ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿ

|
Google Oneindia Kannada News

Recommended Video

Chandrayaan 2 : ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿ | Oneindia Kannada

ವಾಷಿಂಗ್ಟನ್, ಸೆಪ್ಟೆಂಬರ್ 19: ಚಂದ್ರನ ಮೇಲೆ ಇಳಿದ ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ಹಾನಿಯಾಗಿದೆಯೇ? ಅಥವಾ ಅದು ಸುರಕ್ಷಿತವಾಗಿದ್ದು, ತನ್ನ ಉದ್ದೇಶಿತ ಕಾರ್ಯಾಚರಣೆ ನಡೆಸುತ್ತಿದೆಯೇ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು, ಚಟುವಟಿಕೆ ನಡೆಸುತ್ತಿದ್ದರೂ ಅದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನು ಎರಡು ದಿನಗಳಲ್ಲಿ ಅದು ಸ್ತಬ್ಧಗೊಳ್ಳಲಿದೆ. ಆ ಮೂಲಕ ಲ್ಯಾಂಡರ್‌ಅನ್ನು ಸಂಪರ್ಕಿಸುವ ಎಲ್ಲ ಪ್ರಯತ್ನಗಳಿಗೂ ಇಸ್ರೋ ತಿಲಾಂಜಲಿ ಇಡಲಿದೆ.

ಉಳಿದಿರುವುದು ಮೂರೇ ದಿನ: ಇಸ್ರೋಗೆ ವಿಕ್ರಂ ಸಿಗದಿದ್ದರೆ ಏನಾಗುತ್ತದೆ?ಉಳಿದಿರುವುದು ಮೂರೇ ದಿನ: ಇಸ್ರೋಗೆ ವಿಕ್ರಂ ಸಿಗದಿದ್ದರೆ ಏನಾಗುತ್ತದೆ?

ಇತ್ತ ಇಸ್ರೋಗೆ ಸಹಾಯ ಮಾಡುವ ಉದ್ದೇಶದಿಂದ ವಿಕ್ರಂ ಲ್ಯಾಂಡರ್ ಇಳಿದಿರುವ ಸ್ಥಳದತ್ತ ಧಾವಿಸಿರುವ ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಓ) ಎರಡು ದಿನಗಳಿಂದ ವಿಕ್ರಮನನ್ನು ಪತ್ತೆ ಹಚ್ಚಲು ಹುಡುಕಾಟ ನಡೆಸಿದೆ. ವಿಕ್ರಂ ಲ್ಯಾಂಡರ್‌ನ ಸ್ಪಷ್ಟವಾದ ಚಿತ್ರಗಳನ್ನು ತೆಗೆಯುವುದು ನಾಸಾದ ಆರ್ಬಿಟರ್ ಉದ್ದೇಶ. ಈ ಫೋಟೊಗಳನ್ನು ಇಸ್ರೋದೊಂದಿಗೆ ಹಂಚಿಕೊಳ್ಳುವ ಮೂಲಕ ಲ್ಯಾಂಡರ್‌ನ ಸ್ಥಿತಿಗತಿಯನ್ನು ಇಸ್ರೋ ಅಧ್ಯಯನ ಮಾಡಲು ಸಾಧ್ಯ ಎನ್ನುವುದು ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಬಯಕೆಯಾಗಿತ್ತು. ಆದರೆ ಎರಡು ದಿನಗಳಿಂದ ನಾಸಾ ನಡೆಸುತ್ತಿರುವ ಪ್ರಯತ್ನ ಕೂಡ ಕೈಗೂಡಿಲ್ಲ.

ಪತ್ತೆ ಕಾರ್ಯಾಚರಣೆ ಅಂತಿಮ ಹಂತಕ್ಕೆ

ಪತ್ತೆ ಕಾರ್ಯಾಚರಣೆ ಅಂತಿಮ ಹಂತಕ್ಕೆ

ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ವಿಕ್ರಂ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ತೆರಳಿರುವ ನಾಸಾದ ಆರ್ಬಿಟರ್ ಕೂಡ ತನ್ನ ಪ್ರಯತ್ನದಲ್ಲಿ ವಿಫಲವಾಗಿದೆ. ಇಸ್ರೋದೊಂದಿಗಿನ ಸಂಪರ್ಕ ಕಡಿದುಕೊಂಡಾಗಿನಿಂದ ಮೌನವಹಿಸಿರುವ ವಿಕ್ರಂ ಲ್ಯಾಂಡರ್ ಹುಡುಕಾಟದ ಪ್ರಯತ್ನಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

