ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 18: ನಮ್ಮ ಗ್ರಹ ವ್ಯವಸ್ಥೆಯಲ್ಲಿ ಅತ್ಯಂತ ಚೆಂದದ ಗ್ರಹವೆಂದರೆ ಶನಿ. ಆಭರಣ ಧರಿಸಿದ ಸುಂದರಿಯಂತೆ ಕಾಣುವ ಶನಿ ಗ್ರಹಕ್ಕೆ ಉಂಗುರಗಳೇ ಮೆರುಗು.

ಆದರೆ, ಶನಿಯ ಸೌಂದರ್ಯ ಶಾಶ್ವತವಲ್ಲ. ಮುಂದೊಂದು ದಿನ ಅದು ತನ್ನ ಉಂಗುರದ ಆಭರಣವನ್ನು ಕಳೆದುಕೊಳ್ಳಲಿದೆ.

ಮುಂದಿನ 100 ಮಿಲಿಯನ್ ವರ್ಷಗಳಲ್ಲಿ ಶನಿಯ ಉಂಗುರಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.

ಶನಿಯ ಉಂಗುರಗಳು ಗ್ರಹದ ಆಯಸ್ಕಾಂತೀಯ ಪ್ರಭಾವಕ್ಕೆ ಒಳಗಾಗಿ ಹಿಮದ ಕಣಗಳ ರೂಪದಲ್ಲಿ ದೂಳಿನ ಮಳೆಯಂತೆ ವೇಗವಾಗಿ ಬೀಳುತ್ತಿವೆ.

ಉಂಗುರದಿಂದ ದೂಳಿನ ಮಳೆ

ಒಲಿಂಪಿಕ್ಸ್ ಕ್ರೀಡೆಯಲ್ಲಿ ಬಳಸುವ ಗಾತ್ರದ ಈಜುಕೊಳವನ್ನು ಅರ್ಧಗಂಟೆಯಲ್ಲಿ ಭರ್ತಿ ಮಾಡುವಷ್ಟು ಪ್ರಮಾಣದಲ್ಲಿ ಶನಿಯ ಉಂಗುರದ ದೂಳಿನ ಮಳೆಯು ಸುರಿಯುತ್ತಿದೆ ಎಂದು ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಕೇಂದ್ರದ ಜೇಮ್ಸ್ ಒ ಡೊನೊಫ್ ಹೇಳಿದ್ದಾರೆ.

ಇದೊಂದರಿಂದಲೇ ಸಂಪೂರ್ಣ ಉಂಗುರ ವ್ಯವಸ್ಥೆಯು 300 ಮಿಲಿಯನ್ ವರ್ಷಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಆದರೆ, ಶನಿಯ ಸಮಭಾಜಕ ವೃತ್ತದೊಳಗೆ ಬೀಳುತ್ತಿರುವ ಉಂಗುರದ ಅಂಶಗಳನ್ನು ಅಧ್ಯಯನ ಮಾಡಿರುವ ಕ್ಯಾಸಿನಿ ಸ್ಪೇಸ್ ಕ್ರಾಫ್ಟ್, ಈ ಉಂಗುರಗಳು ಅದಕ್ಕೂ ಬೇಗನೇ ನಾಶವಾಗಬಹುದು ಎಂದು ಅವರು ಹೇಳಿದ್ದಾರೆ.

ಶನಿಯ ಉಂಗುರ ನಾಲ್ಕು ಬಿಲಿಯನ್ ವರ್ಷಗಳಿದ್ದು, ಅದಕ್ಕೆ ಹೋಲಿಸಿದರೆ ಅದರ ಉಂಗುರಗಳ ವಯಸ್ಸು ತೀರಾ ಕಡಿಮೆ.

