• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

|

ವಾಷಿಂಗ್ಟನ್, ಅಕ್ಟೋಬರ್ 27: ಈ ಹಿಂದೆ ಅಂದಾಜಿಸಿರುವುದಕ್ಕಿಂತಲೂ ಚಂದ್ರನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇದೆ ಎಂದು ನಾಸಾ ಹೇಳಿದೆ. ಚಂದ್ರನ ಅಂಗಳದಲ್ಲಿ ನೀರು ಮತ್ತು ಜೀವಿಗಳ ಅಸ್ತಿತ್ವದ ಬಗ್ಗೆ ಸಂಶೋಧನೆ ನಡೆಸುತ್ತಿರುವ ನಾಸಾ ಹಾಗೂ ಇತರೆ ಬಾಹ್ಯಾಕಾಶ ಸಂಸ್ಥೆಗಳ ಪ್ರಯತ್ನದಲ್ಲಿ ಮಹತ್ವದ ಪ್ರಗತಿ ಉಂಟಾಗಿದೆ.

ಚಂದ್ರನ ಅನೇಕ ಭಾಗಗಳಲ್ಲಿ ನೆರಳು ಕವಿದಿರುವ ಜಾಗಗಳು, ಸಣ್ಣ ಬಾವಿಗಳು ಹಾಗೂ ಕುಳಿಗಳಲ್ಲಿ ಶೀಥಲೀಕರಣಗೊಂಡ ನೀರು ಇದ್ದು, ಸೂರ್ಯನ ಬಿಸಿಲು ಬೀಳುವ ಮೇಲ್ಮೈನಲ್ಲಿ ಈ ಮುಂಚೆ ಲೆಕ್ಕಾಚಾರ ಹಾಕಿರುವುದಕ್ಕಿಂತಲೂ ಹೆಚ್ಚು ನೀರು ಅಸ್ತಿತ್ವದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್ ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್

ಭವಿಷ್ಯದಲ್ಲಿ ಚಂದ್ರನ ಅಂಗಳದಲ್ಲಿ ಓಡಾಡುವ ಗಗನಯಾತ್ರಿಗಳು ಕುಡಿಯುವ ನೀರು ಹಾಗೂ ರಾಕೆಟ್‌ಗಳ ಇಂಧನಕ್ಕೆ ಚಂದ್ರನಲ್ಲಿಯೇ ಸಂಪನ್ಮೂಲ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಚಂದ್ರನ ಧ್ರುವಗಳಲ್ಲಿ ನೆರಳಿನಿಂದ ಆವೃತವಾದ ಕುಳಿಗಳಲ್ಲಿ ಮಿಲಿಯನ್‌ ಟನ್‌ನಷ್ಟು ಹಿಮ ಇದೆ ಎನ್ನುವುದು ಈ ಹಿಂದಿನ ಅಧ್ಯಯನಗಳಿಂದ ಗೊತ್ತಾಗಿತ್ತು.

ಪ್ರಾರರಂಭದ ಅಧ್ಯಯನಗಳು ಶೇ 20ರಷ್ಟು ನೀರು ಚಂದ್ರನಲ್ಲಿ ಲಭ್ಯವಿದೆ ಎಂದು ಹೇಳಿದ್ದವು. ಕೊಲಾರ್ಡೋ ಪೌಲ್ ಹೇಯ್ನ್ ವಿಶ್ವವಿದ್ಯಾಲಯದ ತಂಡದ ಅಧ್ಯಯನದ ಪ್ರಕಾರ ಚಂದ್ರನಲ್ಲಿ ಹಿಮದ ರೂಪದಲ್ಲಿ 40,000 ಚದರ ಕಿಮೀ ವ್ಯಾಪ್ತಿಗಿಂತಲೂ ಹೆಚ್ಚಿನ ಭಾಗದಲ್ಲಿ ನೀರು ಇದೆ.

ನೇಚರ್ ಆಸ್ಟ್ರಾನೆಮಿ ಪತ್ರಿಕೆಯಲ್ಲಿ ಸೋಮವಾರ ಪ್ರಕಟವಾಗಿರುವ ಎರಡು ಹೊಸ ಅಧ್ಯಯನಗಳು, ಚಂದ್ರನ ಧ್ರುವ ಪ್ರದೇಶಗಳಲ್ಲಿ ಶಾಶ್ವತವಾಗಿ ನೆರಳು ಕವಿದಿರುವಲ್ಲಿ ಸಂಗ್ರಹಗೊಂಡಿರುವ ಹಿಮ ಸೇರಿದಂತೆ ಬಹುತೇಕ ಭಾಗಗಳಲ್ಲಿ ನೀರಿನ ಸೆಲೆಗಳಿವೆ ಎಂದು ತಿಳಿಸಿವೆ. ಸೂರ್ಯನ ಬೆಳಕು ಬೀಳುವ ಸ್ಥಳ ಸೇರಿದಂತೆ ಚಂದ್ರನಲ್ಲಿ ನೀರಿನ ಕಣಗಳು ಇರುವ ಬಗ್ಗೆ ರಾಸಾಯನಿಕ ಪುರಾವೆ ಸಿಕ್ಕಿದೆ.

ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ

ನಾಸಾದ ಸೋಫಿಯಾ ಟೆಲಿಸ್ಕೋಪ್ ಬಳಸಿ ನಡೆಸಿದ ಅಧ್ಯಯನದಲ್ಲಿ ಸೂರ್ಯಕಿರಣಗಳು ಬೀಳುವ ಚಂದ್ರನ ಭಾಗದಲ್ಲಿಯೂ ನೀರು ಇರುವುದು ಮೊದಲ ಬಾರಿಗೆ ಪತ್ತೆಯಾಗಿದೆ. ಗಾಜಿನ ಹಾಸಿಗೆಯಂತಹ ರಚನೆಯಡಿ ಪೆನ್ಸಿಲ್‌ನ ತುದಿಗಿಂತಲೂ ಚಿಕ್ಕದಾಗಿ ಹರಡಿರುವ ಮಣ್ಣಿನಲ್ಲಿ ನೀರು ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

English summary
Nasa's Sofia Telescope discovers hidden pockets of water on the Moon, more on Sunlit surface of Lunar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X