ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಬಂಡೆ ಸಿಕ್ಕರೆ ಜಗತ್ತನ್ನೇ ಆಳಬಹುದು, ಎಲ್ಲಿದೆ ಗೊತ್ತಾ?

|
Google Oneindia Kannada News

ಅಮೆರಿಕದ 'ನಾಸಾ' ಸಂಸ್ಥೆ ಬಾಹ್ಯಾಕಾಶದಲ್ಲಿ ಒಂದಲ್ಲಾ ಒಂದು ಸಾಹಸ ಮಾಡುತ್ತಲೇ ಇರುತ್ತದೆ. ಇದೀಗ ಕ್ಷುದ್ರಗ್ರಹ ಬಗೆಯಲು ಸಕಲ ಸಿದ್ಧತೆ ನಡೆಸಿದೆ. ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಅಲೆದಾಡುತ್ತಿರುವ '16 ಸೈಕೀ' ಎಂಬ ಕ್ಷುದ್ರಗ್ರಹ ಜಗತ್ತಿನ ಗಮನ ಸೆಳೆಯುತ್ತಿದೆ. ಏಕೆಂದರೆ ಸುಮಾರು 226 ಕಿ.ಮೀ. ವಿಸ್ತಿರ್ಣ ಇರುವ ಈ ಕ್ಷುದ್ರಗ್ರಹದಲ್ಲಿ ಊಹೆಗೂ ಮೀರಿ ಸಂಪತ್ತು ಅಡಗಿದೆ.

ಚಿನ್ನ, ಬೆಳ್ಳಿ, ಕಬ್ಬಿಣ, ಪ್ಲಾಟಿನಂ ಮಾತ್ರ ಅಲ್ಲ ಇನ್ನೂ ಅನೇಕ ಬೆಲೆಬಾಳುವ ಅದಿರು '16 ಸೈಕೀ' ಕ್ಷುದ್ರಗ್ರಹದಲ್ಲಿ ಅಡಗಿದೆ. ಅಕಸ್ಮಾತ್ ಈ ಅದಿರನ್ನ ಭೂಮಿಗೆ ತಂದು ಮಾರಿದರೆ, ಅದರ ಮೊತ್ತ 1 ಕ್ವಾಡ್ರಿಲಿಯನ್‌ ಡಾಲರ್‌ ಆಗುತ್ತದೆ. ಕ್ವಾಡ್ರಿಲಿಯನ್‌ ಅಂದರೆ ಒಂದರ ಮುಂದೆ 15 ಸೊನ್ನೆಗಳು. ಅಂದರೆ ಹತ್ತು ಕೋಟಿ ಕೋಟಿಗೆ ಸಮ. ಈಗ ಲೆಕ್ಕ ಹಾಕಿ ಈ ಕ್ಷುದ್ರಗ್ರಹ ಅದೆಷ್ಟು ಬೆಲೆ ಬಾಳಬಹುದು ಅಂತಾ.

ಎಚ್ಚರ.. ಎಚ್ಚರ.. ಭೂಮಿಗೆ ಕಾದಿದೆ ಅತಿದೊಡ್ಡ ಗಂಡಾಂತರ..!ಎಚ್ಚರ.. ಎಚ್ಚರ.. ಭೂಮಿಗೆ ಕಾದಿದೆ ಅತಿದೊಡ್ಡ ಗಂಡಾಂತರ..!

ಇಂತಹ ಕ್ಷುದ್ರಗ್ರಹದ ಸ್ಯಾಂಪಲ್ ತರೋದಕ್ಕೆ 'ಸೈಕೀ' ಎಂಬ ನೌಕೆ ಸಿದ್ಧವಾಗಿದೆ. ಮುಂದಿನ ವರ್ಷ ಇದು ಲಾಂಚ್ ಆಗಲಿದ್ದು, ಉಡಾವಣೆಗೆ ಮೊದಲು ಹಲವು ವಿಶೇಷತೆಗಳಿಂದ ನಾಸಾದ ಈ 'ಸೈಕೀ' ನೌಕೆ ಜಗತ್ತಿನ ಗಮನ ಸೆಳೆದಿದೆ.

 ‘16 ಸೈಕೀ' ಮೇಲೆ ಹದ್ದಿನ ಕಣ್ಣು..!

‘16 ಸೈಕೀ' ಮೇಲೆ ಹದ್ದಿನ ಕಣ್ಣು..!

