ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ರೋವರ್ ಅಪಾರ್ಚುನಿಟಿ ನೌಕೆಗೆ ಅಂತಿಮ ವಿದಾಯ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 13: ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ನಾಸಾದ ಮಹತ್ವಾಕಾಂಕ್ಷೆಯ 'ಮಾರ್ಸ್ ರೋವರ್ ಅಪಾರ್ಚುನಿಟಿ' ನೌಕೆ ವಿದಾಯ ಹೇಳುವ ಸಮಯ ಸಮೀಪಿಸಿದೆ.

ಅಂಗಾರಕನ ಅಂಗಳದಲ್ಲಿ ದಶಕಗಳಿಂದ ತುಂಬಿದ್ದ ದೂಳು ತೀವ್ರಗೊಂಡ ಪರಿಣಾಮ ರೋವರ್ ಅಪಾರ್ಚುನಿಟಿ ನೌಕೆಗೆ ಹಾನಿಯಾಗಿದ್ದು, ಸುಮಾರು ಎಂಟು ತಿಂಗಳಿನಿಂದ ಅದು ಚಟುವಟಿಕೆಗಳನ್ನು ನಡೆಸುತ್ತಿಲ್ಲ. ನಾಸಾ ವಿಜ್ಞಾನಿಗಳನ್ನು ನೌಕೆಯನ್ನು ಕೊನೆಯ ಬಾರಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಬಳಿಕ ಈ ಪ್ರಯತ್ನವನ್ನು ಕೈಬಿಡಲಿದ್ದಾರೆ.

ಸೌರ ವ್ಯವಸ್ಥೆಯ ಕಟ್ಟಕಡೆಯ ಗ್ರಹಕಾಯಕ್ಕೆ 'ನ್ಯೂ ಹಾರಿಜಾನ್' ಭೇಟಿ ಸೌರ ವ್ಯವಸ್ಥೆಯ ಕಟ್ಟಕಡೆಯ ಗ್ರಹಕಾಯಕ್ಕೆ 'ನ್ಯೂ ಹಾರಿಜಾನ್' ಭೇಟಿ

ಕಳೆದ ವರ್ಷ ಆಕಾಶವನ್ನು ದಪ್ಪನೆಯ ದೂಳಿನ ಮೋಡ ಆವರಿಸಿತ್ತು. ಇದರಿಂದಾಗಿ ತಿಂಗಳುಗಳ ಕಾಲ ನಾಸಾ ನೌಕೆಯ ಸೋಲಾರ್ ಪ್ಯಾನೆಲ್‌ಗಳಿಗೆ ಸೂರ್ಯನ ಕಿರಣಗಳು ತಲುಪುತ್ತಿರಲಿಲ್ಲ. ಅದನ್ನು ಸರಿಪಡಿಸುವ ನಾಸಾದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಸುಮಾರು ಸಾವಿರಾರು ಬಾರಿ ನಾಸಾ ನೌಕೆಗೆ ರಿಕವರಿ ಕಮಾಂಡ್‌ಗಳನ್ನು ರವಾನಿಸಿದೆ. ಈಗ ಕೊನೆಯ ಬಾರಿ ಆ ಪ್ರಯತ್ನವನ್ನು ಮತ್ತೆ ನಡೆಸಲಿದೆ.

ಬುಧವಾರ ರೋವರ್ ಅಪಾರ್ಚುನಿಟಿಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗದೆ ಇದ್ದರೆ, ಕೆಂಪು ಗ್ರಹಕ್ಕೆ ತೆರಳಿ 15 ವರ್ಷಗಳ ಬಳಿಕ ರೋವರ್ ಮೃತಪಟ್ಟಿದೆ ಎಂದು ನಾಸಾ ಘೋಷಿಸಲಿದೆ.

ಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆಸೌರ ವ್ಯವಸ್ಥೆಯಲ್ಲಿ ಗುಲಾಬಿ ಬಣ್ಣದ ಪುಟಾಣಿ ಗ್ರಹ ಪತ್ತೆ

ಅಪಾರ್ಚುನಿಟಿ ರೋವರ್ ಮಂಗಳ ಗ್ರಹದಲ್ಲಿ ಸಾಧಿಸಿದ ಸಾಧನೆ ಗಮನಾರ್ಹವಾಗಿದೆ. ಮಂಗಳದಲ್ಲಿ ಒಂದು ಕಾಲದಲ್ಲಿ ನೀರಿನ ಹರಿವು ಇತ್ತು ಎಂಬುದು ಸೇರಿದಂತೆ ಅನೇಕ ಮಹತ್ವದ ಸಂಗತಿಗಳನ್ನು ಅಪಾರ್ಚುನಿಟಿ ರೋವರ್ ರವಾನಿಸಿತ್ತು.

