ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್‌ನ್ಯೂಸ್: ಕೊವಿಡ್ 19 ರೋಗಿಗಳಿಗಾಗಿಯೇ ನೂತನ ವೆಂಟಿಲೇಟರ್ ಸಂಶೋಧಿಸಿದ ನಾಸಾ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 24: ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಎಂಜಿನಿಯರ್‌ಗಳು ಕೊವಿಡ್ 19 ರೋಗಿಗಳಿಗಾಗಿಯೇ ಹೈ ಪ್ರೆಷರ್ ವೆಂಟಿಲೇರ್‌ನ್ನು ಸಂಶೋಧಿಸಿದ್ದಾರೆ.

ಈ ವೆಂಟಿಲೇಟರ್‌ನ್ನು ಸಿದ್ಧಪಡಿಸುವುದು ತುಂಬಾ ಸುಲಭವಾಗಿದೆ. ಈ ಡಿವೈಸ್‌ನ್ನು ವೈಟಲ್ ಎಂದು ಕರೆಯಲಾಗುತ್ತದೆ.ಈ ವೈಟಲ್ ಈಗಷ್ಟೇ ಕೊರೊನಾ ಲಕ್ಷಣಗಳು ಕಂಡು ಬಂದಿರುವ ರೋಗಿಗೂ ಕೂಡ ಅಳವಡಿಸಬಹುದಾಗಿದೆ. ದೇಶದಲ್ಲಿ ವೆಂಟಿಲೇಟರ್ ಸಂಖ್ಯೆ ಕಡಿಮೆ ಇರುವ ಕಾರಣ ಇದನ್ನು ಸಿದ್ಧಪಡಿಸಲಾಗಿದೆ.

ನಾಸಾ ಜೆಪಿಎಲ್ ನ ನಿರ್ದೇಶಕ ಮೈಕೆಲ್ ವಾಟ್ಕಿನ್ಸ್ ಅವರು ಮಾತನಾಡಿ 'ನಾವು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಪರಿಣತಿ ಹೊಂದಿದ್ದೇವೆ, ಆದರೆ ವೈದ್ಯಕೀಯ ವಿಚಾರಕ್ಕೆ ಕುರಿತಂತೆ ಅಷ್ಟು ಮಾಹಿತಿ ಇಲ್ಲ.

NASA Develops High Pressure Ventilator To Fight COVID-19

ಆದರೆ ದೇಶ ಇದೀಗ ಕೊರೊನಾ ಮಹಾಮಾರಿಯಿಂದ ನರಳುತ್ತಿದೆ. ಅವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ' ಎಂದರು.ನಾಸಾವು ಈ ಸಾಧನ ಬಳಕೆಗೆ ಎಫ್‌ಡಿಎ ಅನುಮೋದನೆ ಕೇಳುತ್ತಿದೆ. ಈಗ ಕೊರೊನಾ ಬಿಕ್ಕಟ್ಟು ನಿರ್ಮಾಣವಾಗಿದ್ದು ಇದನ್ನು ಹೋಗಲಾಡಿಸಲು ತುರ್ತು ಒಪ್ಪಿಗೆ ಸಾಧ್ಯತೆ ಇದೆ ಎಂದು ಯುಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ವೈಟಲ್ ವೆಂಟಿಲೇಟರ್ ಅಮೆರಿಕ ಹಾಗೂ ಇಡೀ ವಿಶ್ವದಲ್ಲೇ ಕೊರೊನಾದಿಂದ ಕೊವಿಡ್ 19ನಿಂದ ಬಳಲುತ್ತಿರುವ ರೋಗಿಗಳಿಗೆ ಇದು ಸಹಕಾರಿಯಾಗಲಿದೆ.ವೈಟಲ್ ವೆಂಟಿಲೇಟರ್ ಸಾಮಾನ್ಯ ವೆಂಟಿಲೇಟರ್‌ನಂತೆ ಕೆಲಸ ಮಾಡುತ್ತದೆ. ಸಾಕಷ್ಟು ವೇಗವಾಗಿ ಇದರ ತಯಾರಿಕೆ ಸಾಧ್ಯ.

ರೋಗವು ಮತ್ತಷ್ಟು ಹೆಚ್ಚಾಗುವ ಮುಂಚೆಯೇ ಕಡಿಮೆ ಮಾಡುವುದು ಈ ವೆಂಟಿಲೇಟರ್ ಕೆಲಸವಾಗಿದೆ.

English summary
NASA engineers have developed a new, easy-to-build high-pressure ventilator tailored specifically to treat COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X