ವಿಸ್ಮಯಕಾರಿ ಉಂಗುರಗಳು

ವಿಸ್ಮಯಕಾರಿ ಉಂಗುರಗಳು

ಉಳಿದ ಗ್ರಹಗಳಂತೆಯೇ ಶನಿ ಕೂಡ ವಿಸ್ಮಯಕಾರಿ. ಅದರ ಉಂಗುರಗಳಂತೂ ಇಂದಿಗೂ ಬಿಡಿಸಲಾಗದ ಒಗಟು. ಶನಿಗ್ರಹ ಆ ಉಂಗುರಗಳೊಂದಿಗೆ ರೂಪುಗೊಂಡಿತೇ ಅಥವಾ ಗ್ರಹ ಸೃಷ್ಟಿಯಾದ ಬಳಿಕ ಉಂಗುರಗಳು ಸೃಷ್ಟಿಯಾದವೇ ಎನ್ನುವುದು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಶನಿಯ ಉಂಗುರಗಳಿಗೆ 100 ಮಿಲಿಯನ್ ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿಲ್ಲ. ಶನಿಯ ಸಿ ಉಂಗುರವು ಒಂದು ಕಾಲದಲ್ಲಿ ಬಿ ಉಂಗುರದಷ್ಟು ಸಾಂದ್ರತೆ ಹೊಂದಿತ್ತು.

ನಾವೇ ಅದೃಷ್ಟವಂತರು

ಶನಿಯ ಉಂಗುರ ವ್ಯವಸ್ಥೆಯನ್ನು ನೋಡುತ್ತಿರುವುದಕ್ಕೆ ನಾವು ಅದೃಷ್ಟವಂತರು. ಏಕೆಂದರೆ ಈ ಉಂಗುರಗಳು ಅವುಗಳ ಜೀವಿತಾವಧಿಯ ಮಧ್ಯಭಾಗದಲ್ಲಿವೆ. ಒಂದು ವೇಳೆ ಈ ಉಂಗುರಗಳು ತಾತ್ಕಾಲಿಕವಾಗಿದ್ದರೆ, ನಾವು ಗುರು, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳಲ್ಲಿನ ಬೃಹತ್ ಉಂಗುರ ವ್ಯವಸ್ಥೆಯನ್ನು ನೋಡಲು ಸಾಧ್ಯವಾಗಿಲ್ಲ ಎಂದರ್ಥ. ಅವುಗಳ ಸುತ್ತ ಈಗ ಕೇವಲ ತೆಳ್ಳನೆಯ ಉಂಗುರ ಛಾಯೆಗಳಿವೆ ಎಂದು ಓ ಡೊನೊಫ್ ತಿಳಿಸಿದ್ದಾರೆ.

ಗುರುತ್ವ ಶಕ್ತಿ ಬಂದಿದ್ದು ಹೇಗೆ?

ಗುರುತ್ವ ಶಕ್ತಿ ಬಂದಿದ್ದು ಹೇಗೆ?

ಶನಿಯ ಉಂಗುರದ ಬಗ್ಗೆ ಅನೇಕ ಸಂಶೋಧನಾ ವರದಿಗಳು ಪ್ರಕಟವಾಗಿವೆ. ಗ್ರಹವು ತನ್ನ ಸೃಷ್ಟಿಯ ನಂತರದ ವರ್ಷಗಳಲ್ಲಿ ಈ ಉಂಗುರಗಳನ್ನು ಪಡೆದುಕೊಂಡಿದ್ದರೆ, ಉಂಗುರಗಳು ಶನಿಯ ಸುತ್ತಲಿನ ಕಕ್ಷೆಯಲ್ಲಿ ಸುತ್ತುವ ಸಣ್ಣ ಹಿಮಚಂದ್ರಗಳ ಘರ್ಷಣೆಯಿಂದ ಹುಟ್ಟಿಕೊಂಡಿರಬಹುದು. ಅದರ ಸಮೀಪ ಸಾಗಿದ ಕ್ಷುದ್ರಗ್ರಹ ಅಥವಾ ಧೂಮಕೇತುವಿನಿಂದ ಅವು ಗುರುತ್ವಾರ್ಷಕ ಶಕ್ತಿ ಪಡೆದುಕೊಂಡಿರಬಹುದು ಎನ್ನಲಾಗಿದೆ.

English summary
Saturn is losing its iconic rings rapidly are likely to disappear in the next 100 million years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X