ಚಿತ್ರಕೃಪೆ: ನಾಸಾ

ಚೇತರಿಸಿಕೊಳ್ಳದ ರೋವರ್

ಹಲವು ತಿಂಗಳಿನಿಂದ ನೌಕೆ ನಿಯಂತ್ರಣಕಾರರು ರೋವರ್‌ಗೆ ನಿರಂತರವಾಗಿ ಸೂಚನೆಗಳನ್ನು ರವಾನಿಸುವ ಮೂಲಕ ಅದನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಮಂಗಳ ಗ್ರಹದ ಆಕಾಶವು ಸೂರ್ಯ ಕಿರಣಗಳು ರೋವರ್ ಸೋಲಾರ್ ಪ್ಯಾನೆಲ್‌ಗೆ ತಲುಪುವಷ್ಟು ಶುಭ್ರವಾಗಿದೆ. ಆದರೂ ನೌಕೆಯಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಮಂಗಳ ಗ್ರಹದ ವಾತಾವರಣವು ಈಗ ತಂಪಾಗುತ್ತಿದ್ದು, ಮಸುಕಾಗುತ್ತಿದೆ. ಇದರಿಂದ ರೋವರ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ.

2011 ರಲ್ಲಿ ಮೃತಪಟ್ಟಿದ್ದ ಸ್ಪಿರಿಟ್

2011 ರಲ್ಲಿ ಮೃತಪಟ್ಟಿದ್ದ ಸ್ಪಿರಿಟ್

ಮಂಗಳ ಗ್ರಹದಲ್ಲಿ ಅತಿ ಹೆಚ್ಚು ಕಾಲ ಬದುಕಿದ ನೌಕೆ ಅಪಾರ್ಚುನಿಟಿ ರೋವರ್. ಸುಮಾರು 45 ಕಿ.ಮೀಯಷ್ಟು ದೂರ ಈ ಆರು ಚಕ್ರದ ನೌಕೆ ಸುತ್ತಾಟ ನಡೆಸಿತ್ತು. ಇದರ ಅವಳಿ ಎಂದೇ ಗುರುತಿಸಲಾಗಿದ್ದ ಸ್ಪಿರಿಟ್ ನೌಕೆ ಒಂದು ವರ್ಷ ಮರಳಿನಲ್ಲಿ ಸಿಲುಕಿಕೊಂಡು ಸಂವಹನೆಯ ಸಾಮರ್ಥ್ಯ ಕಳೆದುಕೊಂಡಿತ್ತು. 2011 ರಲ್ಲಿ ಇದು 'ಮೃತಪಟ್ಟಿದೆ' ಎಂದು ಪ್ರಕಟಿಸಲಾಗಿತ್ತು.

ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?ಉಂಗುರ ಕಳೆದುಕೊಳ್ಳುತ್ತಿರುವ ಶನಿಯ ಟೈಮೇ ಚೆನ್ನಾಗಿಲ್ಲವಾ?

ಮೂರು ತಿಂಗಳ ಅವಧಿ

ಮೂರು ತಿಂಗಳ ಅವಧಿ

ಅಪಾರ್ಚುನಿಟಿ ರೋವರ್‌ಅನ್ನು 2003ರ ಜುಲೈ 7ರಂದು ಉಡಾವಣೆ ಮಾಡಲಾಗಿತ್ತು. ಇದು 2004ರ ಜನವರಿ 25ರಂದು ಮಂಗಳದ ಮೇಲೆ ಇಳಿದಿತ್ತು. ಮೂರು ವಾರದ ಬಳಿಕ ಇದರ ಅವಳಿ 'ಸ್ಪಿರಿಟ್‌' ಕೂಡ ಗ್ರಹದ ಇನ್ನೊಂದು ಭಾಗಕ್ಕೆ ತಲುಪಿತ್ತು. ಈ ಎರಡೂ ನೌಕೆಗಳನ್ನು ಮೂರು ತಿಂಗಳ ಅವಧಿಗೆ ಮಾತ್ರ ಬಾಳಿಕೆ ಬರುವಂತೆ ವಿನ್ಯಾಸ ಮಾಡಲಾಗಿತ್ತು.

ಸ್ಪಿರಿಟ್ ಮತ್ತು ರೋವರ್ ಸಾಧನೆ

ಸ್ಪಿರಿಟ್ ಮತ್ತು ರೋವರ್ ಸಾಧನೆ

ಸ್ಪಿರಿಟ್ ಆರು ವರ್ಷ ಬದುಕಿತ್ತು. ಅದು 1,24,838 ಕಚ್ಚಾ ಚಿತ್ರಗಳನ್ನು ರವಾನಿಸಿತ್ತು. 4.8 ಮೈಲು ದೂರ ಪ್ರಯಾಣಿಸಿತ್ತು. 30 ಡಿಗ್ರಿಯಷ್ಟು ಆಳದವರೆಗೆ ಪ್ರವೇಶಿಸಿತ್ತು. ಅಪಾರ್ಚುನಿಟಿ ರೋವರ್ ನೌಕೆಯು 14 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿ ಕಳೆದಿದೆ. ಈ ಅವಧಿಯಲ್ಲಿ 2,17,594 ಕಚ್ಚಾ ಚಿತ್ರಗಳನ್ನು ರವಾನಿಸಿದೆ. 28 ಮೈಲು ದೂರ ಪ್ರಯಾಣಿಸಿದೆ. 32 ಡಿಗ್ರಿಯಷ್ಟು ಆಳದವರೆಗೆ ಪ್ರವೇಶಿಸಿ ಬಂದಿತ್ತು.

English summary
NASA will on Tuesday to make a final attempt to contact Mars rover Opportunity before declare it dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X