• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾ

|

ವಾಷಿಂಗ್ಟನ್, ಜನವರಿ 7: ನಕ್ಷತ್ರ ಪುಂಜಗಳ ನಡುವೆ ಭೂಮಿಯ ಗಾತ್ರದ ಹೊಸ ಜಗತ್ತನ್ನು ತನ್ನ ಗ್ರಹ ಪತ್ತೆದಾರ 'ಟೆಸ್' ಉಪಗ್ರಹ ಪತ್ತೆಹಚ್ಚಿರುವುದಾಗಿ ನಾಸಾ ಹೇಳಿದೆ. ಈ ಜಗತ್ತಿನಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.

ಈ ಗ್ರಹಕ್ಕೆ 'ಟಿಓಐ 700ಡಿ' (TOI 700 d) ಎಂದು ಹೆಸರಿಸಲಾಗಿದ್ದು, ಭೂಮಿಗೆ ಸಮೀಪದಲ್ಲಿ- ಕೇವಲ 100 ಜ್ಯೋತಿರ್ವರ್ಷ ದೂರದಲ್ಲಿದೆ. ಎರಡು ನಕ್ಷತ್ರಗಳೊಂದಿಗೆ ಈ ಜಗತ್ತನ್ನು ಕಂಡುಹಿಡಿಯಲಾಗಿದೆ. ಹವೇಲಿಯ ಹೊನೊಲುಲುದಲ್ಲಿ ನಡೆದ ಅಮೆರಿಕನ್ ಖಗೋಳ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ನಾಸಾದ ಜೆಟ್ ಪ್ರೊಪುಲ್ಷನ್ ಲ್ಯಾಬೋರೇಟರಿ ಈ ವಿವರ ನೀಡಿದೆ.

ಏಲಿಯನ್ ನಮ್ಮ ಜೊತೆಗೆ ಜೀವಿಸುತ್ತಿರಬಹುದು: ಬ್ರಿಟಿಷ್ ಗಗನಯಾತ್ರಿ

'ಟೆಸ್' ಉಪಗ್ರಹವನ್ನು ಸಮೀಪದ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಭೂಮಿ ಗಾತ್ರದ ಗ್ರಹಗಳನ್ನು ಪತ್ತೆಹಚ್ಚುವ ಸಲುವಾಗಿಯೇ ವಿನ್ಯಾಸಗೊಳಿಸಿ ಉಡಾವಣೆ ಮಾಡಲಾಗಿದೆ ಎಂದು ನಾಸಾದ ಖಗೋಳ ಭೌತ ವಿಭಾಗದ ನಿರ್ದೇಶಕ ಪೌಲ್ ಹರ್ಟ್ಸ್ ಹೇಳಿದರು.

ತಪ್ಪು ಕಂಡುಹಿಡಿದ ಹವ್ಯಾಸಿ ಖಗೋಳಾಸಕ್ತರು

ತಪ್ಪು ಕಂಡುಹಿಡಿದ ಹವ್ಯಾಸಿ ಖಗೋಳಾಸಕ್ತರು

'ಟೆಸ್' ಆರಂಭದಲ್ಲಿ ನಕ್ಷತ್ರವನ್ನು ತಪ್ಪಾಗಿ ವರ್ಗೀಕರಿಸಿತ್ತು. ಗ್ರಹವು ಮೊದಲು ಬೃಹತ್ ಗಾತ್ರದಲ್ಲಿ ಮತ್ತು ವಾಸ್ತವವಾಗಿ ಇರುವುದಕ್ಕಿಂತಲೂ ಅಧಿಕ ಉಷ್ಣತೆಯಿಂದ ಕೂಡಿದೆ ಎಂದು ಭಾವಿಸಲಾಗಿತ್ತು. ಆದರೆ ಟೆಸ್ ತಂಡದ ಸದಸ್ಯರ ಜತೆಗೆ ಕೆಲಸ ಮಾಡುತ್ತಿರುವ ಹೈಸ್ಕೂಲು ವಿದ್ಯಾರ್ಥಿ ಅಲ್ಟೊನ್ ಸ್ಪೆನ್ಸರ್ ಸೇರಿದಂತೆ ಅನೇಕ ಹವ್ಯಾಸಿ ಖಗೋಳಜ್ಞಾನಿಗಳು ಈ ಪ್ರಮಾದವನ್ನು ಗುರುತಿಸಿದ್ದರು.

ವಾಸಯೋಗ್ಯ ವಲಯ

ವಾಸಯೋಗ್ಯ ವಲಯ

ನಾವು ನಕ್ಷತ್ರದ ನಿಯತಾಂಕಗಳನ್ನು ಸರಿಪಡಿಸಿದಾಗ ಅದರ ಗ್ರಹಗಳ ಗಾತ್ರವು ಚಿಕ್ಕದಾದವು. ಅವುಗಳಲ್ಲಿ ಒಂದು ನಮ್ಮ ಭೂಮಿಯದ್ದೇ ಗಾತ್ರವನ್ನು ಹೊಂದಿದೆ ಮತ್ತು ವಾಸಯೋಗ್ಯ ವಲಯದಲ್ಲಿದೆ ಎನ್ನುವುದು ಅರಿವಾಯಿತು ಎಂಬುದಾಗಿ ಷಿಕಾಗೋ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿನಿ ಎಮಿಲಿ ಗಿಲ್ಬರ್ಟ್ ಹೇಳಿದ್ದಾರೆ.

ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾ

ಈ ಅನ್ವೇಷಣೆಯನ್ನು ಸ್ಪಿಟ್ಸರ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಖಚಿತಪಡಿಸಿಕೊಳ್ಳಲಾಯಿತು. ಇದಕ್ಕೂ ಮುನ್ನ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಇದೇ ರೀತಿಯ ಕೆಲವು ಗ್ರಹಗಳನ್ನು ಪತ್ತೆಹಚ್ಚಲಾಗಿತ್ತು. ಆದರೆ 2018ರಲ್ಲಿ ಉಡಾವಣೆಯಾದ ಟೆಸ್ ಉಪಗ್ರಹ ಕಂಡುಹಿಡಿದ ಮೊದಲ ಗ್ರಹ ಇದಾಗಿದೆ.

ಒಂದೇ ಕಡೆ ನಿಲ್ಲಬಲ್ಲ ಟೆಸ್

ಒಂದೇ ಕಡೆ ನಿಲ್ಲಬಲ್ಲ ಟೆಸ್

ನಕ್ಷತ್ರಗಳ ಮುಂದೆ ವಸ್ತು ಅಥವಾ ಗ್ರಹ ಹಾದು ಹೋಗುವುದನ್ನು ಪತ್ತೆಹಚ್ಚಲು ಟೆಸ್ ಉಪಗ್ರಹ ಆಕಾಶದಲ್ಲಿ ಒಂದೇ ಸ್ಥಳದಲ್ಲಿ ಸ್ಥಿರವಾಗಿ ನಿಲ್ಲಬಲ್ಲದು. ಇದು ನಕ್ಷತ್ರಗಳ ಪ್ರಕಾಶಮಾನತೆಯಲ್ಲಿ ತಾತ್ಕಾಲಿಕ ಕುಸಿತ ಉಂಟಾಗಲು ಕಾರಣವಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಟೆಸ್, ಗ್ರಹದ ಅಸ್ತಿತ್ವ, ಅದರ ಗಾತ್ರ ಮತ್ತು ಕಕ್ಷೆಯನ್ನು ನಿರ್ಣಯಿಸುತ್ತದೆ.

ನಕ್ಷತ್ರದ ಬಳಿ ಮೂರು ಗ್ರಹಗಳು

ನಕ್ಷತ್ರದ ಬಳಿ ಮೂರು ಗ್ರಹಗಳು

ಟಿಓಐ 700 ನಕ್ಷತ್ರ ಚಿಕ್ಕದಾಗಿದ್ದು, ನಮ್ಮ ಸೂರ್ಯನ ಗಾತ್ರದ ಸುಮಾರು ಶೇ 40ರಷ್ಟಿದೆ. ಮತ್ತು ಅದರ ಅರ್ಧದಷ್ಟು ಮಾತ್ರ ತಾಪ ಹೊಂದಿದೆ. ಟೆಸ್ ಕಕ್ಷೆಯಲ್ಲಿ ಮೂರು ಗ್ರಹಗಳನ್ನು ಪತ್ತೆಹಚ್ಚಿದೆ. ಅವುಗಳಿಗೆ ಟಿಓಐ 700 ಬಿ, ಸಿ ಮತ್ತು ಡಿ ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಡಿ. ಮಾತ್ರ ವಾಸಯೋಗ್ಯ ವಲಯದಲ್ಲಿದೆ. ಇದು ನಕ್ಷತ್ರಕ್ಕೆ ತೀರಾ ಹತ್ತಿರವೂ ಅಲ್ಲದ, ದೂರವೂ ಇಲ್ಲದ ಜಾಗದಲ್ಲಿದೆ. ಈ ತಾಪಮಾನವು ದ್ರವ ನೀರಿನ ಅಸ್ತಿತ್ವ ಇರಲು ಅನುವು ಮಾಡುತ್ತದೆ.

ಬಾಹ್ಯಾಕಾಶ ನಡಿಗೆ: ನಾಸಾದ ಮಹಿಳಾ ಗಗನಯಾನಿಗಳಿಂದ ಇತಿಹಾಸ ಸೃಷ್ಟಿ

ಇದು ಭೂಮಿಗಿಂತ ಅಂದಾಜು ಶೇ 20ರಷ್ಟು ದೊಡ್ಡದಿದೆ ಮತ್ತು ತನ್ನ ನಕ್ಷತ್ರವನ್ನು 37 ದಿನಗಳಲ್ಲಿ ಸುತ್ತುಹಾಕುತ್ತದೆ. ಭೂಮಿಯು ಸೂರ್ಯನಿಂದ ಪಡೆದುಕೊಳ್ಳುವ ಶೇ 86ರಷ್ಟು ಶಕ್ತಿಯನ್ನು ಟಿಓಐ 700 ಡಿ ಪಡೆದುಕೊಳ್ಳುತ್ತದೆ.

English summary
NASA's planet hunter satellite TESS has discovered an Earth sized planet named TOI 700d.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X