• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ತೆಯಾಗದ ವಿಕ್ರಂ ಲ್ಯಾಂಡರ್: ಬರಿಗೈಲಿ ಮರಳಿದ ನಾಸಾ ಆರ್ಬಿಟರ್

|

ವಾಷಿಂಗ್ಟನ್, ಅಕ್ಟೋಬರ್ 25: ಚಂದ್ರಯಾನ 2 ಯೋಜನೆಯ ವಿಕ್ರಂ ಲ್ಯಾಂಡರ್‌ಅನ್ನು ಪತ್ತೆ ಹಚ್ಚುವುದಾಗಿ ಇಸ್ರೋಗೆ ಭರವಸೆ ನೀಡಿ ಎರಡನೆಯ ಬಾರಿ ಕಾರ್ಯಾಚರಣೆ ನಡೆಸಿದ್ದ ನಾಸಾದ ಆರ್ಬಿಟರ್ ಮತ್ತೆ ತನ್ನ ಹುಡುಕಾಟದಲ್ಲಿ ವಿಫಲವಾಗಿದೆ.

ತಿಂಗಳ ಆರಂಭದಲ್ಲಿ ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಓ) ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ಇಳಿದ ಸ್ಥಳದ ಚಿತ್ರಗಳನ್ನು ಕ್ಲಿಕ್ಕಿಸಿತ್ತು. ಆದರೆ ಈ ಚಿತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ಲ್ಯಾಂಡರ್ ಇರುವಿಕೆ ಪತ್ತೆಯಾಗಿರಲಿಲ್ಲ. ಲ್ಯಾಂಡರ್ ಕುಳಿಯೊಳಗೆ ಇಳಿದಿರಬಹುದು, ಆ ಭಾಗದಲ್ಲಿ ನೆರಳು ಆವರಿಸಿರಬಹುದು ಅಥವಾ ಆರ್ಬಿಟರ್ ಫೋಟೊ ತೆಗೆದ ಪ್ರದೇಶದ ವ್ಯಾಪ್ತಿಯಾಚೆಗೂ ಅದು ಇಳಿದಿರಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದರು.

ಚಂದ್ರಯಾನ 2: ಇಸ್ರೋಗೆ ಮತ್ತೊಮ್ಮೆ ಭರವಸೆ ನೀಡಿದ ನಾಸಾ

ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ಇಳಿಯುವ ಸಂದರ್ಭದಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು. ಸುಮಾರು 50 ದಿನಗಳಾಗುತ್ತಾ ಬಂದರೂ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕಿಲ್ಲ. ಚಂದ್ರನ ದಕ್ಷಿಣ ದ್ರುವದಲ್ಲಿ ಆರ್ಬಿಟರ್ ನಡೆಸಿದ ಮರು ಹುಡುಕಾಟ ಕೂಡ ಪ್ರಯೋಜನವಾಗಿಲ್ಲ. ವಿಕ್ರಂನ ಸುಳಿವು ದೊರೆತಿಲ್ಲ ಎಂದು ನಾಸಾ ಬುಧವಾರ ತಿಳಿಸಿದೆ.

ಪತ್ತೆಯಾಗದ ಸುಳಿವು

ಪತ್ತೆಯಾಗದ ಸುಳಿವು

'ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ಗುರಿಯನ್ನಾಗಿರಿಸಿಕೊಂಡು ನಾಸಾದ ಎಲ್‌ಆರ್‌ಓ ಅಕ್ಟೋಬರ್ 14ರಂದು ಮತ್ತೆ ಅಲ್ಲಿ ಸುತ್ತಾಡಿ ಚಿತ್ರಗಳನ್ನು ತೆಗೆದಿದೆ. ಆದರೆ ಅದಕ್ಕೆ ಲ್ಯಾಂಡರ್ ಇರುವ ಯಾವುದೇ ಕುರುಹು ಕಂಡುಬಂದಿಲ್ಲ' ಎಂದು ಎಲ್ಆರ್‌ಓ ಯೋಜನೆಯ ವಿಜ್ಞಾನಿ ಎಡ್ವರ್ಡ್ ಪೆಟ್ರೋ ತಿಳಿಸಿದ್ದಾರೆ.

ಚಿತ್ರಗಳ ಪರಿಶೀಲನೆ

ಚಿತ್ರಗಳ ಪರಿಶೀಲನೆ

ಎಲ್‌ಆರ್ಓ ತೆಗೆದ ಚಿತ್ರಗಳನ್ನು ಕ್ಯಾಮೆರಾ ತಂಡ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಲ್ಯಾಂಡಿಂಗ್ ಪ್ರಯತ್ನ ನಡೆದ ಸೆ. 7ರ ಸಂದರ್ಭದ ಚಿತ್ರದ ಅನುಪಾತ ಬಳಸಿಕೊಂಡು ಅ.14ರಂದು ತೆಗೆದ ಆ ಪ್ರದೇಶದ ಚಿತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದಾರೆ. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಚಂದ್ರಯಾನ ಯೋಜನೆ ಬೆರೆಶೀಟ್‌ನ ಸಣ್ಣ ರೊಬೊಟಿಕ್ ಲ್ಯಾಂಡರ್ ಹಾಗೂ ಲೂನಾರ್ ಪ್ರೋಬ್‌ಅನ್ನು ಪತ್ತೆಹಚ್ಚಲು ಬಳಸಲಾಗಿದ್ದ ತಂತ್ರಜ್ಞಾನವನ್ನೇ ಇಲ್ಲಿಯೂ ಬಳಸಲಾಗಿತ್ತು. ಆದರೆ ಅದು ಫಲ ನೀಡಿಲ್ಲ ಎಂದು ಹೇಳಿದ್ದಾರೆ.

ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್

ನೆರಳಿನಲ್ಲಿ ಇರುವ ಸಾಧ್ಯತೆ

ನೆರಳಿನಲ್ಲಿ ಇರುವ ಸಾಧ್ಯತೆ

'ವಿಕ್ರಂ ನೆರಳಿನ ಪ್ರದೇಶದಲ್ಲಿ ಅಥವಾ ನಾವು ಹುಡುಕುತ್ತಿರುವ ಸ್ಥಳದ ಆಚೆ ಇರುವ ಸಾಧ್ಯತೆ ಇದೆ. ಏಕೆಂದರೆ ಹೆಚ್ಚೂಕಡಿಮೆ 70 ಡಿಗ್ರಿ ದಕ್ಷಿಣ ಭಾಗವು ಕಡಿಮೆ ಅಕ್ಷಾಂಶ ಹೊಂದಿದೆ. ಈ ಪ್ರದೇಶವು ಸಂಪೂರ್ಣವಾಗಿ ನೆರಳಿನಿಂದ ಮುಕ್ತವಾಗುವುದಿಲ್ಲ' ಎಂದು ಎನ್ಆರ್ಓದ ಉಪ ಯೋಜನಾ ವಿಜ್ಞಾನಿ ಜಾನ್ ಕೆಲ್ಲರ್ ತಿಳಿಸಿದ್ದಾರೆ.

ಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋ

ಕುಳಿಗಳ ಚಿತ್ರ ತೆಗೆದ ಆರ್ಬಿಟರ್

ಕುಳಿಗಳ ಚಿತ್ರ ತೆಗೆದ ಆರ್ಬಿಟರ್

ಚಂದ್ರಯಾನ 2ರ ಆರ್ಬಿಟರ್ ಚಂದ್ರನ ಮೇಲಿನ 'ಇಂಪ್ಯಾಕ್ಟ್ ಕ್ರೇಟರ್' (ಉಲ್ಕಾಶಿಲೆ ಅಥವಾ ಇತರೆ ವಸ್ತುಗಳ ಕಾರಣದಿಂದ ಉಂಟಾದ ಕುಳಿಗಳು) ಸಮೂಹ ಚಿತ್ರಗಳನ್ನು ಕ್ಲಿಕ್ಕಿಸಿದ್ದು, ಅದನ್ನು ಇಸ್ರೋ ಹಂಚಿಕೊಂಡಿದೆ. ಈ ಚಿತ್ರಗಳನ್ನು ಆರ್ಬಿಟರ್‌ನಲ್ಲಿರುವ ಡುಯಲ್ ಫ್ರೀಕ್ವೆನ್ಸಿ-ಸಿಂಥೆಟಿಕ್ ಅಪರ್ಚರ್ ರೇಡಾರ್ (ಡಿಎಫ್-ಎಸ್‌ಎಆರ್) ತೆಗೆದಿದೆ.

ಚಂದ್ರವು ನಿರಂತರವಾಗಿ ಉಲ್ಕಾಶಿಲೆಗಳ ಸ್ಫೋಟಕ್ಕೆ ತುತ್ತಾಗಿದೆ. ಇದರಿಂದಾಗಿ ಸಣ್ಣ, ಸರಳ, ಬೋಗುಣಿ ಆಕಾರದ, ಸಂಕೀರ್ಣವಾದ ಹಾಗೂ ಬಹು ಸುರುಳಿಯ ಕುಳಿಗಳು ಉಂಟಾಗಿವೆ. ಭೂಮಿಯ ಮೇಲಿ ಕುಳಿಗಳು ಜ್ವಾಲಾಮುಖಿ ಸ್ಫೋಟ ಅಥವಾ ಕುಸಿತದಿಂದ ಉಂಟಾದರೆ, ಇಂಪ್ಯಾಕ್ಟ್ ಕ್ರೇಟರ್‌ಗಳು ಸುತ್ತಮುತ್ತಲಿನ ಪ್ರದೇಶಕ್ಕಿಂತ ತಗ್ಗಿನ ನೆಲದ ಮೇಲೆ ಕುಳಿಗಳನ್ನು ಉಂಟುಮಾಡುತ್ತವೆ ಎಂದು ಇಸ್ರೋ ಹೇಳಿದೆ.

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

English summary
NASA's LRO has found no evidence of Chandrayaan-2 Vikram Lander in its second attempt also on October 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X