• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥೆಯಾಗಿ ಭಾರತ ಮೂಲದ ಭವ್ಯಾ ಲಾಲ್ ನೇಮಕ

|

ವಾಷಿಂಗ್ಟನ್, ಫೆಬ್ರವರಿ 2: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ತನ್ನ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ಅವರನ್ನು ನೇಮಿಸಿದೆ. ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ ಪರಾಮರ್ಶನಾ ತಂಡದ ಸದಸ್ಯರಾಗಿದ್ದ ಭವ್ಯಾ, ಶ್ವೇತಭವನದ ಹಿರಿಯ ಅಧಿಕಾರಿಯಾಗಿದ್ದಾರೆ.

'ಸಂಸ್ಥೆಯ ಹಿರಿಯ ಹುದ್ದೆಗಳಿಗೆ ನಾಸಾ ನೇಮಕಾತಿಗಳನ್ನು ಪ್ರಕಟಿಸಿದೆ. ನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರಾಗಿ ಭವ್ಯಾ ಲಾಲ್ ಆಯ್ಕೆಯಾಗಿದ್ದರೆ, ಫಿಲಿಪ್ ಥಾಂಪ್ಸನ್ ಅವರು ಶ್ವೇತಭವನದ ಸಂಪರ್ಕಾಧಿಕಾರಿಯಾಗಲಿದ್ದಾರೆ. ಶಾಸನ ಕಚೇರಿ ಮತ್ತು ಅಂತರ್ ಸರ್ಕಾರಿ ವ್ಯವಹಾರಗಳ ಸಹ ಆಡಳಿತಾಧಿಕಾರಿಯಾಗಿ ಅಲೈಸಿಯಾ ಬ್ರೌನ್ ಅವರನ್ನು ನೇಮಿಸಲಾಗಿದೆ' ಎಂದು ನಾಸಾ ತಿಳಿಸಿದೆ. ಇದರ ಜತೆಗೆ ಹೊಸ ಆಡಳಿತದೊಂದಿಗೆ ಸಮನ್ವಯಕ್ಕಾಗಿ ಇನ್ನೂ ಅನೇಕ ಹೊಸ ನೇಮಕಾತಿಗಳನ್ನು ನಡೆಸಲಾಗಿದೆ.

ಮಾನವ ಸಹಿತ ಚಂದ್ರಯಾನ ನಾಸಾ ತಂಡದಲ್ಲಿ ಓರ್ವ ಭಾರತೀಯ

ಭವ್ಯಾ ಲಾಲ್ ಅವರು ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು 2005 ರಿಂದ 2020ರವರೆಗೂ ರಕ್ಷಣಾ ವಿಶ್ಲೇಷಣೆ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಸ್ಥೆಯ (ಎಸ್‌ಟಿಪಿಐ) ಸಂಶೋಧನಾ ಸಿಬ್ಬಂದಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಎಸ್‌ಟಿಪಿಐ ಸೇರಿಕೊಳ್ಳುವುದಕ್ಕೂ ಮುನ್ನ ಅವರು ಸಿ-ಎಸ್‌ಟಿಪಿಎಸ್ ಎಲ್ಎಲ್‌ಸಿಯ ಅಧ್ಯಕ್ಷರಾಗಿದ್ದರು. ಇದು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಶೋಧನೆ ಮತ್ತು ಸಲಹಾ ಸಂಸ್ಥೆಯಾಗಿದೆ. ಮಸಾಷುಯೆಟ್ಸ್‌ನ ಜಾಗತಿಕ ನೀತಿ ಸಂಶೋಧನಾ ಸಂಪರ್ಕ ಸಂಸ್ಥೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಅಧ್ಯಯನಗಳ ಕೇಂದ್ರದ ನಿರ್ದೇಶಕಿಯಾಗಿದ್ದರು.

ಏರೋ ಇಂಡಿಯಾ-2021ರಲ್ಲಿ ಭಾರತ ರಕ್ಷಣಾ ಪಾಲುದಾರನೇ ಅಮೆರಿಕಾ

ನ್ಯಾಷನಲ್ ಓಷನಿಕ್ ಆಂಡ್ ಅಟ್ಮೋಸ್ಫೆರಿಕ್ ಅಡ್ಮಿನಿಸ್ಟ್ರೇಷನ್ ಫೆಡರಲ್ ಅಡ್ವೈಸರಿ ಸಮಿತಿಯಲ್ಲಿ ಸತತ ಎರಡು ಅವಧಿ ಕಾರ್ಯನಿರ್ವಹಿಸಿದ್ದರು. ನಾಸಾದ ಅತ್ಯಾಧುನಿಕ ವಿನೂತನ ಪರಿಕಲ್ಪನಾ ಕಾರ್ಯಕ್ರಮ ಮತ್ತು ನಾಸಾ ಸಲಹಾ ಮಂಡಳಿಯ ತಂತ್ರಜ್ಞಾನ, ಆವಿಷ್ಕಾರ ಹಾಗೂ ಎಂಜಿನಿಯರಿಂಗ್ ಸಲಹಾ ಸಮಿತಿಯ ಬಾಹ್ಯ ಮಂಡಳಿ ಸದಸ್ಯೆಯಾಗಿದ್ದರು.

English summary
NASA names Indian American Bhavya Lal as acting chief of staff for the agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X