ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದಲ್ಲೂ 'ಫೇಮಸ್' ಆಗಬೇಕೇ? ನಾಸಾದಲ್ಲಿ ಹೆಸರು ನಮೂದಿಸಿ

|
Google Oneindia Kannada News

ವಾಷಿಂಗ್ಟನ್, ಮೇ 22: 'ಚಂದಿರನ ಮೇಲೆ ನಿನ್ನ ಹೆಸರು ಬರೆಯುವ ಆಸೆ' ಎಂಬ ಸಾಲುಗಳನ್ನು ಗುನುಗಿ ಪ್ರೇಯಸಿಗೆ ಆಸೆ ತೋರಿಸುವ ಪ್ರೇಮಿಗಳಿಗೆ ಅಪೂರ್ವ ಅವಕಾಶವೊಂದು ಲಭಿಸಿದೆ. ಆದರೆ, ಚಂದ್ರನ ಮೇಲೆ ಸದ್ಯಕ್ಕಂತೂ ಸಾಧ್ಯವಿಲ್ಲ. ಬದಲಾಗಿ ಕೆಂಪುಗ್ರಹದ ಮೇಲೆ ನಿಮ್ಮ ಹೆಸರು ಮೂಡಿಸಬಹುದು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಮಾನವರನ್ನು ಕಳಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಗತಗೊಳ್ಳಲು ಇನ್ನೂ ವರ್ಷಗಳು ಬಾಕಿ ಇರುವಂತೆಯೇ ನಾಸಾ, 2020ರ ಕೆಂಪುಗ್ರಹಕ್ಕೆ ಹೋಗಲು ಹೆಸರು ಕಳುಹಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.

ಕುಗ್ಗುತ್ತಿರುವ ಚಂದ್ರನಲ್ಲಿ ಕಂಪನ ಉಂಟಾಗುವ ಸಾಧ್ಯತೆ ಇದೆಯೆಂದ ವಿಜ್ಞಾನಿಗಳು, ನಾಸಾದಿಂದ ಸಾಕ್ಷ್ಯ ಕುಗ್ಗುತ್ತಿರುವ ಚಂದ್ರನಲ್ಲಿ ಕಂಪನ ಉಂಟಾಗುವ ಸಾಧ್ಯತೆ ಇದೆಯೆಂದ ವಿಜ್ಞಾನಿಗಳು, ನಾಸಾದಿಂದ ಸಾಕ್ಷ್ಯ

ಮಾರ್ಸ್ 2020 ರೋವರ್‌ನೊಂದಿಗೆ ಜನರು ನೀಡಿದ ಹೆಸರುಗಳು ಮೈಕ್ರೋಚಿಪ್‌ನಲ್ಲಿ ಬಾಹ್ಯಾಕಾಶಯಾನ ಕೈಗೊಳ್ಳಲಿದ್ದು, ಅದಕ್ಕೆ ಹೆಸರು ಪ್ರದರ್ಶಿಸುವ ಬೋರ್ಡಿಂಗ್ ಪಾಸ್‌ಗಳನ್ನು ನೀಡಲಾಗುತ್ತದೆ.

Nasa invites public to submit names to fly Mars

ಅಂಗಾರಕನ ಅಂಗಳಕ್ಕೆ ಕಾಲಿರಿಸುವ ನಾಸಾದ ಯೋಜನೆಗೆ ತಮ್ಮ ಹೆಸರು ಕಳುಹಿಸುವ ಬಯಕೆಯುಳ್ಳ ಜನರು ಅದರ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದು. ಅವರ ಹೆಸರುಳ್ಳ ಮೈಕ್ರೋಚಿಪ್ ರೋವರ್‌ಗೆ ಅಳವಡಿಕೆಯಾಗಲಿದೆ.

ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು? ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?

ಈ ರೋವರ್ 2020ರ ಜುಲೈನಲ್ಲಿ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಇದು 2021ರ ಫೆಬ್ರವರಿ ತಿಂಗಳಿನಲ್ಲಿ ಅಂಗಾರಕನ ಅಂಗಳಕ್ಕೆ ಇಳಿಯುವ ನಿರೀಕ್ಷೆಯಿದೆ.

ಸುಮಾರು 1,000 ಕೆ.ಜಿ. ತೂಕವಿರುವ ಈ ಐತಿಹಾಸಿಕ ಮಾರ್ಸ್ ಯೋಜನೆ, ಅಲ್ಲಿ ಇದ್ದಿರಬಹುದಾದ ಜೀವಿಗಳ ಆವಾಸ, ಗ್ರಹದ ವಾತಾವರಣ ಮತ್ತು ಪರಿಸರ ಪರಿಸ್ಥಿತಿಗಳಿಗೆ ಹುಡುಕಾಟ ನಡೆಸಲಿದೆ. ಜತೆಗೆ ಅಲ್ಲಿನ ಕೆಲವು ಮಾದರಿಗಳನ್ನು ಭೂಮಿಗೆ ಹೊತ್ತು ಬರಲಿದೆ. ಇದು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆಗೆ ನೆರವಾಗಲಿದೆ.

ಈಗಾಗಲೇ ಎರಡು ಮಿಲಿಯನ್ ಹೆಸರುಗಳು ನಾಸಾಕ್ಕೆ ತಲುಪಿವೆ. ಸೆಪ್ಟೆಂಬರ್ 30ರ ಒಳಗೆ ನಿಮ್ಮ ಹೆಸರನ್ನು ಕಳುಹಿಸಬೇಕು.

English summary
NASA has invited public to submit their names befor September 30 to fly aboard in Mars 2020 rover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X