ಕ್ಷುದ್ರಗ್ರಹದ ಸ್ಯಾಂಪಲ್ ತರಲು ನೌಕೆ ಉಡಾವಣೆ ಮಾಡಿದರೂ ಅದು ಗುರಿ ತಲುಪಲು ಮತ್ತಷ್ಟು ವರ್ಷ ಬೇಕಾಗಬಹುದು. ಆದರೆ ಅಲ್ಲಿಯವರೆಗೂ '16 ಸೈಕೀ' ಕ್ಷುದ್ರಗ್ರಹ ಕಣ್ತಪ್ಪಿ ಹೋಗದಂತೆ ನಾಸಾ ಸಂಸ್ಥೆ ಕ್ಷಣ ಕ್ಷಣಕ್ಕೂ ಈ ಕ್ಷುದ್ರಗ್ರಹ ಹಾಗೂ ಅದರ ಚಲನವಲನ ಗಮನಿಸುತ್ತಿದೆ. ಮಂಗಳ, ಗುರುಗ್ರಹದ ಮಧ್ಯೆ ಇರುವ ಕ್ಷುದ್ರಗ್ರಹ ಸಾಲಿನಲ್ಲಿ ಇಂತಹ ಸಾವಿರಾರು ಬೆಲೆಬಾಳುವ ಕ್ಷುದ್ರಗ್ರಹಗಳು ಅಡಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಗತ್ತಿನ ಘಟಾನುಘಟಿ ದೇಶಗಳು ಕ್ಷುದ್ರಗ್ರಹ ಸಾಲಿನ ಮೇಲೆ ಕಣ್ಣಿಟ್ಟು ಕೂತಿವೆ. ಹೇಗಾದರೂ ಅಲ್ಲಿ ಗಣಿಗಾರಿಕೆ ನಡೆಸಬೇಕು ಎಂಬ ಉದ್ದೇಶ ಹೊಂದಿವೆ.

2022ರ ಆಗಸ್ಟ್‌ನಲ್ಲಿ ಲಾಂಚ್..!

2022ರ ಆಗಸ್ಟ್‌ನಲ್ಲಿ ಲಾಂಚ್..!

ನಾಸಾ ನೌಕೆ '16 ಸೈಕೀ' ಕ್ಷುದ್ರಗ್ರಹ ತಲುಪುವ ಹಾದಿ ಸುಲಭವಾಗಿಲ್ಲ. ಕ್ಷುದ್ರಗ್ರಹ ತಲುಪಲು ಸಾಕಷ್ಟು ಶ್ರಮ ವಹಿಸಬೇಕಿದೆ. 2022ರ ಆಗಸ್ಟ್‌ನಲ್ಲಿ 'ಸೈಕೀ' ಬಾಹ್ಯಾಕಾಶ ನೌಕೆಯನ್ನು ನಾಸಾ ಲಾಂಚ್ ಮಾಡಲಿದೆ. ಆದರೆ ನೌಕೆ ಗುರಿ ತಲುಪುವುದು 2026ರಲ್ಲಿ. 2023ರಲ್ಲಿ ಮಂಗಳ ಗ್ರಹವನ್ನು 'ಸೈಕೀ' ಬಾಹ್ಯಾಕಾಶ ನೌಕೆ ದಾಟಲಿದ್ದು, ಅಲ್ಲಿಂದ '16 ಸೈಕೀ' ಕ್ಷುದ್ರಗ್ರಹ ತಲುಪಲಿದೆ. ಲ್ಯಾಂಡಿಂಗ್ ತುಂಬಾ ಸೂಕ್ಷ್ಮವಾದ ಪ್ರಕ್ರಿಯೆ. ಏಕೆಂದರೆ ಸ್ವಲ್ಪ ಎಡವಟ್ಟಾದರೂ ಇಷ್ಟುದಿನ ಮಾಡಿದ ಕೆಲಸವಷ್ಟೂ ವ್ಯರ್ಥವಾಗಲಿದೆ. ಹೀಗಾಗಿ ಹೆಜ್ಜೆ ಹೆಜ್ಜೆಗೂ ಕಂಟಕಗಳು 'ಸೈಕೀ' ಬಾಹ್ಯಾಕಾಶ ನೌಕೆಗೆ ಎದುರಾಗಲಿವೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!

ಊಹೆಗೂ ನಿಲುಕದಷ್ಟು ಸಂಪತ್ತು..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

English summary
NASA preparing to reach the metal rich Asteroid called ‘16 Psyche’. The spacecraft called ‘Psyche’ will launch on August of 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X