• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾನಿಗೆ ಹಾರಲಿದೆ ‘ಕನಸಿನ ಹಕ್ಕಿ’!ಸಕಲ ಸಿದ್ಧತೆ ನಡೆಸಿದೆ ‘ನಾಸಾ’..!

|
Google Oneindia Kannada News

ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎನ್ನುವಂತೆ 'ನಾಸಾ' ತನ್ನ ಪ್ರಯತ್ನಗಳನ್ನ ಬಿಡದೆ ಪಟ್ಟು ಹಾಕಿ ಕೂತಿದೆ. ಇದೇ ಮೊದಲ ಬಾರಿ ಭೂಮಿ ಬಿಟ್ಟು ಬೇರೆ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸಲು ಸಜ್ಜಾಗಿರುವ 'ನಾಸಾ'ಗೆ ಮೇಲಿಂದ ಮೇಲೆ ಕಷ್ಟಗಳು ಎದುರಾಗುತ್ತಿವೆ. ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್ 7 ರಂದು ನಾಸಾ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಮೊದಲ ಹಾರಾಟ ನಡೆಸಬೇಕಿತ್ತು.

ಆದರೆ ಅದು ನಡೆಯಲಿಲ್ಲ, ನಾಸಾ ಹೆಲಿಕಾಪ್ಟರ್ ಹಾರಾಟ ನಡೆಸುವ ದಿನವನ್ನು ಮತ್ತೆ ಮುಂದೂಡಿತ್ತು. ಏಪ್ರಿಲ್ 11ರಂದು ಮತ್ತೊಮ್ಮೆ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧತೆ ನಡೆದಿತ್ತು. ಆದರೆ ಆಗಲೂ ತಾಂತ್ರಿಕ ಸಮಸ್ಯೆಯಿಂದ ಏಪ್ರಿಲ್ 14ಕ್ಕೆ ಟೈಂ ಫಿಕ್ಸ್ ಮಾಡಿತ್ತು ನಾಸಾ. ಕಡೆಗೆ ಏಪ್ರಿಲ್ 14ರ ಡೇಟ್ ಫ್ಲಾಪ್ ಆಗಿ, ಈಗ ಏಪ್ರಿಲ್ 19ರಂದು ಹೆಲಿಕಾಪ್ಟರ್ ಹಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಹೆಲಿಕಾಪ್ಟರ್ ಹೆರಿಗೆ! ಬ್ರಹ್ಮಾಂಡದ ವಿಸ್ಮಯದ ಬಗ್ಗೆ ನಿಮಗೆಷ್ಟು ಗೊತ್ತು?ಹೆಲಿಕಾಪ್ಟರ್ ಹೆರಿಗೆ! ಬ್ರಹ್ಮಾಂಡದ ವಿಸ್ಮಯದ ಬಗ್ಗೆ ನಿಮಗೆಷ್ಟು ಗೊತ್ತು?

ಈಗಾಗಲೇ ಹೆಲಿಕಾಪ್ಟರ್‌ನ ರೆಕ್ಕೆಗಳನ್ನು ಪರಿಶೀಲನೆ ಮಾಡಿರುವ ವಿಜ್ಞಾನಿಗಳು, ಪೆರ್‌ಸೆವೆರನ್ಸ್ ರೋವರ್‌ನ ಸಹಾಯದಿಂದ ಮಂಗಳನ ಮೇಲೆ ಹೆಲಿಕಾಪ್ಟರ್‌ ಹಾರಿಸಲಿದ್ದಾರೆ.

ಏನೋ, ಏನೋ ಆಗಿದೆ..!

ಏನೋ, ಏನೋ ಆಗಿದೆ..!

ಮಂಗಳ ಗ್ರಹದ ಮೇಲೆ ವಾತಾವರಣವೇ ಒಂದು ದೊಡ್ಡ ಸವಾಲು. ಅಲ್ಲಿ ಜೋರಾಗಿ ಬೀಸುವ ಗಾಳಿಯಿಂದ ರಕ್ಷಣೆ ಪಡೆದು ಹಾರಾಟ ನಡೆಸುವುದೇ ನಾಸಾ ಹೆಲಿಕಾಪ್ಟರ್‌ಗೆ ದೊಡ್ಡ ಟಾಸ್ಕ್. ಆದರೆ ಈಗ ಹೆಲಿಕಾಪ್ಟರ್‌ನ ಬ್ಲೇಡ್‌ನಲ್ಲೇ ದೊಡ್ಡ ಸಮಸ್ಯೆ ಎದುರಾಗಿದೆ. ನಾಸಾ ಅಂದುಕೊಂಡಿದ್ದಕ್ಕಿಂತ ಕಡಿಮೆ ವೇಗದಲ್ಲಿ ಹೆಲಿಕಾಪ್ಟರ್‌ನ ವೇಗ ಇದ್ದು, ತುಂಬಾ ಕಡಿಮೆ ಸಮಯದಲ್ಲಿ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿಯೇ ನಾಸಾ ಮತ್ತೆ ಹೆಲಿಕಾಪ್ಟರ್ ಹಾರಾಟವನ್ನು ಮುಂದೂಡಿದೆ. ಏಪ್ರಿಲ್ 19ಕ್ಕೆ ಮತ್ತೊಮ್ಮೆ ಮುಹೂರ್ತ ಫಿಕ್ಸ್ ಆಗಿದೆ.

ಇದು ತಮಾಷೆ ಅಲ್ಲವೇ ಅಲ್ಲ..!

ಇದು ತಮಾಷೆ ಅಲ್ಲವೇ ಅಲ್ಲ..!

ಭೂಮಿ ಹೊರಗೆ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್ ಹಾರುತ್ತಿದೆ. ಹಾಗಂತ ಇದು ತಮಾಷೆಯ ವಿಚಾರ ಅಲ್ಲವೇ ಅಲ್ಲ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ. ಮಂಗಳ ಗ್ರಹದ ಮೇಲೆ ಭೂಮಿ ಮೇಲೆ ಬೀಳುವ ಶೇಕಡಾ 50ರಷ್ಟು ಸೂರ್ಯನ ಬೆಳಕು ಕೂಡ ಬೀಳುವುದಿಲ್ಲ. ಹೀಗಿರುವಾಗ ಹೆಲಿಕಾಪ್ಟರ್ ಸೂರ್ಯ ಹಾಗೂ ಬ್ಯಾಟರಿ ಶಕ್ತಿ ಆಧರಿಸಿ ಹಾರುವುದು ಕಷ್ಟ ಕಷ್ಟ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಹಾರಲು ಸಜ್ಜಾಗಿ ನಿಂತಿದೆ ನಾಸಾ ಸಂಸ್ಥೆಯ ಹೆಲಿಕಾಪ್ಟರ್. ರಾತ್ರಿ ಹೊತ್ತಲ್ಲಿ ಮೈನಸ್ 90 ಡಿಗ್ರಿ, ಎಂದರೆ ಹಿಮಾಲಯಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ನಾಸಾ ಹೆಲಿಕಾಪ್ಟರ್ ಬದುಕಬೇಕಿದೆ.

200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, ‘ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ ‘ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

  ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada
  6 ಚಕ್ರದ ರೋವರ್..!

  6 ಚಕ್ರದ ರೋವರ್..!

  ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ ‘ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

  English summary
  After postpone of several times, NASA’s Mars helicopter will fly on April 19.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X