೆದು ಒಳಗಿರುವ ಸಾಧನಕ್ಕೆ ಪ್ರಯಾಣದ ಚಿತ್ರ ತೆಗೆಯಲು ಅನುವು ಮಾಡಿಕೊಟ್ಟಿದೆ.

ನಾಸಾದ ಪಾರ್ಕರ್ ಸೋಲಾರ್ ನೌಕೆ ಹಿಂದೆ ಭಾರತದ ವಿಜ್ಞಾನಿಯ ಕೊಡುಗೆ

ವೈಡ್ ಫೀಲ್ಡ್ ಇಮೇಜರ್, ತನ್ನ ಒಳ ಮತ್ತು ಬಾಹ್ಯ ಟೆಲಿಸ್ಕೋಪ್‌ಗಳ ಮೂಲಕ ನೀಲ ಛಾಯೆಯ, ನಕ್ಷತ್ರಗಳು ಉದ್ದಕ್ಕೂ ಕಾಣಿಸುವಂತಹ ಬಾಹ್ಯಾಕಾಶದ ಎರಡು ಪ್ಯಾನೆಲನ್ ಚಿತ್ರಗಳನ್ನು ಕ್ಲಿಕ್ಕಿಸಿದೆ.

ಚಿತ್ರದಲ್ಲಿ ಸೂರ್ಯ ಕಾಣಿಸದೆ ಇದ್ದರೂ, ಗುರುಗ್ರಹವನ್ನು ಅದು ತೋರಿಸಿದೆ.

ನಾಸಾದ ಐತಿಹಾಸಿಕ ಯೋಜನೆಯ ಭಾಗವಾದ ಚಿಕ್ಕ ಕಾರಿನ ಗಾತ್ರದ ಸೋಲಾರ್ ಪ್ರೋಬ್ ನೌಕೆ ಆಗಸ್ಟ್ 12ರಂದು ಸೂರ್ಯನ ಪ್ರಭಾ ವಲಯದಲ್ಲಿ ಸುತ್ತಾಡುತ್ತಾ ಸೂರ್ಯನ ಕುರಿತ ಮಾಹಿತಿಗಳನ್ನು ರವಾನಿಸಲು ಬಾನ್ದಳಕ್ಕೆ ಹಾರಿತ್ತು. ಇದು ಸೂರ್ಯನಿಗೆ ಅತಿ ಸಮೀಪ, ಅಂದರೆ 3.8 ಮಿಲಿಯನ್ ಮೈಲು ದೂರದವರೆಗೂ ಕ್ರಮಿಸಲಿದೆ.

ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ'

ಈ ನೌಕೆಯಲ್ಲಿ ಅಳವಡಿಸಿರುವ ಸಾಧನಗಳು ಸೂರ್ಯನ ಅಧ್ಯಯನಕ್ಕೆ ಮಾತ್ರ ಮೀಸಲಾಗಿಲ್ಲ. ಸೂರ್ಯನ ಸಮೀಪದಲ್ಲಿ ಇರುವ ಸೌರ ವಾತಾವರಣದ ಅನೇಕ ರಹಸ್ಯಗಳನ್ನು ಸಹ ಭೇದಿಸಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ವಿಜ್ಞಾನಿ ನೌರ್ ರಾವುಫಿ ಹೇಳಿದ್ದಾರೆ.

ಸೌರ ನೌಕೆಯು ಡಿಸೆಂಬರ್ ವೇಳೆಗೆ ಸೂರ್ಯನ ಪ್ರಭಾ ವಲಯವನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಈಗ ಅದು ರವಾನಿಸಿರುವ ಚಿತ್ರ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿ ಆಗಿಲ್ಲದೆ ಇದ್ದರೂ, ನೌಕೆಯ ನಾಲ್ಕೂ ಸಾಧನಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿದೆ.

ಸೂರ್ಯನ ಸ್ಪರ್ಶಕ್ಕಾಗಿ ನಭಕ್ಕೆ ಚಿಮ್ಮಿದ ಪಾರ್ಕರ್ ನೌಕೆ!

ನೌಕೆಯಲ್ಲಿರುವ ಐಎಸ್‌ಒಐಎಸ್, ಫೀಲ್ಡ್ಸ್ ಮತ್ತು ಸ್ವೀಪ್ ಸಾಧನಗಳು ಸಹ ಕೆಲವು ದತ್ತಾಂಶಗಳನ್ನು ನಾಸಾಕ್ಕೆ ರವಾನಿಸಿವೆ.

English summary
NASA's historic Parker Solar Probe has beamed back the first images data after launched on August 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X