• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೌರಮಂಡಲವನ್ನೂ ದಾಟಿ ಸಾಗಿದ ನಾಸಾ ಬಾಹ್ಯಾಕಾಶ ನೌಕೆ

|

ತಂಪಾ, ಜನವರಿ 1: ಸೌರಮಂಡಲ ಕ್ಷೇತ್ರದಲ್ಲಿ ನಾಸಾ ಹೊಸ ವರ್ಷದ ದಿನದಂದೇ ಮಹತ್ವದ ಐತಿಹಾಸಿಕ ಸಾಧನೆಯತ್ತ ಸಾಗಿದೆ. ನಾಸಾದ 'ನ್ಯೂ ಹಾರಿಜಾನ್' ನೌಕೆ ಮಾನವ ಕುಲ ಇದುವರೆಗೂ ಅಧ್ಯಯನ ಮಾಡಿರುವ ಜಗತ್ತಿನ ಕಟ್ಟಕಡೆಯ ಪದರ ಎಂದು ಗುರುತಿಸಿದ್ದ ಅಲ್ಟಿಮಾ ಟ್ಯುಲೆಯನ್ನೂ ದಾಟಿ ಮುಂದೆ ಹೋಗಲಿದೆ.

ಸೌರ ವ್ಯವಸ್ಥೆಯಲ್ಲಿ ಇದುವರೆಗೂ ಪತ್ತೆಹಚ್ಚಲಾದ, ಭೂಮಿಯಿಂದ 6.5 ಬಿಲಿಯನ್ ಕಿಲೋಮೀಟರ್ ದೂರದ ಬಾಹ್ಯಾಕಾಶ ವಸ್ತುಗಳನ್ನೂ ಕ್ರಮಿಸಿ ಅಲ್ಟಿಮಾ ಟ್ಯುಲೆ ಹಿಮಗಲ್ಲನ್ನು ನ್ಯೂ ಹಾರಿಜಾನ್ ದಾಟಿ ತೆರಳಲಿದೆ.

ಈ ಸಂದರ್ಭದಲ್ಲಿ 30 ಕಿ.ಮೀ.ಯಷ್ಟು ದೊಡ್ಡದಾದ ನ್ಯೂ ಹಾರಿಜಾನ್, ಅಲ್ಟಿಮಾ ಟ್ಯುಲೆಯಿಂದ ಕೇವಲ 3,500 ಕಿ.ಮೀ. ದೂರದಲ್ಲಿ ಹಾದುಹೋಗಲಿದ್ದು, ಈ ವೇಳೆ ಗಿಗಾಬೈಟ್‌ಗಳಷ್ಟು ಫೋಟೊಗಳನ್ನು ಮತ್ತು ಇತರೆ ದತ್ತಾಂಶಗಳನ್ನು ಸಂಗ್ರಹಿಸಲು ಅದು ಸಿದ್ಧತೆ ನಡೆಸಿದೆ.

ಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆ

ಪ್ಲೂಟೋ ಗ್ರಹವನ್ನು ದಾಟಿ ಸುಮಾರು ಬಿಲಿಯನ್‌ ಕಿ.ಮೀಯಷ್ಟು ದೂರ ನ್ಯೂ ಹಾರಿಜಾನ್ ತಲುಪಿದ್ದು, ಜಗತ್ತಿನಲ್ಲಿಯೇ ಇದು ಬಾಹ್ಯಾಕಾಶ ನೌಕೆಯೊಂದರ ಅತಿ ದೂರದ ಯಾನವಾಗಿದೆ.

ನ್ಯೂ ಹಾರಿಜಾನ್‌ನ ಈ ಪ್ರಯಾಣವು ಸೌರ ವ್ಯವಸ್ಥೆ ಹೇಗೆ ರೂಪುಗೊಂಡಿತು, ಗ್ರಹಗಳು ರಚನೆಯಾಗಲು ಯಾವ ಅಂಶಗಳು ನೆರವಾದವು ಇತ್ಯಾದಿ ಮಹತ್ವದ ಸಂಗತಿಗಳನ್ನು ಅಧ್ಯಯನ ಮಾಡಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ.

ಬಾಹ್ಯಾಕಾಶ

ಬಾಹ್ಯಾಕಾಶ

2006ರಲ್ಲಿ ನೌಕೆಯನ್ನು ಉಡಾವಣೆ ಮಾಡಿದ ಸಂದರ್ಭದಲ್ಲಿ ಅಲ್ಟಿಮಾ ಟ್ಯುಲೆ ಇನ್ನೂ ಪತ್ತೆಯಾಗಿರಲಿಲ್ಲ. 2014ರಲ್ಲಿ ಹಬ್ಬಲ್ ಬಾಹ್ಯಾಕಾಶ ದೂರದರ್ಶಕ ಬಳಸಿ ಬಾಹ್ಯಾಕಾಶ ವಿಜ್ಞಾನಿಗಳು ಟ್ಯುಲೆಯನ್ನು ಕಂಡುಹಿಡಿದಿದ್ದರು. ಬಳಿಕ ನ್ಯೂಹಾರಿಜಾನ್ ಯೋಜನೆಯನ್ನು 2015ರವರೆಗೂ ವಿಸ್ತರಿಸಿ ಟ್ಯುಲೆಯ ಅಧ್ಯಯನಕ್ಕೆ ಬಳಸಿಕೊಂಡಿದ್ದರು.

ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?

ಅಪರಿಚಿತ ಪ್ರದೇಶದಲ್ಲಿ ಯಾವುದು ಬೇಕಾದರೂ ಸಂಭವಿಸಲು ಸಾಧ್ಯ ಎಂದು ನ್ಯೂ ಹಾರಿಜಾನ್ ನೌಕಾ ಯೋಜನೆಯ ವಿಜ್ಞಾನಿ ಜಾನ್ ಸ್ಪೆನ್ಸರ್ ತಿಳಿಸಿದ್ದಾರೆ.

2006ರ ಉಡಾವಣೆ

2006ರ ಜನವರಿಯಲ್ಲಿ ಉಡಾವಣೆಗೊಂಡಿದ್ದ ನ್ಯೂ ಹಾರಿಜಾನ್, ಸೌರ ವ್ಯವಸ್ಥೆಯ ಅತಿ ತುದಿಯಲ್ಲಿರುವ ಕುಬ್ಜ ಗ್ರಹವಾದ ಪ್ಲೂಟೋ ಮತ್ತು ಅದರ ಐದು ಚಂದ್ರಗಳನ್ನು ಅಧ್ಯಯನ ಮಾಡುವ ಸಲುವಾಗಿ 4 ಬಿಲಿಯನ್ ಮೈಲು ಪ್ರಯಾಣ ಆರಂಭಿಸಿತ್ತು. ಸಣ್ಣ ಪಿಯಾನೋ ಗಾತ್ರದ ಈ ನೌಕೆ 2015ರಲ್ಲಿ ಪ್ಲೂಟೋವನ್ನು ಹಾದು ಹೋಗಿತ್ತು. ಆಗ ಗ್ರಹದ ಮೊದಲ ಸಮೀಪದ ಚಿತ್ರಗಳನ್ನು ರವಾನಿಸಿತ್ತು.

ಕೆಂಪು ಗ್ರಹಕ್ಕೆ ಗಗನಯಾತ್ರಿಕರ ರವಾನೆಗೆ ನೆರವಾಗಲಿದೆ 'ಇನ್‌ಸೈಟ್'

ಸೌರ ವ್ಯವಸ್ಥೆ ರಚನೆ ಅಧ್ಯಯನ

ಹಾರಾಟದ ವೇಳೆ ಪ್ಲೂಟೋ ಈ ಹಿಂದೆ ಊಹಿಸಿದ್ದಕ್ಕಿಂತಲೂ ತುಸು ದೊಡ್ಡದಾಗಿರುವುದು ಕಂಡುಬಂದಿತ್ತು. ಪ್ಲೂಟೋದ ಹಿಮಾವ್ರತ ಮೇಲ್ಮೈನಲ್ಲಿ ಮಿಥೇನ್ ರಾಶಿ ಇರುವುದು ಮಾರ್ಚ್‌ನಲ್ಲಿ ಗೊತ್ತಾಗಿತ್ತು.

ಪ್ಲೂಟೋವನ್ನು ಹಿಂದಿಕ್ಕಿ 1 ಬಿಲಿಯನ್ ಕಿ.ಮೀ. ಸಾಗಿ ಕ್ಯುಪೆರ್ ಬೆಲ್ಟ್‌ನತ್ತ ತಲುಪಿದ ಬಳಿಕ ನ್ಯೂ ಹಾರಿಜಾನ್, ಸೌರ ವ್ಯವಸ್ಥೆ ಮತ್ತು ಅದರ ಗ್ರಹಗಳ ರಚನೆಯ ಬಗ್ಗೆ ಸುಳಿವುಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿದೆ.

ಅಲ್ಟಿಮಾ ಟ್ಯುಲೆ ಎಂದರೆ ಲ್ಯಾಟಿನ್ ಭಾಷೆಯಲ್ಲಿ, 'ಪರಿಚಿತ ಜಗತ್ತಿನ ಗಡಿಯಾಚೆಗೆ' ಎಂದರ್ಥ.

ರಾಸಾಯನಿಕ ಸಂರಚನೆ ಅಧ್ಯಯನ

ರಾಸಾಯನಿಕ ಸಂರಚನೆ ಅಧ್ಯಯನ

ಅಲ್ಟಿಮಾ ಟ್ಯುಲೆಯಿಂದ 3,500 ಕಿ.ಮೀ. ದೂರದಲ್ಲಿ ಹಾದುಹೋಗಲಿರುವ ನೌಕೆ, ಅದರ ವಾತಾವರಣದಲ್ಲಿರುವ ರಾಸಾಯನಿಕ ಸಂರಚನೆಯನ್ನು ಪತ್ತೆ ಹಚ್ಚಲಿದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಬಾಹ್ಯಾಕಾಶದ ಯಾವುದೇ ವಸ್ತುವಿನ ಅತ್ಯಂತ ಸಮೀಪದ ಅಧ್ಯಯನವಾಗಲಿದೆ ಎಂದು ನಾಸಾ ತಿಳಿಸಿದೆ. ನೌಕೆಯು ಗಂಟೆಗೆ 51,200 ಕಿ.ಮೀ. ವೇಗದಲ್ಲಿ ಸಾಗುತ್ತದೆ.

English summary
NASA spacecraft New Horizons will pass the furthest object ever exposed in the Solar System Ultima Thule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X