ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷುದ್ರಗ್ರಹ ಪಥ ಬದಲಿಸಲು ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲಿದೆಯೇ ನಾಸಾ?

|
Google Oneindia Kannada News

ವಾಷಿಂಗ್ಟನ್, ನವೆಂಬರ್ 24: ಕ್ಷುದ್ರಗ್ರಹದ ಪಥ ಬದಲಿಸಲು ನಾಸಾವು ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ದಿನದಿಂದ ದಿನಕ್ಕೆ ಖಗೋಳ ವಿಜ್ಞಾನ ಕ್ಷೇತ್ರ ಎಂಬುದು ಯಾರ ಊಹೆಗೂ ನಿಲುಕದ್ದಾಗಿದೆ, ಇತ್ತೀಚೆಗಷ್ಟೇ ಚಂದ್ರನನ್ನು ಸುತ್ತುತ್ತಾ ಶೋಧವನ್ನು ನಡೆಸುತ್ತಿರುವ ಬಾಹ್ಯಾಕಾಶ ನೌಕೆಗಳು ಒಂದನ್ನೊಂದು ಡಿಕ್ಕಿ ಹೊಡೆಯುವುದನ್ನು ಇಸ್ರೋ ತಪ್ಪಿಸಿತ್ತು. ಇಸ್ರೋದ ಚಂದ್ರಯಾನ- 2 ಆರ್ಬಿಟರ್‌ ಮತ್ತು ನಾಸಾದ ಚಂದ್ರ ಸ್ಥಳಾನ್ವೇಷಣಾ ಆರ್ಬಿಟರ್‌ಗಳ ಕಕ್ಷೆ ಸೇರುವ ಜಾಗದಲ್ಲಿ ಎರಡು ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಅದನ್ನು ತಪ್ಪಿಸಲಾಗಿತ್ತು.

ನಮ್ಮ ಸೌರ ಮಂಡಲದ ರಚನೆಯ ಸಂದರ್ಭದಲ್ಲಿ ಗ್ರಹಕಾಯಗಳಾಗದೇ ಉಳಿದ ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳಿಂದ ನಮ್ಮ ಭೂಮಿಗೆ ನಿರಂತರ ಬೆದರಿಕೆ ಇದೆ.

Nasa Dart Spacecraft: Mission To Smack Dimorphos Asteroid Launches

ನಾವು ವಾಸಿಸುವ ಬ್ರಹ್ಮಾಂಡವು ತುಂಬಾ ದೊಡ್ಡದು ಮತ್ತು ದೈತ್ಯವಾಗಿದ್ದು, ನಮ್ಮ ಸೌರವ್ಯೂಹದೊಳಗೆ, ಸಾವಿರಾರು ಕ್ಷುದ್ರಗ್ರಹಗಳು ಮತ್ತು ಉಲ್ಕೆಗಳು ಬಾಹ್ಯಾಕಾಶದಲ್ಲಿವೆ.

ಕೆಲವೊಮ್ಮೆ, ಈ ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಬಹಳ ಹತ್ತಿರ ಬರುತ್ತವೆ ಮತ್ತು ಕೆಟ್ಟ ಸಂದರ್ಭಗಳಲ್ಲಿ ಅವು ಭೂಮಿಯ ಮೇಲೆ ಕುಸಿಯುತ್ತವೆ.

ಭೂಮಿಯ ಕಡೆ ಬರುವ ಕ್ಷುದ್ರಗ್ರಹ ಚಿಕ್ಕದಾಗಿದ್ದರೆ, ಗ್ರಹದ ವಾತಾವರಣಕ್ಕೆ ಬಂದ ತಕ್ಷಣ ಭಸ್ಮವಾಗುತ್ತವೆ. ಆದರೆ, ದೈತ್ಯ ಬಾಹ್ಯಾಕಾಶ ಕಾಯಗಳು ಸುಡುವುದಿಲ್ಲ ಮತ್ತು ಇವು ಒಂದು ಸಾವಿರ ಪರಮಾಣು ಬಾಂಬ್‌ಗಳ ಸ್ಫೋಟಕ್ಕೆ ಸಮನಾಗಿರಬಹುದಾದ ಬಲ ಹೊಂದಿರುತ್ತವೆ. ಇಂತಹ ಕ್ಷುದ್ರಗಳು ಭೂಮಿಯ ಮೇಲೆ ಬಿದ್ದರೆ ಅರ್ಧಗ್ರಹವೇ ನಾಶವಾಗಲಿದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.

ನಾಸಾದ ಕ್ಷುದ್ರಗ್ರಹ ಟ್ರ್ಯಾಕಿಂಗ್ ವ್ಯವಸ್ಥೆ ಈಗಾಗಲೇ ಭೂಮಿಯ ಸಮೀಪವಿರುವ ವಸ್ತುಗಳು ಎಂದು ವರ್ಗೀಕರಿಸಬಹುದಾದ ನೂರಾರು ಕ್ಷುದ್ರಗ್ರಹಗಳನ್ನು ಪತ್ತೆ ಮಾಡಿದೆ. ನಿಕಟ ಹಾರಾಟದ ಸಮಯವನ್ನು ಗಮನಿಸಿದರೆ, ಈ ಕ್ಷುದ್ರಗ್ರಹಗಳು ನಮ್ಮಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿವೆ ಮತ್ತು ಸಂಭವನೀಯ ಪರಿಣಾಮದ ಸಾಧ್ಯತೆ ಬಹಳ ಕಡಿಮೆಯಾಗಿದೆ.