ಪ್ರದೇಶದ ಮೇಲೆ ನೆರಳು

ಪ್ರದೇಶದ ಮೇಲೆ ನೆರಳು

ಸೆ. 7ರಂದು ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್‌ಅನ್ನು ಸಾವಧಾನವಾಗಿ ಇಳಿಸುವ ಪ್ರಯತ್ನ ಸಾಧ್ಯವಾಗಿರಲಿಲ್ಲ. ಜತೆಗೆ ಅದು ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡಿದ್ದು, ಇಸ್ರೋಗೆ ಹಿನ್ನಡೆಯುಂಟುಮಾಡಿತ್ತು. ಹತ್ತು ದಿನಗಳ ಬಳಿಕ ನಾಸಾ ತನ್ನ ಆರ್ಬಿಟರ್ ಅನ್ನು ಲ್ಯಾಂಡರ್ ಇಳಿದಿರಬಹುದಾದ ಸ್ಥಳದ ಮೇಲೆ ಕಳುಹಿಸಿತ್ತು. ಎಲ್‌ಆರ್‌ಓದ ಕ್ಯಾಮೆರಾ ಸಾಧನವು ಲ್ಯಾಂಡರ್ ಇಳಿದ ಜಾಗದ ಚಿತ್ರವನ್ನು ಬುಧವಾರ ತೆಗೆಯಬೇಕಾಗಿತ್ತು. ಆದರೆ ಈ ಉದ್ದೇಶ ನೆರವೇರಿಲ್ಲ. ಕಾರಣ, ಈ ಪ್ರದೇಶದ ಮೇಲೆ ಆವರಿಸಿರುವ ದಟ್ಟವಾದ ನೆರಳು.

ಜಾಗದ ಚಿತ್ರ ತೆಗೆದ ಆರ್ಬಿಟರ್

ಜಾಗದ ಚಿತ್ರ ತೆಗೆದ ಆರ್ಬಿಟರ್

ವಿಕ್ರಂ ಲ್ಯಾಂಡರ್ ಇಳಿದ ಸ್ಥಳದ ಚಿತ್ರವನ್ನು ತೆಗೆಯುವಲ್ಲಿ ನಾಸಾದ ಆರ್ಬಿಟರ್ ಯಶಸ್ವಿಯಾಗಿದೆ. ಆದರೆ ಅದರಲ್ಲಿ ವಿಕ್ರಂ ಮಾತ್ರ ಸೆರೆಯಾಗಿಲ್ಲ. ಮುಸ್ಸಂಜೆ ವೇಳೆಯಲ್ಲಿ ಆರ್ಬಿಟರ್ ಈ ಭಾಗದಲ್ಲಿ ಹಾದುಹೋಗಿದ್ದು, ಬೆಳಕಿನ ಕೊರತೆ ಮತ್ತು ಅನಾನುಕೂಲಕರ ವಾತಾವರಣದಿಂದಾಗಿ ಅದು ಉದ್ದೇಶಿತ ಕಾರ್ಯ ನಡೆಸುವುದು ಸಾಧ್ಯವಾಗಿಲ್ಲ. ಆದರೂ ಚಿತ್ರಗಳನ್ನು ಮತ್ತಷ್ಟು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ ಎಂದು ನಾಸಾ ತಿಳಿಸಿದೆ.

ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?

ಸೂರ್ಯ ಕಿರಣಗಳು ಕ್ಷೀಣ

ಸೂರ್ಯ ಕಿರಣಗಳು ಕ್ಷೀಣ

ವಿಕ್ರಂ ಲ್ಯಾಂಡರ್ ಇಳಿದ ಜಾಗವು ಪ್ರಸ್ತುತ ಬೆಳಕಿನ ದಿನಗಳನ್ನು ಕಳೆದು ಎರಡು ವಾರಗಳ 'ಅಮಾವಾಸ್ಯೆ'ಯ ದಿನಗಳತ್ತ ಸಾಗುವ ಪ್ರದೇಶದಲ್ಲಿದೆ. ಸೂರ್ಯನ ಕಿರಣಗಳು ಇಲ್ಲಿಂದ ನಿಧಾನವಾಗಿ ಮರೆಯಾಗುತ್ತಿದ್ದು, ಒಳಭಾಗದಲ್ಲಿ ಮಟ್ಟಸವಾದ ಮೇಲ್ಮೈ ಇದ್ದು, ಅದರ ಸಮೀಪದಲ್ಲಿರುವ ಗುಳಿಗಳಿಂದ ನೆರಳು ಮುಚ್ಚಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಆರ್ಬಿಟರ್‌ನ ಕ್ಯಾಮೆರಾ ಕಣ್ಣುಗಳಿಗೆ ಲ್ಯಾಂಡರ್ ನಿಲುಕುತ್ತಿಲ್ಲ.

