ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ನಿಲ್ದಾಣಕ್ಕೆ 4 ಗಗನಯಾತ್ರಿಗಳ ಪ್ರಯಾಣ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 16: ಮೂವರು ಅಮೆರಿಕದ ಹಾಗೂ ಒಬ್ಬ ಜಪಾನ್ ಗಗನಯಾತ್ರಿಗಳು ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ ನೌಕೆಯು ಅಮೆರಿಕದ ಫ್ಲೋರಿಡಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಹಾರಿದೆ.

ಈ ತಂಡವು ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೇಸ್ ಎಕ್ಸ್ ಒದಗಿಸಿರುವ ರಾಕೆಟ್‌ ಮತ್ತು ಕ್ಯಾಪ್ಸೂಲ್‌ನಲ್ಲಿ ಸಾಗುತ್ತಿದೆ. ಅಮೆರಿಕದ ನಾಸಾಕ್ಕೆ ಈ ಕಂಪೆನಿಯು ಸೇವೆ ಒದಗಿಸುತ್ತಿರುವುದು ಇದು ಎರಡನೆಯ ಬಾರಿ.

ಕೆಳ ಭೂಮಿ ಕಕ್ಷೆಗೆ ನಿರಂತರ ಗಗನಯಾತ್ರಿ ಪ್ರಯಾಣವನ್ನು ನಡೆಸುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಯುಗ ಸೃಷ್ಟಿಸಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ಅಮೆರಿಕದ ಮಿಖಾಯಲ್ ಹೋಪ್ಕಿನ್ಸ್, ವಿಕ್ಟರ್ ಗ್ಲೋವರ್ ಮತ್ತು ಶನಾನ್ ವಾಕರ್ ಹಾಗೂ ಜಪಾನ್‌ ಬಾಹ್ಯಾಕಾಶ ಸಂಸ್ಥೆಯ (ಜಕ್ಸಾ) ಬಹು ಅನುಭವಿ ಗಗನಯಾನಿ ಸೊಯಿಚಿ ನೊಗುಚಿ ಈ ಯಾನ ಕೈಗೊಂಡಿದ್ದಾರೆ.

NASA Space X 4 Astronauts Launched Orbit Successful

ಜಪಾನ್‌ನ ಸೊಯಿಚಿ ನೊಗುಚಿ ಅವರು ಈ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಮೂರು ವಿಭಿನ್ನ ಬಾಹ್ಯಾಕಾಶ ವಾಹನಗಳ ಮೂಲಕ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಭೂಮಿಯಿಂದ ತೆರಳಿದ ಕೇವಲ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಅವರು ಸೊಯುಜ್ ಮತ್ತು ಶಟ್ಲ್ ಹಾರ್ಡ್‌ವೇರ್ ಮೂಲಕ ಪ್ರಯಾಣಿಸಿದ್ದರು.

ಫಾಲ್ಕನ್ ರಾಕೆಟ್ ಮತ್ತು ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಈ ತಂಡವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 7.27ರ ಸುಮಾರಿಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟಿತು. ಈ ತಂಡವು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲು ಒಂದು ದಿನಕ್ಕೂ ಹೆಚ್ಚು ಸಮಯ ಬೇಕಾಗಲಿದೆ. ಈ ತಂಡವು ನಾಸಾದ ಕೇಟ್ ರುಬಿನ್ಸ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ (ರೊಸ್ಕೊಸ್ಮೊಸ್) ಖಗೋಳಯಾನಿ ಸರ್ಜಿ ರಿಜಿಕೊವ್ ಹಾಗೂ ಸರ್ಜಿ ಕುಡ್ ಸ್ವೆರ್ಕೊವ್ ಅವರನ್ನು ಸೇರಿಕೊಳ್ಳಲಿದೆ.

English summary
US space agency NASA and private space company Space X have successfully launched 4 astronauts from Florida to International Space Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X