ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆ: ಮಂಗಳ ಗ್ರಹಕ್ಕೆ ಕಾಲಿಟ್ಟ ನಾಸಾದ ರೋಬೋಟ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 27: ವಿಜ್ಞಾನ ಲೋಕದಲ್ಲಿ ನಾಸಾ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

ಜೀವಿಗಳ ಅಸ್ತಿತ್ವ ಇದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿರುವ ಮಂಗಳ ಗ್ರಹದ ಅಂಗಳಕ್ಕೆ ನಾಸಾ ರವಾನಿಸಿದ ಹೊಸ ರೋಬೋಟ್ ಇಳಿದಿದೆ. ಜತೆಗೆ ಅಲ್ಲಿನ ಚಿತ್ರವೊಂದನ್ನು ಕೂಡ ರವಾನಿಸಿದೆ.

ಅಂಗಾರಕನ ಅಂಗಳಕ್ಕೆ ಕಾಲಿಡುವ ಕೊನೆಯ ಏಳು ನಿಮಿಷಗಳು ಸಿನಿಮೀಯವಾಗಿತ್ತು ಎಂದು ನಾಸಾ ಮೂಲಗಳು ತಿಳಿಸಿವೆ.

Nasa lands InSight robot on Mars to study interior

'ದಿ ಇನ್‌ಸೈಟ್ ಪ್ರೋಬ್' ಹೆಸರಿನ ಈ ಯೋಜನೆಯಲ್ಲಿ ಭೂಮಿಯ ಹೊರತಾಗಿ ಜಗತ್ತಿನಲ್ಲಿ ಈ ರೀತಿ ಆಳವಾಗಿ ಅಧ್ಯಯನಕ್ಕೆ ಒಳಗಾಗುತ್ತಿರುವ ಏಕೈಕ ಗ್ರಹ ಇದು.

ಇನ್‌ಸೈಟ್ ನೋಡಲು ಸಮತಟ್ಟಾಗಿದೆ. ಮೃದುವಾದ ಮತ್ತು ವಿಸ್ತಾರವಾದ ಈ ರೋಬೋಟ್‌ಅನ್ನು ಎಲಿಸಿಯಮ್ ಪ್ಲಾನಿಟಿಯಾ ಎಂದು ಕರೆಯಲಾಗುತ್ತಿದೆ. ಇದು ಮಂಗಳ ಗ್ರಹದ ಮೇಲ್ಮೈನಿಂದ ಆಳಕ್ಕಿಳಿದು ಅದರ ಒಳಭಾಗವನ್ನು ಅಧ್ಯಯನ ಮಾಡಲಿದೆ.

ಕೆಂಪು ಗ್ರಹದ ನೆಲದ ಮೇಲೆ ರೋಬೋಟ್ ಇಳಿಯುತ್ತಿದ್ದಂತೆಯೇ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಯೋಜನೆಯ ನಿಯಂತ್ರಣ ಕೇಂದ್ರವಾದ ಜೆಟ್ ಪ್ರಾಪುಲ್ಷನ್ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

English summary
Nasa has landed a new robot on Mars with aiming to study the planet through its The InSight probe program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X