ಇಸ್ರೋದಿಂದ ಮಾಹಿತಿ ಸಾಧ್ಯತೆ

ಇಸ್ರೋದಿಂದ ಮಾಹಿತಿ ಸಾಧ್ಯತೆ

ಸೆ. 21ರಂದು ಚಂದ್ರನ ಮೇಲೆ ಕತ್ತಲು ಆವರಿಸಲಿದೆ. ಅಂದಿನಿಂದ ಮತ್ತೆ 14 ದಿನ ಈ ಭಾಗದಲ್ಲಿ ಸೂರ್ಯನ ಕಿರಣಗಳು ಬೀಳುವುದಿಲ್ಲ. ಹೀಗಾಗಿ ಇಸ್ರೋ ಅಂದು ಚಂದ್ರಯಾನದ ಕುರಿತಾದ ಒಟ್ಟಾರೆ ವರದಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಜತೆಗೆ ಚಂದ್ರನ ಮೇಲೆ ಲ್ಯಾಂಡರ್‌ಅನ್ನು ಪತ್ತೆಹಚ್ಚಿ ಆರ್ಬಿಟರ್ ತೆಗೆದಿರುವ ಚಿತ್ರವನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸೆ. 8ರಂದು ಆರ್ಬಿಟರ್ ಲ್ಯಾಂಡರ್‌ನ ಚಿತ್ರ ತೆಗೆದು ಕಳಿಸಿರುವುದಾಗಿ ಇಸ್ರೋ ತಿಳಿಸಿತ್ತು. ಆದರೆ ಅದರ ಬಗ್ಗೆ ವಿವರ ನೀಡಿರಲಿಲ್ಲ.

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

ಮುಂದುವರಿಯಲಿದೆ ಆರ್ಬಿಟರ್ ಕಾರ್ಯಾಚರಣೆ

ಮುಂದುವರಿಯಲಿದೆ ಆರ್ಬಿಟರ್ ಕಾರ್ಯಾಚರಣೆ

ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ವಿಫಲವಾದರೂ ಚಂದ್ರಯಾನ-2ದ ಆರ್ಬಿಟರ್ ತನ್ನ ಕಾರ್ಯಾಚರಣೆ ಮುಂದುವರಿಸಲಿದೆ. ಒಂದರಿಂದ ಏಳು ವರ್ಷಗಳವರೆಗೂ ಆರ್ಬಿಟರ್ ಬದುಕಿರುವ ಸಾಧ್ಯತೆ ಇದೆ. ಚಂದ್ರನಲ್ಲಿಗೆ ತೆರಳುವ ವೇಳೆ ಆರ್ಬಿಟರ್ ಸಾಕಷ್ಟು ಇಂಧನ ಉಳಿಸಿಕೊಂಡಿರುವುದರಿಂದ ಅದು ದೀರ್ಘಾವಧಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವ ನಿರೀಕ್ಷೆಯಿದೆ. ಈ ವರ್ಷಗಳಲ್ಲಿ ಆರ್ಬಿಟರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡುತ್ತಾ ಅದರ ಮೇಲ್ಮೈ ಅಧ್ಯಯನಕ್ಕೆ ಹಲವು ಪ್ರಯೋಗಗಳನ್ನು ನಡೆಸುತ್ತಿದೆ. ಜತೆಗೆ ಅದರ ವಾತಾವರಣವನ್ನು ಅಧ್ಯಯನ ಮಾಡಿ ಘನೀಕೃತ ನೀರಿನ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಕಾರ್ಯ ನಿರ್ವಹಿಸಲಿದೆ.

English summary
NASA's LRO fails to spot ISRO's Chandrayaan 2 Vikram lander due to long shadow in the landing area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X