ಆದರೆ, ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನು ಹೆಚ್ಚಿಸುವ ಹಲವಾರು ಅಂಶಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಭವಿಷ್ಯದಲ್ಲಿ ದೊಡ್ಡ ದಾಳಿಯ ಸುಳಿವನ್ನು ನೀಡಿದ್ದಾರೆ.

ಕ್ಷುದ್ರಗ್ರಹಗಳ ಭೂಮಿ ಮೇಲಿನ ದಾಳಿಗೆ ಪ್ರಮುಖ ಕಾರಣೀಕರ್ತ ಅಂಶವೆಂದರೆ ಗುರುತ್ವಾಕರ್ಷಣೆಯ ಕೀಹೋಲ್. ತಜ್ಞರ ಪ್ರಕಾರ, ಗುರುತ್ವಾಕರ್ಷಣೆಯ ಕೀಹೋಲ್ ಬಾಹ್ಯಾಕಾಶದಲ್ಲಿ ಒಂದು ಪ್ರದೇಶವಾಗಿದ್ದು, ಹತ್ತಿರದ ಗ್ರಹಗಳ ಗುರುತ್ವಾಕರ್ಷಣೆಯಿಂದ ಕ್ಷುದ್ರಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಒಂದು ಕ್ಷುದ್ರಗ್ರಹ ಭೂಮಿಯ ಗುರುತ್ವಾಕರ್ಷಣೆಯ ಕೀಹೋಲ್‌ಗೆ ಪ್ರವೇಶಿಸಿದ ನಂತರ ಗ್ರಹದ ಮೇಲ್ಮೈಗೆ ಸೆಳೆಯಲಾಗುತ್ತದೆ ಮತ್ತು ಇದರ ಪ್ರಭಾವ ಕೂಡ ತುಂಬಾ ಹೆಚ್ಚಾಗುತ್ತವೆ.

ಇದೇ ಮೊದಲ ಬಾರಿಗೆ ನಾಸಾ ಕ್ಷುದ್ರಗ್ರಹವೊಂದಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸುವ ಸಾಹಸಕ್ಕೆ ಮುಂದಾಗಿದೆ. ಡಿಡಿಮೋಸ್ ಎಂದು ಕರೆಯಲ್ಪಡುವ ಜೋಡಿ ಕ್ಷುದ್ರಗ್ರಹಕ್ಕೆ DART(ಡಬಲ್ ಆಸ್ಟ್ರಾಯ್ಡ್ ರಿಡೈರೆಕ್ಷನ್ ಟೆಸ್ಟ್ ) ಎಂಬ ಹೆಸರಿನ ಬಾಹ್ಯಾಕಾಶ ನೌಕೆಯನ್ನು ನಾಸಾ ಡಿಕ್ಕಿ ಹೊಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಬಾಹ್ಯಾಕಾಶ ನೆಲೆಯಿಂದ, ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ DART ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಈ ನೌಕೆ ಗಂಟೆಗೆ 24,000 ಕಿ.ಮೀ ವೇಗದಲ್ಲಿ ಡಿಡಿಮೋಸ್ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯಲಿದೆ.

ಡಿಡಿಮೋಸ್ ಜೋಡಿ ಕ್ಷುದ್ರಗ್ರಹಗಳಲ್ಲಿ ಎರಡು ಕ್ಷುದ್ರಗ್ರಹಗಳಿದ್ದು, ಒಂದು 163 ಮೀಟರ್ ಸುತ್ತಳತೆಯ ಚಿಕ್ಕ ಕ್ಷುದ್ರಗ್ರಹವು 780 ಮೀಟರ್ ಸುತ್ತಳತೆಯ ದೊಡ್ಡ ಕ್ಷುದ್ರಗ್ರಹವನ್ನು ಸುತ್ತುತ್ತಿದೆ. ಈ ಜೋಡಿ ಕ್ಷುದ್ರಗ್ರಹ ನಿಯರ್ ಅರ್ಥ್ ಆಬ್ಜೆಕ್ಟ್ ಪಟ್ಟಿಯಲ್ಲಿದ್ದು, ಇದಕ್ಕೆ DART ನೌಕೆಯನ್ನು ಡಿಕ್ಕಿ ಹೊಡೆಸಿ ಈ ಜೋಡಿ ಕ್ಷುದ್ರಗ್ರಹದ ಪಥ ಬದಲಿಸುವ ಪ್ರಯತ್ನಕ್ಕೆ ನಾಸಾ ಕೈ ಹಾಕಿದೆ.

1,210 ಪೌಂಡ್‌ಗಳಷ್ಟು ತೂಕವಿರುವ DART ಬಾಹ್ಯಾಕಾಶ ನೌಕೆ, ಡಿಡಿಮೋಸ್ ಕ್ಷುದ್ರಗ್ರಹವನ್ನು ನಾಶಗೊಳಿಸುವುದಿಲ್ಲ. ಬದಲಿಗೆ ಅದರ ಪಥವನ್ನು ಬದಲಿಸಲಿದೆ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

English summary
Nasa's Dart mission wants to see how difficult it would be to stop a huge space rock from colliding with Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X